Bengaluru Weather: ಮುಂದಿನ ಒಂದು ವಾರ ಬೆಂಗಳೂರಿನ ಹವಾಮಾನ ಹೇಗಿರಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಇಂದು ಸಂಜೆ ಹಾಗೂ ರಾತ್ರೆ ವೇಳೆಗೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.  ಇಂದು ಲಾಕ್​​ಡೌನ್​ ಇರುವುದರಿಂದ ಮಳೆಯಿಂದ ಅಷ್ಟಾಗಿ ತೊಂದರೆ ಕಾಡುವುದಿಲ್ಲ. 

ಮಳೆ

ಮಳೆ

  • Share this:
    ಬೆಂಗಳೂರು (ಜು.21):  ಬೆಂಗಳೂರಿನಲ್ಲಿ ಸದ್ಯ ಲಾಕ್​ಡೌನ್​ ಪೂರ್ಣಗೊಂಡಿದ್ದು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬೆಂಗಳೂರಿಗೆ ಬಿಟ್ಟು ಬಿಡದಂತೆ ಮಳೆ ಕಾಡುತ್ತಿದೆ. ದಿನ ಬಿಟ್ಟು ದಿನ ಮಳೆ ಸುರಿಯುತ್ತಿದ್ದು, ಹೊರಗೆ ತೆರಳಿದವರು ಮನೆ ಸೇರಲು ಪರದಾಡುತ್ತಿದ್ದಾರೆ. ಅಂದಹಾಗೆ, ಮುಂದಿನ ಒಂದು ವಾರ ಹವಾಮಾನ ಹೇಗಿರಲಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 

    ಬೆಂಗಳೂರಿನಲ್ಲಿ ಶನಿವಾರ ಸಂಜೆ ಚಿಕ್ಕದಾಗಿ ಮಳೆ ಸುರಿದಿತ್ತು. ರಾತ್ರಿ 11 ಗಂಟೆ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಮಳೆ ಆಗಿತ್ತು. ಈ ಮಳೆ ಹಲವು ಗಂಟೆಗಳ ಕಾಲ ಮುಂದುವರಿದೇ ಇತ್ತು. ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್,ಲ ಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.

    ಇಂದು ಸಂಜೆ ಹಾಗೂ ರಾತ್ರೆ ವೇಳೆಗೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.  ಇಂದು ಲಾಕ್​​ಡೌನ್​ ಇರುವುದರಿಂದ ಮಳೆಯಿಂದ ಅಷ್ಟಾಗಿ ತೊಂದರೆ ಕಾಡುವುದಿಲ್ಲ.

    ಬುಧವಾರದವರೆಗೆ ಮಳೆ:

    ಬುಧವಾರದವರೆಗೆ ಬೆಂಗಳೂರಿನಲ್ಲಿ ಇದೇ ಮಾದರಿಯ ಹವಾಮಾನ ಮುಂದುವರಿಯಲಿದೆ.  ನಿತ್ಯ ಸಂಜೆ ಹಾಗೂ ರಾತ್ರಿ ಅವಧಿಯಲ್ಲಿ ಮಳೆ ಆಗಲಿದೆ. ಹೀಗಾಗಿ, ಜನರು ಕಚೇರಿಗೆ ತೆರಳುವ ಮುನ್ನ ಆದಷ್ಟು ಎಚ್ಚರಿಕೆ ವಹಿಸುವುದು ಒಳಿತು.  ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
    Published by:Rajesh Duggumane
    First published: