ರಾತ್ರೋ ರಾತ್ರಿ ರೌಡಿ ಶೀಟರ್​ಗಳ ಮನೆಗೆ ಪೊಲೀಸರ ದಾಳಿ : ಪರೇಡ್ ನಡೆಸಿ ಖಡಕ್​ ಎಚ್ಚರಿಕೆ ಕೊಟ್ಟ ಎಸ್ಪಿ ರವಿ ಚನ್ನಣ್ಣನವರ್

ಅಕ್ರಮ ಬಡ್ಡಿ, ಇಸ್ಪೀಟ್ ದಂಧೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಭಾಗಿಯಾಗಿದವರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಎಸ್​ ಪಿ ರವಿ ಡಿ ಚನ್ನಣ್ಣನವರ್​

ಎಸ್​ ಪಿ ರವಿ ಡಿ ಚನ್ನಣ್ಣನವರ್​

  • Share this:
ನೆಲಮಂಗಲ(ಆ. 09): ಭೂಗತ ಲೋಕದಲ್ಲಿ ಸಕ್ರೀಯರಾಗಿದ್ದ ಅವರೆಲ್ಲ, ಕೆಲ ದಿನಗಳ ಹಿಂದೆ ಸುಮ್ಮನಾಗಿದ್ದರು. ಆದರೆ, ಈಗ ಮತ್ತೆ ತಮ್ಮ‌ ಅಕ್ರಮ ಚಟುವಟಿಕೆಗಳನ್ನ ಪ್ರಾರಂಭ ಮಾಡಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದರು. ಈ ಅಕ್ರಮಗಳನ್ನ ಬೆನ್ನತ್ತಿದ ಪೊಲೀಸರು ರಾತ್ರೋ ರಾತ್ರಿ ರೌಡಿ ಶೀಟರ್​​ಗಳ​​​​ ಮನೆಗೆ ಹೋಗಿ ಅವರನ್ನೆಲ್ಲ ಕರೆದುಕೊಂದು ಬಂದು ರೌಡಿ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಕಳೆದ ಆರು ತಿಂಗಳಿಂದ ದೇಶ ವ್ಯಾಪ್ತಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ವೈದ್ಯರು, ಆಶಾ ಕಾರ್ಯಕರ್ತೆಯರ, ಪೌರ ಕಾರ್ಮಿಕರ ನಿರಂತರ ಸೇವೆಯ ಜೊತೆಗೆ ನಮ್ಮ ಖಾಕಿ ಪಡೆಯೂ ನಿಸ್ವಾರ್ಥವಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ರೌಡಿಗಳು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಾಸನೆ ಹರಡಿತ್ತು. ಅಕ್ರಮಗಳಿಗೆ ಕಡಿವಾಣ ಹಾಕುವ ಸಲಿವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್‌ ನೇತೃತ್ವದಲ್ಲಿ ನೆಲಮಂಗಲ ಉಪವಿಭಾಗದ ಪೊಲೀಸರಿಗೆ ಠಾಣಾವಾರು ಇರುವ ಎಲ್ಲಾ ರೌಡಿಗಳ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಖಡಕ್ ಸೂಚನೆ ನೀಡಿದ್ದಾರೆ.

ಹೀಗಾಗಿ ರಾತ್ರೋ ರಾತ್ರಿ ನೆಲಮಂಗಲ ಉಪವಿಭಾಗದ ಪೊಲೀಸರು ಆಯಾ ಠಾಣಾ ವ್ಯಾಪ್ತಿಯ ಟಾಪ್ ಲಿಸ್ಟ್ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಅವರನ್ನು ಕರೆದುಕೊಂಡು ಬಂದು, ರೌಡಿ ಪೆರೇಡ್ ನೆಡೆಸಿದ ಪೊಲೀಸರು 346 ಮಂದಿ ರೌಡಿಶೀಟರ್ ಗಳ ಪೈಕಿ ಬಂಡೆ ಮಂಜ, ಹುಸ್ಕೂರು ಶಿವ, ಬೆತ್ತನಗೆರೆ ಮಂಜ, ಪಾಯ್ಸನ್ ರಾಮ, ಖಾಸಿಮ್, ಶರವಣ, ಚೇಣಿ, ನಾಗರಾಜ, ರವಿ, ನಿಂಗೇಗೌಡ, ಬೆಂಕಿ ಮಹದೇವ, ಸೇರಿದಂತೆ 84 ಮಂದಿ ಸಕ್ರಿಯ ರೌಡಿಶೀಟರ್​​ಗಳಿಗೆ ಪರೇಡ್ ನಡೆಸಿದರು. ವಿಚಾರಣೆ ವೇಳೆ ಸುಳ್ಳು ಮಾಹಿತಿ ನೀಡಿದ ರೌಡಿಶೀಟರ್ ಶಿವನಿಗೆ ಎಸ್ಪಿ ಫುಲ್ ತರಾಟೆಗೆ ತಗೆದುಕೊಂಡು ಗೂಂಡಾ ಆ್ಯಕ್ಟ್ ಹಾಕುವಂತೆ  ಸೂಚನೆ ನೀಡಿದರು.

ಇದನ್ನೂ ಓದಿ : ಆರ್ಮಿ ಆಫೀಸರ್ ಹೆಸರಿನಲ್ಲಿ ವ್ಯಕ್ತಿಗೆ ಮೋಸ : ವಂಚಕನ ಪತ್ತೆಗೆ ಬಲೆ ಬೀಸಿದ ಪೊಲೀಸರು

ಅಕ್ರಮ ಬಡ್ಡಿ, ಇಸ್ಪೀಟ್ ದಂಧೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಭಾಗಿಯಾಗಿದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 5 ವರ್ಷಕ್ಕೂ ಮೇಲ್ಪಟ್ಟು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಮೇಲೆ ತೀವ್ರ ನಿಗಾ ಇಟ್ಟು, ನಡತೆ ಆಧಾರದ ಮೇಲೆ ರೌಡಿಶೀಟರ್ ಹೆಸರಿನಿಂದ ತೆಗೆದುಹಾಕುವಂತೆ ಎಸ್​ ಪಿ ರವಿ ಚನ್ನಣ್ಣವರ್ ಸೂಚನೆ ನೀಡಿದರು.

ಒಂದು ವೇಳೆ ಅಕ್ರಮಗಳಲ್ಲಿ ಭಾಗಿಯಾದ ರೌಡಿ ಆಸಾಮಿಗಳಿಗೆ ಕಠಿಣ ಕಾನೂನು ಶಿಸ್ತುಕ್ರಮ ಇಲ್ಲ. ಗಡಿಪಾರು ಮಾಡುವಂತೆ ರವಿ ಚನ್ನಣ್ಣವರ್ ನೆಲಮಂಗಲ ಡಿವೈಎಸ್ಪಿ ಮೋಹನ್ ಕುಮಾರ್ ಗೆ ತಿಳಿಸಿದರು.

ಒಟ್ಟಾರೆ ನೆಲಮಂಗಲದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನ ನಡೆಸುವ ಪುಡಿರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕಾರ್ಯಾಚರಣೆಗೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ರೌಡಿ ಚಟುವಟಿಕೆಗಳು ಯಾವ ರೀತಿ ಮಟ್ಟ ಹಾಕುತ್ತಾರೆ ಎಂದು ಕಾದು ನೋಡಬೇಕಿದೆ.
Published by:G Hareeshkumar
First published: