ಬೆಂಗಳೂರು ಗಲಭೆ ಪ್ರಕರಣ: ಆರು ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರು

ಗಲಭೆಗೂ ಮುನ್ನ ಮುಜಾಯಿಲ್ ಸಭೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಠಾಣೆ ಬಳಿ ಜಮಾಯಿಸಿದ್ದ ಹಿನ್ನಲೆಯಲ್ಲಿ ದೂರವಾಣಿ ಕರೆ ಹಾಗೂ ವಾಟ್ಸ್ ಆ್ಯಪ್ ಗ್ರೂಪ್​​ಗಳ ಪರಿಶೀಲನೆ ಮಾಡಲಾಗುತ್ತಿದೆ.

news18-kannada
Updated:August 13, 2020, 9:40 AM IST
ಬೆಂಗಳೂರು ಗಲಭೆ ಪ್ರಕರಣ: ಆರು ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರು
ಗಲಭೆಯಲ್ಲಿ ನಾಶವಾಗಿರುವುದು
  • Share this:
ಬೆಂಗಳೂರು (ಆ.13): ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​​ ಹಾಕಿದ್ದಕ್ಕೆ ಡಿಜೆ ಹಳ್ಳಿ , ಕೆಜಿ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಈ ಗಲಭೆ ಹಿಂದೆ ಯಾರಿದ್ದಾರೆ ಎಂಬುದನ್ನು ಪೊಲೀಸರಿ ಪತ್ತೆ ಹಚ್ಚುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ವೇಳೆ ಪೊಲೀಸರಿಗೆ ಪ್ರಮುಖ ಮಾಹಿತಿ ಒಂದು ಸಿಕ್ಕಿದೆ ಎನ್ನಲಾಗಿದೆ. ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ನಡೆದ ದಾಂಧಲೆಯಲ್ಲಿ ಸ್ಥಳೀಯರು ಪಾಲ್ಗೊಂಡಿಲ್ಲ ಎಂಬುದು ಪೊಲೀಸರ ಲೆಕ್ಕಾಚಾರ. ಸ್ಥಳೀಯರ ಗುಂಪು ದಾಂಧಲೆ ಮಾಡಲು ಹೋದರೆ ಗುರುತು ಪತ್ತೆ ಮಾಡುವ ಸಂಭವ ಇರುತ್ತದೆ. ಇದೇ ಕಾರಣಕ್ಕೆ ಪುಂಡರು ಶಿವಾಜಿನಗರ, ಗೋರಿಪಾಳ್ಯ, ಚಾಮರಾಜಪೇಟೆ ಭಾಗದಿಂದ ಬಂದು ಗಲಭೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಪ್ರಕರಣದ ಆರೋಪಿ ಮುಜಾಯಿಲ್ ಪಾಷ ಸೇರಿದಂತೆ ಬಂಧಿತ ಆರೋಪಿಗಳ ಮೊಬೈಲ್ ಕರೆಗಳನ್ನು ಸಿಸಿಬಿ ತಾಂತ್ರಿಕ ವಿಭಾಗ ಪರಿಶೀಲನೆ ಮಾಡುತ್ತಿದೆ.

ಗಲಭೆಗೂ ಮುನ್ನ ಮುಜಾಯಿಲ್ ಸಭೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಠಾಣೆ ಬಳಿ ಜಮಾಯಿಸಿದ್ದ ಹಿನ್ನಲೆಯಲ್ಲಿ ದೂರವಾಣಿ ಕರೆ ಹಾಗೂ ವಾಟ್ಸ್ ಆ್ಯಪ್ ಗ್ರೂಪ್​​ಗಳ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿ ಮುಜಾಯಿಲ್ ಜೊತೆ ಎಸ್​ಡಿಪಿಐನ ಮೂರ್ನಾಲ್ಕು ಸದಸ್ಯರು ಭಾಗಿಯಾಗಿರುವ ಶಂಕೆ ಇದೆ.

ಈ ಮೊದಲು ಅರೆಸ್ಟ್​ ಆಗಿದ್ದರು!:

ಬಂಧಿತರಲ್ಲಿ ಕೆಲವರು ಡ್ರಗ್ಸ್ , ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ದಾಂಧಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಲ್ಲಿ ಕೆಲವರು ಈ ಮೊದಲು ಗಾಂಜಾ ಕೇಸ್ ಮತ್ತು ರಾಬರಿ ಕೇಸ್ ನಲ್ಲಿ ಬಂಧನವಾಗಿದ್ದರು.

ಆರು ಆಯಾಮಗಳಲ್ಲಿ ತನಿಖೆ :

ಸದ್ಯ ಪೊಲೀಸರು ಗಲಭೆ ಆಯಾಮವನ್ನು ಆರು ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅವುಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
  • ಸಿಸಿಟಿವಿ ದೃಶ್ಯಾವಳಿ ಮತ್ತು ಮಾದ್ಯಮಗಳಲ್ಲಿ ಬಂದ ದೃಶ್ಯ ಆಧರಿಸಿ ತನಿಖೆ

  • ಆರೋಪಿಗಳ ಮೊಬೈಲ್ ಕರೆ ಹಾಗೂ ಮೆಸೇಜ್ ಗಳ ಪರಿಶೀಲನೆ ಮತ್ತು ಠಾಣಾ ಬಳಿ ಜಮಾಯಿಸಿದ್ದ ಸ್ಥಳದಲ್ಲಿನ ಉದ್ರಿಕ್ತರ ಗುಂಪಿನ ಮೊಬೈಲ್ ಟ್ರಾಕ್

  • ವ್ಯವಸ್ಥಿತವಾಗಿ ಸಂಚು ರೂಪಿಸಿದ ಹಿನ್ನಲೆ ಮೊದಲು ಸಭೆ ನಡೆಸಿದ್ದ ಜಾಗ ಹಾಗೂ ಸ್ಥಳೀಯರಿಂದ ಮಾಹಿತಿ..

  • ಮುಜಾಯಿಲ್ ಪಾಷ ಮತ್ತು ಉಳಿದ ಆರೋಪಿಗಳ ತೀವ್ರ ವಿಚಾರಣೆ..

  • ಆರೋಪಿ ನವೀನ್ ಪ್ರಚೋದಿತ ಪೋಸ್ಟ್ ಮಾಡಿದ್ದ ಬಗ್ಗೆ ಹಾಗೂ ಕುಟುಂಬಸ್ಥರ ವಿಚಾರಣೆ.

  • ಪೊಲೀಸ್ ವಾಹನಗಳನ್ನ ಜಖಂ ಮಾಡಿ ಮಾರಕಾಸ್ತ್ರಗಳಿಂದ ಸಿಬ್ಬಂದಿ ಮೇಲೆ‌ ಹಲ್ಲೆ ನಡೆಸಿದ್ದ ಪುಂಡರ ಶೋಧಕಾರ್ಯಕ್ಕೆ ಸ್ಥಳೀಯರ ಸಹಾಯ ‌ಪಡೆಯಲು ಮುಂದಾಗಿರೋ ಒಂದು ತಂಡ
ಏನಿದು ಪ್ರಕರಣ?:

ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಅವರು ತಮ್ಮ ಫೇಸ್​ಬುಕ್​ನಲ್ಲಿ ಪ್ರವಾದಿ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಇದನ್ನು ಆಕ್ಷೇಪಿಸಿ ಮಂಗಳವಾರ ರಾತ್ರಿ ಸಾವಿರಕ್ಕೂ ಹೆಚ್ಚು ಜನರು ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಗಲಭೆ ನಡೆಸಿದ್ದರು. ಕಾಂಗ್ರೆಸ್ ಶಾಸಕ ಅಖಂಡ ಅವರ ಮನೆಯನ್ನ ಸುಟ್ಟು ಹಾಕಿದ್ದರು. ಪೊಲೀಸ್ ಠಾಣೆಯನ್ನು ಗುರಿ ಮಾಡಿ ಧ್ವಂಸ ಮಾಡಿದ್ದರು. ರಾತ್ರಿ 3 ಗಂಟೆಯವರೆಗೆ ನಡೆದ ಈ ದಾಂಧಲೆಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದರು. ಗಲಭೆಕೋರರ ದಾಳಿಯಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಇದೇ ವೇಳೆ, ಪೊಲೀಸರು ನೂರಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದರು.
Published by: Rajesh Duggumane
First published: August 13, 2020, 8:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading