Bangalore Rains: ಬೆಂಗಳೂರಿನಲ್ಲಿ ಇಂದು ಎಷ್ಟು ಗಂಟೆಗೆ ಮಳೆಯಾಗಲಿದೆ ಗೊತ್ತಾ?

Bengaluru Weather: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ರಾಜ್ಯದಲ್ಲೂ ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಇಂದಿನ ಹವಾಮಾನ ಹೇಗಿರಲಿದೆ? ಎಂಬುದಕ್ಕೆ ಇಲ್ಲಿದೆ ಮಾಹಿತಿ...

news18-kannada
Updated:December 3, 2019, 8:26 AM IST
Bangalore Rains: ಬೆಂಗಳೂರಿನಲ್ಲಿ ಇಂದು ಎಷ್ಟು ಗಂಟೆಗೆ ಮಳೆಯಾಗಲಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ.3): ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಗುತ್ತಿದೆ. ಇಂದು ಕೂಡ ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಮಳೆ ಸುರಿಯಲಿದೆ.

ಪಕ್ಕದ ತಮಿಳುನಾಡಿನ ಮಳೆಯ ಪರಿಣಾಮ ಬೆಂಗಳೂರಿನ ಮೇಲೂ ಉಂಟಾಗಿದೆ. ಇಂದು ಬೆಳಗ್ಗೆಯಿಂದ ಆಗಸದ ತುಂಬ ಮೋಡ ಕವಿದಿರುವುದರಿಂದ ಬೆಂಗಳೂರಿನ ಜನರು ಯಾವಾಗ ಮಳೆಯಾಗುವುದೋ ಎಂಬ ಆತಂಕದಲ್ಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯವರೆಗೂ ಮೋಡ ತುಂಬಿರಲಿದ್ದು, 12 ಗಂಟೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಸಾಕುನಾಯಿ ಬೊಗಳಿದ್ದಕ್ಕೆ ಅಟ್ಟಾಡಿಸಿ ಕೊಂದ ಫುಡ್ ಡೆಲಿವರಿ ಬಾಯ್​; ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ

ಮಧ್ಯಾಹ್ನ 12 ಗಂಟೆಯಿಂದ ತುಂತುರು ಮಳೆಯಾಗಲಿದ್ದು, 1 ಗಂಟೆಯ ನಂತರ ಮತ್ತೆ ಮಳೆ ನಿಲ್ಲಲಿದೆ. ಮತ್ತೆ 2 ಗಂಟೆಯಿಂದ ಮತ್ತೆ ಮಳೆ ಶುರುವಾಗಲಿದ್ದು, 3 ಗಂಟೆಯ ನಂತರ ಮತ್ತೆ ಮೋಡ ಮುಸುಕಲಿದೆ. 5 ಗಂಟೆಯ ವೇಳೆಗೆ ಮೋಡ ಚದುರಲಿದೆ. ಸಂಜೆಯ ವೇಳೆಗೆ ಮಳೆ ನಿಂತಿರುವುದರಿಂದ ಬೆಂಗಳೂರಿಗರು ಯಾವುದೇ ಆತಂಕವಿಲ್ಲದೆ ಮನೆ ಸೇರಬಹುದು.
First published:December 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...