HOME » NEWS » State » BANGALORE VIOLENCE NIA OFFICIALS INQUIRING FORMER MAYOR SAMPATH RAJ TODAY IN BENGALURU RIOTS CASE KMTV SCT

ಡಿಜೆ ಹಳ್ಳಿ,ಕೆಜಿ ಹಳ್ಳಿ ಗಲಭೆ ಪ್ರಕರಣ; ಇಂದು ಕೂಡ ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆ

ನಿನ್ನೆ ನಾಲ್ಕು ಗಂಟೆ ವಿಚಾರಣೆ ನಡೆಸಿದರೂ ಕೂಡ ಸಂಪತ್ ರಾಜ್ ಗಲಭೆ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅದರಿಂದ ಇಂದು ಸಹ ಸಂಪತ್ ರಾಜ್ ಅವರ ವಿಚಾರಣೆ  ನಡೆಸಲು ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ.

news18-kannada
Updated:November 24, 2020, 11:39 AM IST
ಡಿಜೆ ಹಳ್ಳಿ,ಕೆಜಿ ಹಳ್ಳಿ ಗಲಭೆ ಪ್ರಕರಣ; ಇಂದು ಕೂಡ ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆ
ಡಿಜೆ ಹಳ್ಳಿ ಗಲಭೆಯಲ್ಲಿ ಜಖಂಗೊಂಡ ವಾಹನಗಳು.
  • Share this:
ಬೆಂಗಳೂರು (ನ. 24): ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಗೆ ಹೊಸ ತಲೆನೋವು ಶುರುವಾಗಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣ ಹಾಗೂ ಪೊಲೀಸ್ ಠಾಣೆಗಳ ಮೇಲಿನ ದಾಳಿ ಸಂಬಂಧ ಎನ್ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಸಂಪತ್ ರಾಜ್ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮಾಜಿ ಮೇಯರ್ ವಿಚಾರಣೆ ನಡೆಸುವ ಸಲುವಾಗಿ ಎನ್ಐಎ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದಿದ್ದು, ಅದರಂತೆ ನಿನ್ನೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದ ಎನ್ಐಎ ಅಧಿಕಾರಿಗಳ ತಂಡ ಸುಮಾರು ನಾಲ್ಕು ಗಂಟೆಗಳ ಕಾಲ ಸಂಪತ್ ರಾಜ್ ಅವರ ವಿಚಾರಣೆ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಹಾಗೂ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲಿನ ದಾಳಿ ಸಂಬಂಧ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದಾರೆ. ನಿನ್ನೆ ನಾಲ್ಕು ಗಂಟೆ ವಿಚಾರಣೆ ನಡೆಸಿದರೂ ಕೂಡ ಸಂಪತ್ ರಾಜ್ ಗಲಭೆ ಬಗ್ಗೆ ಗೊಂದಲದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಅದರಿಂದ ಇಂದು ಸಹ ಸಂಪತ್ ರಾಜ್ ಅವರ ವಿಚಾರಣೆ  ನಡೆಸಲು ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ.


ಎನ್ಐಎ ಅಧಿಕಾರಿಗಳು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲಿನ ದಾಳಿ ಸಂಬಂಧ ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಸುಮಾರು 160ಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕೆಲವು ಪ್ರಮುಖ ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ಮಾಜಿ ಮೇಯರ್ ಸಂಪತ್ ರಾಜ್ ವಿಚಾರಣೆಗೆ ಮುಂದಾಗಿದ್ದಾರಂತೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿ ಮಾಜಿ ಮೇಯರ್ ಕೈವಾಡದ ಗುಮಾನಿ ಇದ್ದು, ಆ ಸಲುವಾಗಿ ಸಂಪತ್ ರಾಜ್ ಅವರಿಂದ ಹೇಳಿಕೆ ಪಡೆಯಲು ಎನ್ಐಎ ಅಧಿಕಾರಿಗಳು ಮುಂದಾಗಿದ್ದಾರೆ.
Published by: Sushma Chakre
First published: November 24, 2020, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading