Bangalore Rain: ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ; ಹವಾಮಾನ ಇಲಾಖೆ ಏನನ್ನುತ್ತೆ?

ಭಾನುವಾರವೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ನಗರದ ಕೆಲ ಭಾಗದಲ್ಲಿ ಸಂಜೆ ತುಂತುರು ಹನಿ ಹಾಕಿತ್ತು.

Rajesh Duggumane | news18
Updated:August 26, 2019, 7:42 AM IST
Bangalore Rain: ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣ; ಹವಾಮಾನ ಇಲಾಖೆ ಏನನ್ನುತ್ತೆ?
ಮಳೆಯ ದೃಶ್ಯ
  • News18
  • Last Updated: August 26, 2019, 7:42 AM IST
  • Share this:
ಬೆಂಗಳೂರು (ಆ.26): ನಗರದಲ್ಲಿ ಇಂದು ಮೋಡ ಕವಿದ ವಾತಾವರಣವಿದೆ.  ಹವಾಮಾನ ಇಲಾಖೆಯ ವರದಿ ಪ್ರಕಾರ ಸಂಜೆ 6 ಗಂಟೆಯ ಸುಮಾರಿಗೆ ಗುಡುಗು ಸಹಿತ ತುಂತುರು ಮಳೆ ಆಗಲಿದೆ. ಉಳಿದಂತೆ ಮಳೆ ಇಂದು ಅಬ್ಬರಿಸುವುದಿಲ್ಲ.

ಭಾನುವಾರವೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇತ್ತು. ನಗರದ ಕೆಲ ಭಾಗದಲ್ಲಿ ಸಂಜೆ ತುಂತುರು ಹನಿ ಹಾಕಿತ್ತು. ಇಂದು ಕೂಡ ಗುಡು ಸಹಿತ ತುಂತುತು ಮಳೆ ಸುರಿಯಲಿದೆ.  ರಾಜ್ಯದ ನಾನಾ ಭಾಗದಲ್ಲಿ ಇಂದು ಮಳೆ ಮುಂದುವರಿಯಲಿದೆ. ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ಗದಗ, ಬೆಳಗಾವಿ, ಬಿಜಾಪುರ, ಗುಲ್ಬರ್ಗ ಭಾಗಗಳಲ್ಲಿ ಸೂರ್ಯನ ದರ್ಶನವಾಗಲಿದೆ.

ನಗರದಲ್ಲಿ ಗುರುವಾರ ತಡರಾತ್ರಿ ಮಳೆ ಸುರಿದಿತ್ತು. ಪರಿಣಾಮ, ಅನೇಕ ಪ್ರದೇಶಗಳು ಜಲಾವೃತಗೊಂಡಿದ್ದವು. ಸಂಜೆ 6 ಗಂಟೆಗೆ ಆರಂಭವಾದ ಮಳೆ ನಂತರ ದೊಡ್ಡ ಪ್ರಮಾಣದಲ್ಲಿ ಸುರಿದಿತ್ತು. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು. ನಂತರದ ದಿನಗಳಲ್ಲಿ ದೊಡ್ಡ ಪ್ರಮಾಣದ ಮಳೆ ಕಾಣಿಸಿಕೊಂಡಿಲ್ಲ.

First published:August 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...