Bengaluru Weather: ಬೆಂಗಳೂರಲ್ಲಿ ಇಂದಿನಿಂದ ಇಲ್ಲ ಲಾಕ್​ಡೌನ್​; ಕಚೇರಿಗೆ ತೆರಳೋ ಮುನ್ನ ಮಳೆಯ ಬಗ್ಗೆ ಇರಲಿ ಎಚ್ಚರ

Bengaluru Rain: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿದಿತ್ತು. ಆದರೆ. ಲಾಕ್​ಡೌನ್​ ಇದ್ದಿದ್ದರಿಂದ ಜನರಿಗೆ ಯಾವುದೇ ತೊಂದರೆ ಉಂಟಾಗಿರಲಿಲ್ಲ.  ಸದ್ಯ ಒಂದು ವಾರದ ಲಾಕ್​ಡೌ​ನ್ ಪೂರ್ಣಗೊಂಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜು.22): ಬೆಂಗಳೂರಿನಲ್ಲಿ ಇಂದು ಲಾಕ್​ಡೌನ್​ ತೆರವುಗೊಂಡಿದೆ. ಹೀಗಾಗಿ, ಬಹುತೇಕರು ಕಚೇರಿಗೆ ತೆರಳುತ್ತಿದ್ದಾರೆ. ಕಚೇರಿಗೆ ನೀವು ಬೈಕ್​ನಲ್ಲಿ ತೆರಳುತ್ತೀರಿ ಎಂದಾದರೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ತೆರಳುವುದು ಒಳಿತು. ಇಲ್ಲವಾದರೆ ಮಳೆಯಲ್ಲಿ ಸಿಲುಕೋದು ಗ್ಯಾರಂಟಿ. 

  ಇಂದು ಸಂಜೆ ಹಾಗೂ ರಾತ್ರಿ ವೇಳೆಗೆ ಬೆಂಗಳೂರಿನಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ನೀವು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ತೆರಳುವುದು ಒಳಿತು. ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ.

  ಸೋಮವಾರ  ರಾತ್ರಿ 11 ಗಂಟೆ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಮಳೆ ಆಗಿತ್ತು. ಈ ಮಳೆ ಹಲವು ಗಂಟೆಗಳ ಕಾಲ ಮುಂದುವರಿದೇ ಇತ್ತು. ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್,ಲ ಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿತ್ತು. ಯಲಹಂಕ, ದೊಡ್ಡಬೊಮ್ಮಸಂದ್ರ, ಟಿ ದಾಸರಹಳ್ಳಿ ಹಾಗೂ ಸುತ್ತಮುತ್ತ ಮಳೆಯ ರೌದ್ರನರ್ತನವಾಗಿತ್ತು. ದಾಸರಹಳ್ಳಿಯ ಚೊಕ್ಕಸಂದ್ರದ ರುಕ್ಮಿಣಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿಯ ರಸ್ತೆಗಳು ಕರೆಯಂತಾಗಿ ಸ್ಥಳೀಯರು ಪರದಾಡುವಂತಾಗಿತ್ತು. ಇಂದು ಕೂಡ ದೊಡ್ಡ ಪ್ರಮಾಣದಲ್ಲಿ ಮಳೆ ಆಗಲಿದೆ ಎನ್ನಲಾಗಿದೆ.

  ಇನ್ನು, ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿದಿತ್ತು. ಆದರೆ. ಲಾಕ್​ಡೌನ್​ ಇದ್ದಿದ್ದರಿಂದ ಜನರಿಗೆ ಯಾವುದೇ ತೊಂದರೆ ಉಂಟಾಗಿರಲಿಲ್ಲ.  ಸದ್ಯ ಒಂದು ವಾರದ ಲಾಕ್​ಡೌ​ನ್ ಪೂರ್ಣಗೊಂಡಿದೆ.
  Published by:Rajesh Duggumane
  First published: