ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಓರ್ವ ಸಾವು, 6 ಜನರ ಸ್ಥಿತಿ ಗಂಭೀರ 

Bus Accident : ರಾಯಚೂರು ಜಿಲ್ಲೆ ಲಿಂಗಸೂರಿನ ದ್ಯಾನಪ್ಪ (40) ಮೃತ ದುರ್ದೈವಿಯಾಗಿದ್ದು, ಪೊಲೀಸರು ಬರುವ ಮೊದಲೇ ಓರ್ವ ಗಾಯಾಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಸೆಪ್ಟೆಂಬರ್​. 06): ಖಾಸಗಿ ಬಸ್‌ವೊಂದು ಚಾಲಕನ ನಿಯಂತ್ರಣ‌ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಸಾವನ್ನಪ್ಪಿ, 6 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ತುಮಕೂರು ಮುಖ್ಯರಸ್ತೆಯ 8ನೇ ಮೈಲಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಇನ್ನೂ ಗಾಯಾಳುಗಳು ಬಸ್ ನಿಲ್ದಾಣದ ಸರಳುಗಳಿಗೆ ಸಿಲುಕಿಕೊಂಡ ಪರಿಣಾಮ ಪೀಣ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ, ಅತ್ಯಾಧುನಿಕ‌ ಉಪಕರಣಗಳನ್ನ ಬಳಸಿ ಗಾಯಾಳುಗಳ ರಕ್ಷಣಾ ಕಾರ್ಯ ನಡೆಸಿದ್ದಾರೆ. ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬನ ಕಾಲು ಸಂಪೂರ್ಣ ಮುರಿದುಹೋಗಿದ್ದು ಒಟ್ಟು 6 ಜನ ಗಾಯಾಳುಗಳ ರಕ್ಷಣ ಕಾರ್ಯಾ ನಡೆದಿದೆ. ಗಾಯಾಳುಗಳನ್ನ ಕಲಬುರಗಿ ಮೂಲದ ಮಲ್ಲಪ್ಪ, ಕೊಳ್ಳೆಗಾಲ ಮೂಲದ ನಾಗಮಾದಪ್ಪ, ವಿನಯ್, ಶಿವಕುಮಾರ್ ಹಾಗೂ ಆಂಜನೇಯ ಎಂದು ಗುರುತಿಸಲಾಗಿದೆ. ರಾಯಚೂರು ಜಿಲ್ಲೆ ಲಿಂಗಸೂರಿನ ದ್ಯಾನಪ್ಪ (40) ಮೃತ ದುರ್ದೈವಿ.

ಪೊಲೀಸರು ಬರುವ ಮೊದಲೇ ಓರ್ವ ಗಾಯಾಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು.  ಚಾಲಕ ಪಾನಮತ್ತನಾಗಿ ಬಸ್ ಚಾಲನೆ ಮಾಡಿದ್ದೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಚಾರಿ ವಿಭಾಗದ ಜಂಟಿ ಆಯುಕ್ತರಾದ ರವಿಕಾಂತೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,ಘಟನೆ ಬಗ್ಗೆ ಪೀಣ್ಯ ಸಂಚಾರಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಅಪಘಾತಕ್ಕೆ ಕಾರಣನಾದ ಚಾಲಕ ದೇವರಾಜು(35) ವಶಕ್ಕೆ ಪಡೆದಿದ್ದಾರೆ.
Published by:G Hareeshkumar
First published: