Bengaluru: ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಕೇಸ್: 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬಾಂಗ್ಲಾ ಯುವತಿ ಮೇಲೆ ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 7 ಜನ ಅಪರಾಧಿಗಳಾದ ಸೋಭುಜ್ ಶೇಖ್, ರಿದಯ್ ಬಾಬು, ರಫ್ ಸನ್ ಮಂಡಲ್, ರಕಿಬುಲ್ ಇಸ್ಲಾಂ ಸಾಗರ್, ಮಹಮ್ಮದ್ ಬಾಬು, ದಲಿಮ್, ಅಜೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 28): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದಬಾಂಗ್ಲಾ ಯುವತಿ ಮೇಲಿನ ಗ್ಯಾಂಗ್ ರೇಪ್ (Gang Rape) ಪ್ರಕರಣ ಸಂಬಂಧ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ (Life Sentence) ವಿಧಿಸಿ ಆದೇಶಿಸಿದೆ. ಪ್ರಕರಣದ ಪ್ರಮುಖ 7 ಜನ ಅಪರಾಧಿಗಳಾದ (Culprit) ಸೋಭುಜ್ ಶೇಖ್, ರಿದಯ್ ಬಾಬು, ರಫ್ ಸನ್ ಮಂಡಲ್, ರಕಿಬುಲ್ ಇಸ್ಲಾಂ ಸಾಗರ್, ಮಹಮ್ಮದ್ ಬಾಬು, ದಲಿಮ್, ಅಜೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅತ್ಯಾಚಾರವೆಸಗಿ ವಿಡಿಯೋ ವೈರಲ್​

ಕಳೆದ ವರ್ಷ 2021, ಮೇ 18 ರಂದು ನಗರದ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ಯುವತಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದರು. ಅಷ್ಟೇ ಅಲ್ಲದೇ ಆಕೆಯ ಮೇಲೆ ನಡೆಸಿದ ಅತ್ಯಾಚಾರವನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದರು.

10 ಮಂದಿ ಆರೋಪಿಗಳ ಬಂಧನ

ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚತ್ತ ಬಾಂಗ್ಲಾ ಪೊಲೀಸರು, ಬೆಂಗಳೂರು ಪೊಲೀಸರನ್ನ ಸಂಪರ್ಕಿಸಿದ್ದರು.ಬಳಿಕ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೆಲವೇ ದಿನಗಳಲ್ಲಿ ಬರೋಬ್ಬರಿ 10 ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದರು.

ಇದನ್ನೂ ಓದಿ: CM Visit: ಮಳೆ ಹಾನಿ ಪ್ರದೇಶಗಳಿಗೆ ಬಸವರಾಜ ಬೊಮ್ಮಾಯಿ ವಿಸಿಟ್; ಅತ್ತ ಎಚ್‌ಡಿಕೆ ಪ್ರತ್ಯೇಕ ಭೇಟಿ

ಮಾನವ ಕಳ್ಳ ಸಾಗಾಣಿಕೆ ಅಡಿಯಲ್ಲೂ ಕೇಸ್

ಕೇವಲ ಅತ್ಯಾಚಾರ ಪ್ರಕರಣವಲ್ಲದೇ ಮಾನವ ಕಳ್ಳ ಸಾಗಾಣಿಕೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡು ಆರೋಪಿಗಳ ವಿರುದ್ಧ ಪ್ರಮುಖ ಸಾಕ್ಷಿಗಳನ್ನ ಸಂಗ್ರಹಿಸಿ, 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಇಂದು ಶಿಕ್ಷೆ ಪ್ರಕಟಿಸಿದೆ.

7 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರಕರಣದ ಪ್ರಮುಖ 7 ಜನ ಅಪರಾಧಿಗಳಾದ ಸೋಭುಜ್ ಶೇಖ್, ರಿದಯ್ ಬಾಬು, ರಫ್ ಸನ್ ಮಂಡಲ್, ರಕಿಬುಲ್ ಇಸ್ಲಾಂ ಸಾಗರ್, ಮಹಮ್ಮದ್ ಬಾಬು, ದಲಿಮ್, ಅಜೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ಆರೋಪಿಗಳ ಪೈಕಿ ಎ6 ಆರೋಪಿಯಾದ ತಾನಿಯಾಗೆ 20 ವರ್ಷ ಜೈಲು ಹಾಗೂ ಎ9 ಆರೋಪಿಯಾದ ಜಮಾಲ್​​ಗೆ 5 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಜೊತೆಗೆ ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಅಖಿಲ್ ಎಂಬಾತ ಪ್ರಕರಣದಿಂದ ಖುಲಾಸೆಯಾಗಿದ್ದು, ನುಸ್ರತ್ ಹಾಗೂ ಕಾಜಲ್ ಎಂಬುವರಿಗೆ 9 ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ.

ಆರೋಪಿಗಳನ್ನು ಹಿಡಿಯಲು ವಿಶೇಷ ಟೀಂ

ಅಂದಿನ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಆರೋಪಿತಸ್ಥರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಕಮಲ್ ಪಂತ್ ಮುರುಗನ್ ಸಂದೀಪ್ ಪಾಟೀಲ್ ರ ಮಾರ್ಗದರ್ಶನಂತೆ ವಿಶೇಷ ಟೀಂ ರಚನೆಯಾಗಿತ್ತು, ಕೂಡಲೇ ಪ್ರಕರಣದಲ್ಲಿ ಕೆಲ ಅನುಮಾನಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದಿದ್ವಿ. ಮೊದಲಿಗೆ ಯಾವುದೇ ಕ್ಲೂ ನಮಗೆ ಲಭ್ಯವಾಗಿರಲಿಲ್ಲ, ನಂತರ ಆರೋಪಿಗಳನ್ನ ಪತ್ತೆ ಹಚ್ಚಿದಾಗ ಅವರು ನಿಜ ಒಪ್ಪಿಕೊಳ್ಳುತ್ತಾರೆ. ಆರೋಪಿಗಳು ಸಿಕ್ಕರೂ ಸಂತ್ರಸ್ತೆ ಪತ್ತೆಯಾಗಿರಲಿಲ್ಲ. ನಂತರ ಕೇರಳದ ಕ್ಯಾಲಿಕಟ್ ನಲ್ಲಿ ಸಂತ್ರಸ್ತೆಯನ್ನ ಪತ್ತೆ ಹಚ್ಚಿ ಕರೆತರಲಾಗಿತ್ತು.

ದೇಶದಾದ್ಯಂತ ಭಾರೀ ಸುದ್ದಿಯಾದ ಪ್ರಕರಣ

ಒಟ್ಟು 12 ಮಂದಿಯನ್ನ ಬಂಧಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆನ್ಸಿಟಿವ್ ಕೇಸ್ ಆಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆರೋಪಿಗಳು ಬಾಂಗ್ಲಾ ಮೂಲದವರು, ಎಲ್ಲರೂ ಅಕ್ರಮವಾಗಿ ಭಾರತಕ್ಕೆ ಬಂದಿದ್ದವರು. ಬಾಣಸವಾಡಿ ಎಸಿಪಿ ನಿಂಗಣ್ಣ ಸಕ್ರಿ, ರಾಮಮೂರ್ತಿನಗರ ಇನ್ಸ್'ಪೆಕ್ಟರ್ ಮೆಲ್ವಿನ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಡಿ.ಎನ್​.ಎ ಫ್ರಿಂಗರ್​ ಪ್ರಿಂಟ್​ ಫೋಟೋ ಆಡಿಯೋ ಡಿಟೇಲ್ಸ್​ ಎಲ್ಲ ಡಿಜಿಟಲ್ ಎವಿಡೆನ್ಸ್ ಕಲೆಕ್ಟ್ ಮಾಡಲಾಗಿತ್ತು. 50 ಕ್ಕೂ ಹೆಚ್ಚು ಮೆಟಿರಿಯಲ್ ಆಬ್​ಜೆಕ್ಟ್ ಗಳನ್ನ ಸೀಜ್ ಮಾಡಲಾಗಿತ್ತು.
Published by:Pavana HS
First published: