HOME » NEWS » State » BANGARPERT BORDER VILLAGERS USING SIREN TO PROTECT CROP FROM ELEPHANTS RRK SESR

Elephant Attack: ಕಾಡಾನೆ ದಾಳಿಯಿಂದ ಬೆಳೆ ರಕ್ಷಿಸಲು ಸೈರನ್ ಮೊರೆಹೋದ ರೈತರು; ಬಂಗಾರಪೇಟೆಯ ಗಡಿ ಕೃಷಿಕರಲ್ಲಿ ನಿಟ್ಟುಸಿರು

ಬೆಳೆಗಳನ್ನ ರಕ್ಷಿಸಿಕೊಳ್ಳಲು ರೈತರೇ, ತಮ್ಮ ತೋಟಗಳಲ್ಲಿ ರೀಚಾರ್ಜ್‍ಬಲ್ ಎಲೆಕ್ಟ್ರಿಕಲ್ ಸೈರನ್‍ಗಳನ್ನ ಅಳವಡಿಸಿಕೊಂಡು ಆನೆ ಹಾವಳಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

news18-kannada
Updated:March 10, 2021, 3:46 PM IST
Elephant Attack: ಕಾಡಾನೆ ದಾಳಿಯಿಂದ ಬೆಳೆ ರಕ್ಷಿಸಲು ಸೈರನ್ ಮೊರೆಹೋದ ರೈತರು; ಬಂಗಾರಪೇಟೆಯ ಗಡಿ ಕೃಷಿಕರಲ್ಲಿ ನಿಟ್ಟುಸಿರು
ಸೈರನ್​ ಬಳಕೆಯಲ್ಲಿ ರೈತರು
  • Share this:
ಕೋಲಾರ (ಮಾ. 10): ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಆನೆಗಳ ಹಾವಳಿ ಮುಂದುವರೆದಿದೆ. ಇಲ್ಲಿ ಯಾವಾಗಲೇ ಆನೆ ದಾಳಿ ನಡೆದರು ಅರಣ್ಯ ಇಲಾಖೆ ಕೇವಲ ಪರಿಹಾರ ಮಾತ್ರ ನೀಡುತ್ತದೆ. ಹೊರತು ಶಾಶ್ವತ ಪರಿಹಾರ ನೀಡಿಲ್ಲ.  ಕಳೆದ 20 ವರ್ಷಗಳಿಂದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ  ಸಿಗದ ಹಿನ್ನಲೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಗಡಿ ಪ್ರದೇಶದಲ್ಲಿ ಈ ಆನೆಗಳ ಳ ದಾಳಿಯಿಂದ ತಮ್ಮ ಬೆಳೆ ಹಾಗೂ ಜೀವವನ್ನ ರಕ್ಷಿಸಿಕೊಳ್ಳಲು ರೈತರೇ ಸಾಹಸಕ್ಕೆ  ಮುಂದಾಗಿದ್ದು, ಅವರ ಈ ಕಾರ್ಯ ಸಫಲಗೊಂಡಿದೆ. ಬಂಗಾರಪೇಟೆ ತಾಲೂಕಿನ ಕದಿರಿನತ್ತ, ಕುಂದರಸನಹಳ್ಳಿ, ಭತ್ತಲಹಳ್ಳಿ ಗ್ರಾಮದಲ್ಲೆ ಕಾಡಾನೆಗಳ ಹಾವಳಿಯಿಂದ ಅತಿಹೆಚ್ಚು ಬೆಳೆನಾಶ ಹಾಗು ಪ್ರಾಣಹಾನಿ ನಡೆಯುತ್ತಿದೆ. ಹೀಗಾಗಿ ಬೆಳೆಗಳನ್ನ ರಕ್ಷಿಸಿಕೊಳ್ಳಲು ರೈತರೇ, ತಮ್ಮ ತೋಟಗಳಲ್ಲಿ ರೀಚಾರ್ಜ್‍ಬಲ್ ಎಲೆಕ್ಟ್ರಿಕಲ್ ಸೈರನ್‍ಗಳನ್ನ ಅಳವಡಿಸಿಕೊಂಡು ಆನೆ ಹಾವಳಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಕದಿಕದಿರಿನತ್ತ ಹಾಗು ಭತ್ತಲಹಳ್ಳಿ ಗ್ರಾಮಗಳಲ್ಲಿ ರೈತರು ಸೈರನ್​ಗಳನ್ನು ತೋಟಗಳಲ್ಲಿ ಅಳವಡಿಸಿದ್ದಾರೆ. ಸಂಜೆ 6 ಗಂಟೆಯಿಂದ,  ಬೆಳಗ್ಗೆ 6 ಗಂಟೆವರೆಗೂ ಸೈರನ್‍ಗಳು ಒಂದೇ ಸಮನೆ ಬಡಿದುಕೊಳ್ಳುತ್ತವೆ, ಹೀಗಾಗಿ ಆನೆಗಳು ಇತ್ತ ಸುಳಿಯುವುದೇ ಇಲ್ಲ ಎಂದು ರೈತರು ಹೇಳಿದ್ದಾರೆ. ಕಾಡಾನೆಗಳ ದಾಳಿಯನ್ನ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆಯೆಂದು ಇದೇ ವೇಳೆ ರೈತರು ಆರೋಪಿಸಿದರು.

ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ರೆಡ್ಡಿ, ಇಂತಹ ಕನಿಷ್ಟ ಉಪಾಯವನ್ನು ರಾಜ್ಯ ಸರ್ಕಾರ  ಚಿಂತನೆ ಮಾಡಿಲ್ಲ, ಗಡಿಯಂಚಿನ ಪ್ರದೇಶದಲ್ಲಿನ ರೈತರಿಗೆ ಹಗಲು ವೇಳೆ ಕೃಷಿಗೆ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.

ಆನೆ ಉಪಟಳ ಕುಗ್ಗಿಸುವ ಸೈರನ್ ಗಳನ್ನ ಉಚಿತವಾಗಿ ವಿತರಸಿದ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು

ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಮೊದಲು ಕೆಲ ರೈತರು ಗ್ರಾಮದಲ್ಲಿ ಸೈರನ್‍ಗಳಲ್ಲಿ ಅಳವಡಿಸಿದ್ದು, ಸ್ಥಳೀಯ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು ರೈತರ ಬೇಡಿಕೆಯನ್ನ ಅರಿತು ಉಚಿತವಾಗಿ  ಸೈರನ್ ಗಳನ್ನ  ನೀಡಿದ್ದಾರೆ. ಸಂಜೆಯಿಂದ ಬೆಳಗ್ಗೆಯವರೆಗೂ ಜನರೇ ಶಬ್ದಮಾಡುವ ರೀತಿಯಲ್ಲಿ ಬಡಿದುಕೊಳ್ಳುವ ಹಿನ್ನಲೆ, ಆನೆಗಳು ರೈತರ ಹೊಲಗಳಿಗೆ ಸುಳಿಯುತ್ತಿಲ್ಲ.    ಪ್ರಯೋಗಿಕವಾಗಿ ಸೈರನ್ ಪ್ರಯೋಗ ಯಶಸ್ವಿಯಾದ ಹಿನ್ನಲೆ, ಇನ್ನು 40ಕ್ಕೂ ಹೆಚ್ಚು ಸೈರನ್‍ಗಳನ್ನ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು ನೀಡಲು ಮುಂದಾಗಿದ್ದಾರೆ, ಈ ಬಗ್ಗೆ ಮಾತನಾಡಿರುವ ಅವರು , ಆನೆ ದಾಳಿಗಳನ್ನು ತಡೆಗಟ್ಟಲೇ ಬೇಕಾಗಿದೆ. ಜನರ ಹಾಗೂ ಕೃಷಿ ಬೆಳೆಗಳನ್ನು  ಕಾಪಾಡುವುದು ಬಹುಮುಖ್ಯವಾಗಿದ್ದು, ಆನೆಗಳ ದಾಳಿಯಿಂದ ಹೊಲದಲ್ಲಿ ಕೆಲಸ ಮಾಡುವ ರೈತರನ್ ರಕ್ಷಿಸಲು ಇದು ಸಹಾಯಕಾರಿ ಇದನ್ನು ಸರ್ಕಾರವೂ ಮನಗಂಡು ಎಲ್ಲೆಡೆ ಜಾರಿ ಮಾಡಲಿ ಎಂದು  ಮನವಿ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಸೈರನ್ ಬಳಕೆ ಹೇಗೆ?

ಬಂಗಾರಪೇಟೆ  ತಾಲೂಕಿನ ಕದಿರಿನತ್ತ, ಭತ್ತಲಹಳ್ಳಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಕಾಡಾನೆಗಳು ಕಾಣಿಸಿಕೊಂಡಿಲ್ಲ. ತಮ್ಮದೇ ಧ್ವನಿಯಲ್ಲಿ ಆನೆಗಳನ್ನ ಓಡಿಸುವ ದಾಟಿಯಲ್ಲಿ ಜನರು ಸೈರನ್‍ನಲ್ಲಿನ ಚಿಪ್‍ನಲ್ಲಿ  ರೆಕಾರ್ಡ್ ಮಾಡಿ ಹಾಕಲಾಗಿದೆ. ಸಂಜೆ 6 ಗಂಟೆಗೆ ಸೈರನ್ ಆನ್ ಮಾಡಿದರೆ, ಬೆಳಗ್ಗೆ 6 ಗಂಟೆವರೆಗು ಸೈರನ್‍ಗಳು ಬಡಿದುಕೊಳ್ಳುತ್ತವೆ, ಬ್ಯಾಟರಿಯಿಂದ ಕೆಲಸ ಮಾಡುವ ಸೈರನ್ ಗಳು,  ಕರೆಂಟ್‍ನಿಂದಲೂ ಕೆಲಸ ಮಾಡುವುದರಿಂದ ರೈತರಿಗೆ ಇದು ಹೆಚ್ಚು ಸಹಕಾರಿಯಾಗಿದೆ. ಇನ್ನು ಜನರ ಕೂಗಾಟಗಳ ಶಬ್ದ ಕೇಳಿದಲ್ಲಿ 30 ಮೀಟರ್ ದೂರದಲ್ಲೇ ಆನೆಗಳು ಸುಳಿಯುವುದಿಲ್ಲ.  ಅರಣ್ಯ ಇಲಾಖೆಯಿಂದಲೂ ಎರಡು ಕಡೆ ಪ್ರಾಯೋಗಿಕವಾಗಿ ಸೈರನ್ ಅಳವಡಿಸಿದ್ದು, ಇದು ಯಶಸ್ವಿಯಾಗಿದೆ.ಒಟ್ಟಿನಲ್ಲಿ ಬಂಗಾರಪೇಟೆ ಗಡಿಯಲ್ಲಿ ಆನೆ ಹಾವಳಿಯನ್ನು ತಡೆಗಟ್ಟಲು, ಆನೆ ಕಾರಿಡಾರ್ ನಿರ್ಮಿಸುವ ಬೇಡಿಕೆ ಹಲವು ವರ್ಷಗಳಿಂದ ಇಟ್ಟಿದ್ದು ಇನ್ನು ಬೇಡಿಕೆ ಈಡೇರಿಲ್ಲ, ಈಗಾಗಲೇ ರೈತರ ಹೊಲಗಳಲ್ಲಿ ನಿರಂತರವಾಗಿ ಬೆಳೆನಾಶ ಮಾಡುತ್ತಿರುವ ಆನೆಗಳು ಅಮಾಯಕ ರೈತರ ಮೇಲೂ ದಾಳಿಯನ್ನ ನಡೆಸುತ್ತಿದೆ. ಈ ಕುರಿತು ಮಾತನಾಡಿರುವ ಜಿಲ್ಲಾ ಅರಣ್ಯಾಧಿಕಾರಿಗಳು, ರೈಲ್ವೆ ಹಳಿಯಿಂದ ಆನೆ ಕಾರಿಡಾರ್ ನಿರ್ಮಿಸುವ ಬೇಡಿಕೆಗೆ ಇನ್ನು ಹಣ ಮಂಜೂರಾಗಿಲ್ಲ, ಸೋಲಾರ್ ಪೆನ್ಸಿಂಗ್ ನಿರ್ಮಿಸಲು ಅನುಮತಿ ಸಿಕ್ಕಿದ್ದು ಆದಷ್ಟು ಬೇಗನೆ ಕಾಮಗಾರಿಯನ್ನ ನಡೆಸುವ ಭರವಸೆ ನೀಡಿದ್ದಾರೆ.
Published by: Seema R
First published: March 10, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories