ಬೆಂಗಳೂರು ಗಲಭೆ ಕೇಸ್; ಮಾಜಿ ಮೇಯರ್ ಸಂಪತ್ ರಾಜ್ ಕುರಿತು ಮೈಸೂರು, ಮಹಾರಾಷ್ಟ್ರದಲ್ಲೂ ಸಿಕ್ಕಿಲ್ಲ ಸುಳಿವು

Bangalore Violence: ಮಾಜಿ ಮೇಯರ್ ಸಂಪತ್ ರಾಜ್ ಮೈಸೂರಿನ ನಾಗರಹೊಳೆಯ ರೆಸಾರ್ಟ್​ನಲ್ಲಿ ಇರುವ ಬಗ್ಗೆ ಮಾಹಿತಿ ಗೊತ್ತಾದ ಕೂಡಲೆ ನಾಗರಹೊಳೆಗೆ ಹೋಗಿದ್ದ ಸಿಸಿಬಿ ಪೊಲೀಸರು ಬರಿಗೈಯಲ್ಲಿ ವಾಪಾಸ್ ಬಂದಿದ್ದಾರೆ.

ಸಂಪತ್ ರಾಜ್

ಸಂಪತ್ ರಾಜ್

  • Share this:
ಬೆಂಗಳೂರು (ನ. 8): ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ಮಾಜಿ‌ ಮೇಯರ್ ಸಂಪತ್ ರಾಜ್ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಲು ಮಹಾರಾಷ್ಟ್ರ ಹಾಗೂ ಮೈಸೂರಿಗೆ ಹೋಗಿದ್ದ ಸಿಸಿಬಿ ಅಧಿಕಾರಿಗಳ ತಂಡ ಬರಿಗೈಲಿ ವಾಪಾಸ್ ಬಂದಿದೆ. ಕಳೆದ ಒಂದು ವಾರದಿಂದ ಸಂಪತ್ ರಾಜ್‌ಗಾಗಿ ಹುಡುಕಾಟ ನಡೆಸುತ್ತಿದ್ದರೂ ಅವರು ಪತ್ತೆಯಾಗಿಲ್ಲ. ಸಂಪತ್ ರಾಜ್ ಮೈಸೂರಿನ ನಾಗರಹೊಳೆಯ ರೆಸಾರ್ಟ್​ನಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆ ಮಾಹಿತಿ ಗೊತ್ತಾದ ಕೂಡಲೆ ನಾಗರಹೊಳೆಗೆ ಹೋಗಿದ್ದ ಸಿಸಿಬಿ ಪೊಲೀಸರು ಬರಿಗೈಯಲ್ಲಿ ವಾಪಾಸ್ ಬಂದಿದ್ದಾರೆ.

ನಾಗರಹೊಳೆಗೆ ಪೊಲೀಸರು ಆಗಮಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹೋಗುವಷ್ಟರಲ್ಲಿ ಅಲ್ಲಿಂದ ಸಂಪತ್ ರಾಜ್ ಪರಾರಿಯಾಗಿದ್ದರು. ಅವರು ಮೈಸೂರಿನಿಂದ ಮಹಾರಾಷ್ಟ್ರದ ಕಡೆ ಹೋಗಿರುವ ಸಾಧ್ಯತೆ ಇದ್ದುದರಿಂದ 5 ದಿನಗಳ‌ ಹಿಂದೆ ಮಹಾರಾಷ್ಟ್ರಕ್ಕೆ ಹೋಗಿದ್ದ ಸಿಸಿಬಿ ಪೊಲೀಸರ ತಂಡ ಹುಡುಕಾಟ ನಡೆಸಿತ್ತು. ಮಹಾರಾಷ್ಟ್ರದಲ್ಲಿ ಹುಡುಕಾಟ ಮಾಡಿ ಸಿಸಿಬಿ ಪೊಲೀಸರು ಕೊನೆಗೆ ಬರಿಗೈಲಿ ವಾಪಾಸ್ ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಗಲಭೆ ಪ್ರಕರಣ; ಮಾಜಿ ಮೇಯರ್ ಸಂಪತ್ ರಾಜ್​​ಗಾಗಿ ತಮಿಳುನಾಡು ಗಡಿಯಲ್ಲಿ ಹುಡುಕಾಟ

ಸದ್ಯಕ್ಕೆ 35 ಸಿಸಿಬಿ ಪೊಲೀಸರಿಂದ ಮಾಜಿ ಮೇಯರ್ ಸಂಪತ್ ರಾಜ್ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರು ನಗರವನ್ನೆಲ್ಲ ಜಾಲಾಡುತ್ತಿರುವ ಸಿಸಿಬಿ ಪೊಲೀಸರಿಗೆ ಸಂಪತ್ ರಾಜ್ ಇನ್ನೂ ಸಿಕ್ಕಿಲ್ಲ. ಈ ಬಗ್ಗೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆ ಮಾಡಿದರೂ ಸುಳಿವು ಸಿಕ್ಕಿಲ್ಲ. ಈಗಾಗಲೇ ಸಿಸಿಬಿ ಪೊಲೀಸರು ಮಾಜಿ ಮೇಯರ್ ಸಂಪತ್ ರಾಜ್ ಅವರ ಬಾಮೈದ, ಆಪ್ತರನ್ನು ವಿಚಾರಣೆ ಮಾಡಿದ್ದಾರೆ. ಸುಮಾರು 50ಕ್ಕೂ ಅಧಿಕ ಜನರನ್ನು ವಿಚಾರಣೆ ಮಾಡಲಾಗಿದೆ. ಪೊಲೀಸರು ಯಾವುದೇ ಆಯಾಮದಲ್ಲಿ ಹುಡುಕಾಟ ಮಾಡಿದರೂ ಸುಳಿವು ಸಿಕ್ಕಿಲ್ಲ.

ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್​ಎಸ್ಕೇಪ್ ಆಗಲು ಕೆಲವು ಪ್ರಭಾವಿ ವ್ಯಕ್ತಿಗಳು ನೆರವು ನೀಡಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಮೈಸೂರು, ನಾಗರಹೊಳೆ, ತಮಿಳುನಾಡು ಹಾಗೂ ರಾಜ್ಯದ ಗಡಿ ಭಾಗದಲ್ಲಿ ಹುಡುಕಾಟ ನಡೆಸಿದ್ದರು. ಸಂಪತ್ ರಾಜ್, ಝಾಕೀರ್ ಹಾಗೂ ಆತನ ಸಹೋದರ ಯಾಸೀರ್​ಗಾಗಿ ಸಿಸಿಬಿ ಶೋಧ ನಡೆಸುತ್ತಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸಂಪತ್ ರಾಜ್ ಎರಡು ದಿನ ಬೆಂಗಳೂರಿನ ಹೃದಯ ಭಾಗದಲ್ಲೇ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸಿಸಿಬಿ ಪೊಲೀಸರು ಬೆನ್ನು ಬಿದ್ದ ಮಾಹಿತಿ ಪಡೆದು ಮೈಸೂರು ಕಡೆಗೆ ಹೊರಟಿರೋ ಶಂಕೆ ವ್ಯಕ್ತವಾಗಿತ್ತು.
Published by:Sushma Chakre
First published: