ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಬಂಡಾಯದ ಬಿಸಿ; ಕೆ.ಎಚ್.ಮುನಿಯಪ್ಪಗೆ ಟಿಕೆಟ್​ ಕೊಡದಂತೆ ಕೈ ಶಾಸಕ ಆಗ್ರಹ

ಎರಡು ದಿನದ ಹಿಂದೆ ಸ್ಪೀಕರ್​ ರಮೇಶ್​ ಕುಮಾರ್​ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ ನಿಯೋಗ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹಾಕಿತ್ತು. ಆದರೆ, ಏಳು ಬಾರಿ ಗೆದ್ದಿರುವ ಮುನಿಯಪ್ಪ ಪರವಾಗಿ ಕೆಲಸ ಮಾಡುವಂತೆ ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

HR Ramesh | news18
Updated:March 29, 2019, 5:23 PM IST
ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಬಂಡಾಯದ ಬಿಸಿ; ಕೆ.ಎಚ್.ಮುನಿಯಪ್ಪಗೆ ಟಿಕೆಟ್​ ಕೊಡದಂತೆ ಕೈ ಶಾಸಕ ಆಗ್ರಹ
ಕಾಂಗ್ರೆಸ್​ ಶಾಸಕ ನಾರಾಯಣಸ್ವಾಮಿ
HR Ramesh | news18
Updated: March 29, 2019, 5:23 PM IST
ಕೋಲಾರ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಬಂಡಾಯದ ಬಿಸಿ ಏಳಲಾರಂಭಿಸಿದೆ. ಈಗಾಗಲೇ ಹಾಸನದಲ್ಲಿ ಕಾಂಗ್ರೆಸ್​ ಮುಖಂಡ ಎ.ಮಂಜು ಪಕ್ಷಕ್ಕೆ ಗುಡ್​ಬೈ ಹೇಳಿ, ಬಿಜೆಪಿ ಸೇರಿಯಾಗಿದೆ. ಕೋಲಾರದಲ್ಲೂ ಪಕ್ಷ ಅದೇ ಪರಿಸ್ಥಿತಿ ಎದುರಿಸುವ ಸಂಕಷ್ಟಕ್ಕೆ ಸಿಲುಕಿದೆ.

ಏಳು ಬಾರಿ ಗೆದ್ದಿರುವ ಸಂಸದ ಕೆ.ಎಚ್ ಮುನಿಯಪ್ಪ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಹಾಗೂ ಅಂಬೇಡ್ಕರ್ ನಿಗಮ ಮಂಡಳಿ ಅಧ್ಯಕ್ಷ ಎಸ್.ಎನ್ ನಾರಾಯಣಸ್ವಾಮಿ, ಮುನಿಯಪ್ಪಗೆ ಟಿಕೆಟ್​ ನೀಡಬಾರದು. ಒಂದು ವೇಳೆ ನೀಡಿದರೆ ನಾವು ನಮ್ಮ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ಬಂಡಾಯದ ಎಚ್ಚರಿಕೆ ನೀಡಿದ್ದಾರೆ.

ಕೆ.ಎಚ್ ಮುನಿಯಪ್ಪ ಏಳು ಬಾರಿ ಗೆದ್ದಿದ್ದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹತ್ತು ವರ್ಷ ಕೇಂದ್ರದಲ್ಲಿ ಸಚಿವರಾಗಿದ್ದರೂ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿಲ್ಲ, ಕ್ಷೇತ್ರದ ಜನತೆ ಕೆ.ಎಚ್.ಮುನಿಯಪ್ಪ ವಿರುದ್ಧ ಆಕ್ರೋಶಗೊಂಡಿದ್ದಾರೆ ,

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಉತ್ತಮ ಅಭ್ಯರ್ಥಿಯನ್ನು ಹಾಕುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದೇವೆ. ಕಾಂಗ್ರೆಸ್ ಟಿಕೆಟ್ ಅನ್ನು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಕೊಡಲಿ. ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಸಬೇಕು, ಸದ್ಯಕ್ಕೆ ಮುನಿಯಪ್ಪ ವಿರೋಧಿ ಅಲೆಯಿದೆ. ಹೀಗಾಗಿ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಅನಿವಾರ್ಯ ಎಂದು ಹೇಳಿದರು.

ಇದನ್ನು ಓದಿ: ಆಪರೇಷನ್ ಕೆ.ಎಚ್.ಮುನಿಯಪ್ಪ ಫೇಲ್​; ರಮೇಶ್​ಕುಮಾರ್ ನೇತೃತ್ವದ ನಿಯೋಗಕ್ಕೆ ಮಣೆ ಹಾಕದ ಕಾಂಗ್ರೆಸ್​ ಹೈಕಮಾಂಡ್

ಈಗಾಗಲೇ ಕೋಲಾರದ ಕಾಂಗ್ರೆಸ್​ ಮುಖಂಡರಾದ ಸ್ಪೀಕರ್​ ರಮೇಶ್​ ಕುಮಾರ್, ವಿ ಮುನಿಯಪ್ಪ, ನಾಗೇಶ್, ಕೊತ್ತೂರು ಮಂಜುನಾಥ್,​ ನಸೀರ್ ಅಹ್ಮದ್​, ಮಾಲೂರು ಮಾಜಿ ಶಾಸಕ ಮಂಜುನಾಥಗೌಡ, ಶ್ರೀನಿವಾಸಗೌಡ ನಿಯೋಗ ದೆಹಲಿಗೆ ತೆರಳಿ, ಮುನಿಯಪ್ಪಗೆ ಟಿಕೆಟ್​ ನೀಡಿದಂತೆ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಹೈಕಮಾಂಡ್​ ಪುರಸ್ಕರಿಸುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಒಂದು ವೇಳೆ ಟಿಕೆಟ್ ನೀಡಿದರೆ ನಾವೆಲ್ಲ ಕೂತು ಚರ್ಚೆ ಮಾಡಿ, ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದರು.
Loading...

ಎರಡು ದಿನದ ಹಿಂದೆ ಸ್ಪೀಕರ್​ ರಮೇಶ್​ ಕುಮಾರ್​ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ ನಿಯೋಗ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹಾಕಿತ್ತು. ಆದರೆ, ಏಳು ಬಾರಿ ಗೆದ್ದಿರುವ ಮುನಿಯಪ್ಪ ಪರವಾಗಿ ಕೆಲಸ ಮಾಡುವಂತೆ ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

First published:March 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...