ರಾಜಧಾನಿಯಲ್ಲಿ ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ನಿನ್ನೆ ರಾತ್ರಿ ರಿಯಾಲಿಟಿ ಚೆಕ್ ಮಾಡಿದ ಡಿಸಿಪಿ​; ಆಮೆಲೇನಾಯ್ತು?

ರಾತ್ರಿ ಪಾಳಿಯ ಹೊಯ್ಸಳ ಗಸ್ತು ವಾಹನ ನಿಜಕ್ಕೂ ಮಹಿಳೆಯರಿಗೆ ಸೇಫಾ? ಕರೆ ಮಾಡಿದ ತಕ್ಷಣ ಇವರು ಮಹಿಳೆಯರು ಇರುವ ಸ್ಥಳಕ್ಕೆ ಬಂದು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುತ್ತಾರ? ಎಂಬ ಕುರಿತು ರಿಯಾಲಿಟಿ ಚೆಕ್​ ಮಾಡಲು ಸ್ವತಃ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್​ ಅವರೇ ಶನಿವಾರ ರಾತ್ರಿ ಫೀಲ್ಡ್​ಗೆ ಇಳಿದಿದ್ದರು.

MAshok Kumar | news18-kannada
Updated:December 8, 2019, 1:10 PM IST
ರಾಜಧಾನಿಯಲ್ಲಿ ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ನಿನ್ನೆ ರಾತ್ರಿ ರಿಯಾಲಿಟಿ ಚೆಕ್ ಮಾಡಿದ ಡಿಸಿಪಿ​; ಆಮೆಲೇನಾಯ್ತು?
ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್.
  • Share this:
ಬೆಂಗಳೂರು (ಡಿಸೆಂಬರ್​ 08); ಹೈದರಾಬಾದ್​ನಲ್ಲಿ ಪಶುವೈದ್ಯೆಯ ಮೇಲೆ ನಾಲ್ಕು ಜನ ಕಾಮುಕರ ಅತ್ಯಾಚಾರ ನಡೆಸಿ ಕೊಲೆ ಮಾಡಿದ ನಂತರ ಇಡೀ ದೇಶ ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಕಾಳಜಿ ವಹಿಸುತ್ತಿದೆ. ಎಲ್ಲಾ ರಾಜ್ಯಗಳಲ್ಲೂ ಪೊಲೀಸ್​ ಇಲಾಖೆ ಮಹಿಳೆಯರ ಸುರಕ್ಷತೆಗೆ ನಾನಾ ಯೋಜನೆಗಳನ್ನು ರೂಪಿಸಿವೆ. ಇದಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಪೊಲೀಸರು ಹೊರತಲ್ಲ.

ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿ ನಗರ ಪೊಲೀಸರು "ರಾತ್ರಿ 10 ಗಂಟೆಯ ನಂತರ ಮನೆಗೆ ತೆರಳಲು ವಾಹನ ಇಲ್ಲದೆ, ಅಥವಾ ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯರು ಪೊಲೀಸ್ ತರ್ತು ಸೇವೆ 100 ಕ್ಕೆ ಕರೆ ಮಾಡಿದರೆ ಹೊಯ್ಸಳ ಗಸ್ತು ವಾಹನದಲ್ಲಿ ಮನೆಗೆ ತಲುಪಿಸಲಾಗುವುದು" ಎಂಬ ಸಂದೇಶವನ್ನು ರವಾನಿಸುತ್ತಿದೆ. ಅಲ್ಲದೆ, ಈ ಕುರಿತ ಸುದ್ದಿಗಳು ಸಹ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರವಾಗಿವೆ.

ಆದರೆ, ರಾತ್ರಿ ಪಾಳಿಯ ಹೊಯ್ಸಳ ಗಸ್ತು ವಾಹನ ನಿಜಕ್ಕೂ ಮಹಿಳೆಯರಿಗೆ ಸೇಫಾ? ಕರೆ ಮಾಡಿದ ತಕ್ಷಣ ಇವರು ಮಹಿಳೆಯರು ಇರುವ ಸ್ಥಳಕ್ಕೆ ಬಂದು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುತ್ತಾರ? ಎಂಬ ಕುರಿತು ರಿಯಾಲಿಟಿ ಚೆಕ್​ ಮಾಡಲು ಸ್ವತಃ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್​ ಅವರೇ ಶನಿವಾರ ರಾತ್ರಿ ಫೀಲ್ಡ್​ಗೆ ಇಳಿದಿದ್ದರು.

ಡಿಸಿಪಿಯಿಂದ ರಿಯಾಲಿಟಿ ಚೆಕ್; ಆಮೆಲೇನಾಯ್ತು? 

ಶನಿವಾರ ರಾತ್ರಿ 1.45 ಗಂಟೆಗೆ ರಿಯಾಲಿಟಿ ಚೆಕ್ ಮಾಡುವ ಸಲುವಾಗಿ ಹೊಯ್ಸಳ ವಾಹನದಲ್ಲಿ ಏರಿ ರೌಂಡ್ಸ್​ ಹೊರಟಿದ್ದ ಡಿಸಿಪಿ ಚೇತನ್ ಸಿಂಗ್ ನೇರವಾಗಿ ಯುಬಿ ಸಿಟಿಯ ಬಳಿ ಆಗಮಿಸಿದ್ದರು.

ಈ ವೇಳೆ ಯುಬಿ ಸಿಟಿಗೆ ತಡರಾತ್ರಿ ಯುವತಿಯೊಬ್ಬಳು ಸ್ನೇಹಿತರ ಜೊತೆಗೆ ಊಟಕ್ಕೆ ಬಂದಿದ್ದು ಮನೆಗೆ ಹೊರಡಲು ರಸ್ತೆ ಬಳಿ ನಿಂತಿರುವುದು ಅವರಿಗೆ ಕಾಣಿಸಿದೆ. ಕೂಡಲೆ ಅವರನ್ನು ವಿಚಾರಿಸಿದ ಡಿಸಿಪಿ ನಿಮಗೆ ಏನಾದರೂ ಸಹಾಯ ಬೇಕಿದ್ದಲ್ಲಿ ಪೊಲೀಸ್ ತುರ್ತು ಸಂಖ್ಯೆ 100ಕ್ಕೆ ಕರೆ ಮಾಡಿ ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯುವತಿಯರು "ಈ ಯೋಜನೆ ಹರಿಯಾಣದಲ್ಲೂ ಇದೆ. ಈ ಮುಂಚೆ ನಾವು ಅಲ್ಲಿ ಹೀಗೆ ಕರೆ ಮಾಡಿದ್ವಿ. ಆದರೆ, ಏನೂ ಉಪಯೋಗವಾಗಿಲ್ಲ"ಎಂದಿದ್ದಾರೆ. ಅದು ಹರಿಯಾಣ, ಇದು ಬೆಂಗಳೂರು ಇಲ್ಲೊಮ್ಮೆ ಟ್ರೈ ಮಾಡಿ ಎಂದ ಡಿಸಿಪಿ. ತಾವೇ ತಮ್ಮ ಗನ್​ಮ್ಯಾನ್ ಮೊಬೈಲ್​ನಿಂದ 100ಕ್ಕೆ ಡಯಲ್ ಮಾಡಿ ಯುವತಿಯರ ಬಳಿ ಮಾತನಾಡಲು ನೀಡಿದ್ದರು.ಕೂಡಲೇ ಯುವತಿಯರು ಇರುವ ಲೊಕೇಶನ್ ಪಡೆದ ಹೊಯ್ಸಳ ಸಿಬ್ಬಂಧಿ ಸ್ಥಳಕ್ಕೆ ಆಗಮಿಸಿ ಯುವತಿಯರ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಡಿಸಿಪಿ ಚೇತನ್ ಸಿಂಗ್ ಸಹ ಸ್ಥಳದಲ್ಲೇ ಇದ್ದು, ಹೊಯ್ಸಳಾ ಗಸ್ತು ವಾಹನ ಸ್ಥಳಕ್ಕೆ ಎಷ್ಟೊತ್ತಿಗೆ ಆಗಮಿಸುತ್ತದೆ ಎಂದು ಸಮಯವನ್ನು ಕೌಂಟ್ ಮಾಡಿದ್ದಾರೆ.

ಕೊನೆಗೆ ಮಂಗಳೂರು ಮತ್ತು ಹರಿಯಾಣ ಯುವತಿಯರನ್ನು ಸ್ವತಃ ಹೊಯ್ಸಳ ಗಸ್ತು ವಾಹನ ಮನೆಗೆ ತಲುಪಿಸಿದೆ. ಇಬ್ಬರೂ ಯುವತಿಯರು ಪೊಲೀಸ್ ಅಧಿಕಾರಿ ಚೇತನ ಅವರ ಕರ್ತವ್ಯ ನಿಷ್ಠೆಯನ್ನು ಮೆಚ್ಚಿದ್ದಾರೆ ಎಂದು ತಿಳಿದುಬಂದಿದೆ.

(ವರದಿ - ಮುನಿರಾಜು ಹೊಸಕೋಟೆ)

ಇದನ್ನೂ ಓದಿ : ವಿಶ್ವನಾಥ್ ಸಜ್ಜನರ್​; 11 ವರ್ಷದಲ್ಲಿ 3 ಎನ್​ಕೌಂಟರ್​, ಒಂದೇ ರೀತಿಯಲ್ಲಿ ಹತ್ಯೆ ಮತ್ತು ವಿವರಣೆ; ಅನುಮಾನಕ್ಕೆ ಕಾರಣವಾದ ನಡೆ
First published: December 8, 2019, 1:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading