ಬೆಂಗಳೂರು ಗಲಬೆ: ಡಿಜಿ ಹಳ್ಳಿ ಘಟನೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು: ಡಿಕೆ ಶಿವಕುಮಾರ್​

DK Shivakumar: ಡಿಜೆ ಹಳ್ಳಿ ಸೂಕ್ಷ್ಮ ಪ್ರದೇಶ ಅಂತ ಗೊತ್ತು. ಅಲ್ಲಿ ಒಂದು ಸಣ್ಣ ಘಟನೆ ನಡೆದರೂ ಅಲ್ಲಿ ಜನರು ಆತಂಕ ಪಡುತ್ತಾರೆ. ಪೊಲೀಸರು ಸ್ಟೇಷನ್ ರಕ್ಷಣೆ ಮಾಡಿಕೊಳ್ಳದ ಮೇಲೆ, ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ. ಸತ್ಯಾಂಶ ತಿಳಿಯುವುದಕ್ಕೆ ನಾವು ಡಾ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುತ್ತಿದ್ದೇವೆ. ನಾವು ಈಗ ಎಲ್ಲಾ ಅಲ್ಲಿಗೆ ಹೋಗುತ್ತಿದ್ದೇವೆ. ಶಾಸಕರ ಮನೆಗೆ ಭೇಟಿ ನೀಡುತ್ತಿದ್ದೇವೆ ಎಂದು ಹೇಳಿದರು.

news18-kannada
Updated:August 12, 2020, 4:20 PM IST
ಬೆಂಗಳೂರು ಗಲಬೆ: ಡಿಜಿ ಹಳ್ಳಿ ಘಟನೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು: ಡಿಕೆ ಶಿವಕುಮಾರ್​
ಡಿ.ಕೆ ಶಿವಕುಮಾರ್​​
  • Share this:
ಬೆಂಗಳೂರು; ನಿನ್ನೆಯ ಡಿಜಿ ಹಳ್ಳಿ ಘಟನೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಕಾನೂನು ವಿರೋಧಿ ಕೃತ್ಯಕ್ಕೆ ನಮ್ಮ ಖಂಡನೆ ಇದೆ. ಯಾವುದೇ ಧರ್ಮ, ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳಿಗೆ ಖಂಡನೆ ಇದೆ. ನವೀನ್ ಕಟ್ಟಾ ಬಿಜೆಪಿ ಅಭಿಮಾನಿ. ಆತ ಬಿಜೆಪಿಗೆ ಮತ ಹಾಕಿದ್ದ ಬಗ್ಗೆಯೂ ಪೋಸ್ಟ್ ಮಾಡಿದ್ದಾನೆ. ನವೀನ್ ಪ್ರಚೋದನಕಾರಿ ಹೇಳಿಕೆ, ಪೋಸ್ಟ್ ಮಾಡುತ್ತಿದ್ದ. ನವೀನ್​ಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೂ ರಾಜಕೀಯ ಸಂಬಂಧ ಇಲ್ಲ. ನವೀನ್​ಗೆ ಬಿಜೆಪಿ ಜೊತೆ ನಿಕಟ ಸಂಪರ್ಕ ಇತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ರಾಮಲಿಂಗಾರೆಡ್ಡಿ, ಬಿ.ಕೆ. ಹರಿಪ್ರಸಾದ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ, ಸಲೀಂ ಅಹಮದ್, ನಾಸೀರ್ ಅಹಮದ್ ಭಾಗಿ ಈಶ್ವರ್ ಖಂಡ್ರೆ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಇಲ್ಲಿ ಮಾತನಾಡಿದ ಡಿಕೆಶಿ, ಪೊಲೀಸರು ದೂರು ಬಂದಾಗಲೇ ಕ್ರಮ ತೆಗೆದುಕೊಳ್ಳಬೇಕಿತ್ತು. ಘಟನೆಗೆ ಪೊಲೀಸರೇ ಕಾರಣ. ಅವರ ವಿಳಂಬವೇ ಕಾರಣ. ಪೊಲೀಸರು ಘಟನೆ ತಡೆಯಲು ವಿಫಲರಾಗಿದ್ದಾರೆ ಎಂದು ಆರೋಪ ಮಾಡಿದರು.

ಪೊಲೀಸರು ಶಾಸಕರು, ಶಾಸಕರ ಮನೆಗೂ ರಕ್ಷಣೆ ಕೊಡಲಿಲ್ಲ. ಪೊಲೀಸರು ಸುಮೋಟೋ ಅಡಿ ದೂರು ದಾಖಲಿಸಿ ಸಂಜೆಯೇ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ ಪೊಲೀಸರು ವಿಳಂಬ ಮಾಡಿದರು. ಆ ಭಾಗ ಸೂಕ್ಚ್ಮ ಪ್ರದೇಶ. ಫೇಸ್ ಬುಕ್ ಪೋಸ್ಟ್ ಬಂದಾಗ ಪೊಲೀಸರು ಯಾಕೆ ಸುಮ್ಮನಿದ್ದರು. ಪೊಲೀಸರಿಗೆ ಇದು ಗೊತ್ತಿದ್ದೂ ಸುಮ್ಮನಿದ್ದರು.  ಘಟನೆಯ ಹೊಣೆಯನ್ನು ಪೊಲೀಸರೇ ಹೊತ್ತುಕೊಳ್ಳಬೇಕು. ಪೊಲೀಸ್ ಠಾಣೆಯನ್ನೇ ಪೊಲೀಸರು ರಕ್ಷಿಸಿಕೊಳ್ಳಲು ಆಗಲಿಲ್ಲ. ನಮ್ಮ ಶಾಸಕರಿಗೂ ರಕ್ಷಣೆ ಕೊಡಲಿಲ್ಲ. ಘಟನೆ ಹಿಂದೆ ಸಂಚು ಇದೆ. ಘಟನೆ ಬಗ್ಗೆ ಪರಿಶೀಲನೆಗೆ ನಮ್ಮ 6 ಜನ ನಾಯಕರ ತಂಡ ಹೋಗುತ್ತಿದೆ. ಜೊತೆಗೆ ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಹೋಗುತ್ತೇನೆ ಎಂದು ಹೇಳಿದರು.

ನಮ್ಮ ಶಾಸಕರ ಜೊತೆ ನಾನು ನಿರಂತರ ಸಂರ್ಪಕದಲ್ಲಿದ್ದೇನೆ. ನಿನ್ನೆ ರಾತ್ರಿ 9 ಗಂಟೆಗೆ ಅವರ ಜೊತೆ ಮಾತಾಡಿದ್ದೇನೆ. ಒಂದು ವೇಳೆ ನಮ್ಮ ಶಾಸಕರನ್ನು ಬೇರೆಡೆಗೆ ಸ್ಥಳಾಂತರ ಮಾಡದಿದ್ದರೆ ಅವರ ಪ್ರಾಣಕ್ಕೆ ಅಪಾಯ ಉಂಟಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದರು.

ಘಟನೆಗೆ ಎಸ್​ಡಿಪಿಐ ಮತ್ತು ಪಿಎಫ್​ಐ ಸಂಘಟನೆ ನಿಷೇಧ ವಿಚಾರವಾಗಿ ಮಾತನಾಡಿದ ಡಿಕೆಶಿ, ಸರ್ಕಾರದ ನಿರ್ಧಾರಗಳ ಬಗ್ಗೆ ನಾವು ಮಧ್ಯ ಪ್ರವೇಶ ಮಾಡಲ್ಲ. ಇದಕ್ಕೆ ಪ್ರಚೋದನೆ ಮಾಡಿದವರ ಮೇಲೆ ಕ್ರಮ ಆಗಬೇಕು. ಪ್ರಚೋದನೆ ನೀಡಿದ ಸಂಘಟನೆ ಮಾಡಿದ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.ಡಿಜೆ ಹಳ್ಳಿ ಸೂಕ್ಷ್ಮ ಪ್ರದೇಶ ಅಂತ ಗೊತ್ತು. ಅಲ್ಲಿ ಒಂದು ಸಣ್ಣ ಘಟನೆ ನಡೆದರೂ ಅಲ್ಲಿ ಜನರು ಆತಂಕ ಪಡುತ್ತಾರೆ. ಪೊಲೀಸರು ಸ್ಟೇಷನ್ ರಕ್ಷಣೆ ಮಾಡಿಕೊಳ್ಳದ ಮೇಲೆ, ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ. ಸತ್ಯಾಂಶ ತಿಳಿಯುವುದಕ್ಕೆ ನಾವು ಡಾ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುತ್ತಿದ್ದೇವೆ. ನಾವು ಈಗ ಎಲ್ಲಾ ಅಲ್ಲಿಗೆ ಹೋಗುತ್ತಿದ್ದೇವೆ. ಶಾಸಕರ ಮನೆಗೆ ಭೇಟಿ ನೀಡುತ್ತಿದ್ದೇವೆ. ನಾವು ರಾಜ್ಯದ ಶಾಂತಿ ಕಾಪಾಡಬೇಕಿದೆ. ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಸ್ವಾಗತ, ಅವರ ಶಾಸಕರು, ಸಚಿವರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಶಾಂತಿ ಕಾಪಾಡುವುದಕ್ಕೆ ಸಂಪೂರ್ಣ ಬೆಂಬಲ ಇದೆ. ಸುಮ್ಮಸುಮ್ಮನೆ ಯಾರ ಮೇಲು ತೊಂದರೆ ಕೊಡದು ಬೇಡ ಎಂದು ಹೇಳಿದರು.
Published by: HR Ramesh
First published: August 12, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading