Crime News| ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಗೆ ವಾಮಾಚಾರ ಮಾಡಿ ನರಬಲಿಗೆ ಯತ್ನ; ಅದೃಷ್ಟವಶಾತ್ ತಪ್ಪಿದ ಅನಾಹುತ

ಲಾಕ್‌ಡೌನ್ ವೇಳೆಯಲ್ಲಿ ವಾಮಾಚಾರಿಗಳ ವಾಮ ಕುತಂತ್ರಕ್ಕೆ ಒಂದು ನರಬಲಿ ಸಿದ್ದವಾಗುತ್ತಿತ್ತು ಎಂದರೆ ಇಂತಹ ಹೀನ ಕೃತ್ಯ ಬೇರೊಂದಿಲ್ಲ ಎನ್ನಬಹುದು. ಸದ್ಯಕ್ಕೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ವಾಮಾಚಾರಕ್ಕೆ ಕಾರಣ ಏನು ಎಂಬ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು (ಜೂನ್ 20); ಜನರ ನಂಬಿಕೆಗಳನ್ನ ಮೂಡನಂಬಿಕೆಗಳನ್ನಾಗಿ ಪರಿವರ್ತಿಸಿ ಮಾಟಗಾರರು ಆಟ ಆಡೋದು ಇದು ಮೊದಲೇನಲ್ಲ, ಇಲ್ಲೊಂದು ಇಂತಹದ್ದೆ ಘಟನೆಯಲ್ಲಿ ಸ್ವಲ್ಪ ಯಾಮಾರಿದ್ರು ಇಡೀ ಮನುಕುಲವೇ ತಲೆ ತಗ್ಗಿಸಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು ಎನ್ನಲಾಗುತ್ತಿದೆ. ಅಷ್ಟಕ್ಕು ಅಲ್ಲಿ ನಡೆದದ್ದಾದರೂ ಏನು ಅಂತೀರಾ, ಈ‌ ಸ್ಟೋರಿ ನೋಡಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗಾಂಧಿಗ್ರಾಮ‌ದಲ್ಲಿ ಇದೇ ತಿಂಗಳ 14 ನೇ ತಾರೀಕಿನಂದು ಗ್ರಾಮದ 10 ವರ್ಷದ ಬಾಲಕಿ‌ಯೊಬ್ಬಳ್ಳನ್ನ ದುಷ್ಕರ್ಮಿಗಳು ವಾಮಾಚಾರಕ್ಕೆ ಬಳೆದಿಕೊಂಡಿದ್ದರು ಎನ್ನಲಾಗಿದೆ.

  10 ವರ್ಷದ ಬಾಲಕಿಗೆ ಹರಿಶಿನ ಕುಂಕುಮ ಇಟ್ಟು, ನಿಂಬೆ ಹಣ್ಣಿನ‌ಹಾರ ಹಾಕಿ ನರಬಲಿಗೆ ಸಿದ್ದಗೊಳಿಸುತ್ತಿದ್ದರು ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಆರೋಪಿಗಳ ಕುಟುಂಬಸ್ಥರೊಬ್ಬರಿಗೆ ಜನ್ಮ‌ ನಕ್ಷತ್ರದಲ್ಲಿ ದೋಷವಿದ್ದು, ಜನಿಸಿದ ಮೂರು ವರ್ಷದೊಳಗೆ ಋತುಮತಿಯಾಗುವ ಸನಿಹದಲ್ಲಿರುವ ಬಾಲಕಿಯನ್ನ ನರ ಬಲಿ ಕೊಡಬೇಕು ಎಂದು ಮಂತ್ರವಾದಿ ಒಬ್ಬ ಹೇಳಿದ್ದನಂತೆ, ದೋಷ ನಿವಾರಣೆಗೆ ನರಬಲಿಗೆ ಸಿದ್ದತೆ ನಡೆಸಲಾಗುತ್ತಿತ್ತು ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ.‌

  ಇನ್ನೂ ಇದೇ ಗ್ರಾಮದ ನಿವಾಸಿಗಳಾದ ಸುರೇಶ, ಹನುಮಂತಯ್ಯ, ಶಿವರಾಜು, ರವಿ, ಸಾವಿತ್ರಮ್ಮ, ಸೌಮ್ಯ ಸೇರಿದಂತೆ ಪೂಜಾರಿ ಪ್ರಕಾಶ್ ಜಮೀನಿನಲ್ಲಿನ ದೇವಾಲಯದಲ್ಲಿ ವಾಮಾಚಾರ ಮಾಡಿ ನರಬಲಿಗೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಅಂದು ಮನೆ ಬಳಿ ಆಟ ಆಡುತ್ತಿದ್ದ ಮಗುವನ್ನು ಪುಸಲಾಯಿಸಿ, ದೇವಸ್ಥಾನದ ಬಳಿ ಪೂಜೆ ಮಾಡುತ್ತಿದ್ದಾರೆ, ಪ್ರಸಾದ ತಗೊಂಡು ಹೋಗು ಎಂದು ಮಗುವನ್ನ ಕರೆದುಕೊಂಡು ಆರೋಪಿಗಳು ಹೋಗಿದ್ದು, ಮಗು ಎಷ್ಟಿತ್ತಾದರೂ ಮನೆಗೆ ಬರದ ಹಿನ್ನೆಲೆ ಮಗುವನ್ನ ಅಜ್ಜಿ ಹುಡುಕಿಕೊಂಡು ಹೋಗಿದ್ದಾರೆ.

  ಇದನ್ನೂ ಓದಿ: Indian Economi| ಆರ್ಥಿಕತೆಯನ್ನು ಕಾಡುತ್ತಿದೆ ಕೊರೋನಾ, ಬಡವರ ತವರಾಯಿತೇ ಭಾರತ? ಇಲ್ಲಿದೆ ಜಿಡಿಪಿ ಕುಸಿತದ ವಾಸ್ತವ ಚಿತ್ರಣ!

  ಅನುಮಾನಗೊಂಡು ದೇವಾಲಯದ ಬಳಿ ತೆರಳಿದ ವಿಷಯವನ್ನ ಊರಿನ ಕೆಲವರಿಗೆ ತಿಳಿಸಿದಾಗ ಸ್ಥಳೀಯರು ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ದೌಡಾಯಿಸುದ್ದು, ವಾಮಾಚಾರ ಮಾಡುತ್ತಿದ್ದವರು ಪೊಲೀಸರನ್ನ ನೋಡಿ ಪರಾರಿಗೆ ಯತ್ನಿಸಿದರು ಆದ್ರೆ ಐದು ಜನ ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕಿದ್ದು ಪೂಜಾರಿ ಪ್ರಕಾಶ್ ಸ್ಥಳದಿಂದ ಕಾಲ್ಕಿತ್ತಿದ್ದ. ಪೂಜೆ ಬಳಿಕೆ ಬಾಲಕಿಯನ್ನ ನರಬಲಿಗೆ ಸಿದ್ದತೆ ನಡೆಸುತ್ತಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Explained| ಪ್ರಧಾನಿ ಮೋದಿ ಅವಧಿಯಲ್ಲಾದ ಐದು ಮಹಾ ಪ್ರಮಾದಗಳು; ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಬಿಜೆಪಿ!

  ಒಟ್ಟಾರೆ ಲಾಕ್‌ಡೌನ್ ವೇಳೆಯಲ್ಲಿ ವಾಮಾಚಾರಿಗಳ ವಾಮ ಕುತಂತ್ರಕ್ಕೆ ಒಂದು ನರಬಲಿ ಸಿದ್ದವಾಗುತ್ತಿತ್ತು ಎಂದರೆ ಇಂತಹ ಹೀನ ಕೃತ್ಯ ಬೇರೊಂದಿಲ್ಲ ಎನ್ನಬಹುದು. ಸದ್ಯಕ್ಕೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ವಾಮಾಚಾರಕ್ಕೆ ಕಾರಣ ಏನು ಎಂಬ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: