ಮಾರ್ಕೆಟ್​ನಲ್ಲಿ ಕಡಿಮೆ ಬೆಲೆಗೆ ಸಿಗುವ ತರಕಾರಿ ಅಂಗಡಿಗಳಲ್ಲಿ ದುಪ್ಪಟ್ಟಾಗೋದೇಕೆ?

Bangalore Vegetable Price: ರೈತರು ತಾವು ಬೆಳೆದ ತರಕಾರಿಗಳನ್ನು ನೇರವಾಗಿ ಮಾರುಕಟ್ಟೆಗೆ ತಂದು ಲೋಡ್ ನಲ್ಲಿ ಮಾರುತ್ತಾರೆ. ಅಲ್ಲಿಂದ ಮೂಟೆಗಳ ಲೆಕ್ಕದಲ್ಲಿ ಕೊಳ್ಳುವ ವ್ಯಾಪಾರಿಗಳು ನಂತರ ತಳ್ಳುವ ಗಾಡಿಗಳಲ್ಲಿ, ಮಾಲ್ ಅಥವಾ ಅಂಗಡಿಗಳಲ್ಲಿ ತಮ್ಮ ಲಾಭದ ಜೊತೆಗೆ ಮಾರುತ್ತಾರೆ.‌

news18-kannada
Updated:October 18, 2020, 1:57 PM IST
ಮಾರ್ಕೆಟ್​ನಲ್ಲಿ ಕಡಿಮೆ ಬೆಲೆಗೆ ಸಿಗುವ ತರಕಾರಿ ಅಂಗಡಿಗಳಲ್ಲಿ ದುಪ್ಪಟ್ಟಾಗೋದೇಕೆ?
ತರಕಾರಿ ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 18): ಮನೆ ಬಳಿ ತಳ್ಳುವ ಗಾಡಿಯಲ್ಲಿ ಅಥವಾ ಮಾಲ್ ಗಳಲ್ಲಿ ತರಕಾರಿ ಕೊಳ್ಳುವವರು ಬೆಲೆಗಳು ಹೆಚ್ಚಾಗಿದೆ ಅಂತಾರೆ. ಆದರೆ, ಕೆ.ಆರ್​. ಮಾರ್ಕೆಟ್ ಮತ್ತು ಹೋಲ್ ಸೇಲ್ ಮಾರ್ಕೆಟ್ ಗೆ ಹೋದರೆ ಬೆಲೆಗಳು ಕಡಿಮೆಯೇ ಇವೆ. ಹಾಗಿದ್ದರೆ ನಿಜವಾದ ತರಕಾರಿ ಬೆಲೆ ಏನು? ಇವೆರಡರ ನಡುವೆ ಅಜಗಜಾಂತರ ವ್ಯತ್ಯಾಸ ಬರೋಕೆ ಏನು ಕಾರಣ? ಇಲ್ಲಿದೆ ಪೂರ್ತಿ ಮಾಹಿತಿ...

ರೈತರು ತಾವು ಬೆಳೆದ ತರಕಾರಿಗಳನ್ನು ನೇರವಾಗಿ ಮಾರುಕಟ್ಟೆಗೆ ತಂದು ಲೋಡ್ ನಲ್ಲಿ ಮಾರುತ್ತಾರೆ. ಅಲ್ಲಿಂದ ಮೂಟೆಗಳ ಲೆಕ್ಕದಲ್ಲಿ ಕೊಳ್ಳುವ ವ್ಯಾಪಾರಿಗಳು ನಂತರ ತಳ್ಳುವ ಗಾಡಿಗಳಲ್ಲಿ, ಮಾಲ್ ಅಥವಾ ಅಂಗಡಿಗಳಲ್ಲಿ ತಮ್ಮ ಲಾಭದ ಜೊತೆಗೆ ಮಾರುತ್ತಾರೆ.‌ ಆದರೆ, ಈ ಎರಡೂ ಬೆಲೆಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಎಷ್ಟೆಂದರೆ ಅಂಗಡಿಗಳಲ್ಲಿ ಕೆಲವು ತರಕಾರಿಗಳಂತೂ ಒಂದಕ್ಕೆ ಎರಡರಷ್ಟು ಬೆಲೆಗಳಿಗೆ ಬಿಕರಿಯಾಗುತ್ತಿವೆ.


ತರಕಾರಿ  ಹೋಲ್ ಸೇಲ್ ಬೆಲೆ (ಪ್ರತಿ ಕೆಜಿ)ರೀಟೆಲ್ ಬೆಲೆ (ಪ್ರತಿ ಕೆಜಿ)
ಎಳೆ ಸೌತೆಕಾಯಿ 20 ರೂ. 30 ರೂ.
ಬದನೆಕಾಯಿ 20 ರೂ. 30 ರೂ.
ಈರುಳ್ಳಿ 30 ರೂ. 60ರಿಂದ 80 ರೂ.
ಟೊಮ್ಯಾಟೊ 25 ರೂ. 40 ರೂ.
ಆಲೂಗಡ್ಡೆ 30 ರೂ. 50 ರೂ.
ಬೀನ್ಸ್ 40 ರೂ. 70 ರೂ.

ಮಾರುಕಟ್ಟೆಗೆ ಹೋಗಿ ಬರುವಷ್ಟು ಸಮಯ ಇರೋದಿಲ್ಲ. ಹಾಗಾಗಿ ಬೆಲೆ ಜಾಸ್ತಿ ಅಂತ ಗೊತ್ತಿದ್ದರೂ ಬೇರೆ ದಾರಿ ಇಲ್ಲದೆ ಒಂದಕ್ಕೆ ಎರಡರಷ್ಟು ಬೆಲೆ ಕೊಟ್ಟು ತರಕಾರಿಗಳನ್ನು ಕೊಳ್ಳಬೇಕಾಗಿದೆ ಎನ್ನುತ್ತಾರೆ ಗ್ರಾಹಕರು. ಗ್ರಾಹಕರು ರೀಟೆಲ್ ಅಂಗಡಿಗೆ ಬರುವುದು ಉತ್ತಮ ಗುಣಮಟ್ಟದ ತರಕಾರಿ ಕೊಳ್ಳೋಕೆ. ಹಾಗಾಗಿ ನಾವು ಒಳ್ಳೆಯದನ್ನೇ ಆರಿಸಿ ತರುತ್ತೇವೆ. ಮಾರ್ಕೆಟಿನಲ್ಲಿ ಸಿಗುವ ಎಲ್ಲವೂ ಅಷ್ಟು ಒಳ್ಳೆ ಗುಣಮಟ್ಟದ್ದಲ್ಲ ಎಂದು ವ್ಯಾಪಾರಿಗಳು ತಮ್ಮ ಬೆಲೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ.

ಮಾರ್ಕೆಟ್ ಬೆಲೆಗಳಿಗಿಂತ ಸ್ವಲ್ಪ ಹೆಚ್ಚು ಕಡಿಮೆ ಇದ್ದರೆ ಪರವಾಗಿಲ್ಲ. ತಮಗೂ ಅಲ್ಲಿಯವರಗೆ ಹೋಗುವಷ್ಟು ಸಮಯ ಇಲ್ಲ ಎಂದು ಜನ ಮನೆ ಬಳಿಯೇ ಹಣ್ಣು ತರಕಾರಿ ಕೊಳ್ಳುವುದರಲ್ಲಿ ಅರ್ಥವಿದೆ. ಈಗಂತೂ ಕೊರೊನಾ ಭಯವೂ ಇರುವುದರಿಂದ ಹೆಚ್ಚು ಜನಸಂದಣಿ ಇರುವ ಮಾರ್ಕೆಟ್ ಗಳಿಗೆ ಹೋಗೋಕೂ ಜನರು ಭಯ ಪಡುವ ಪರಿಸ್ಥಿತಿ  ಇದೆ. ಆದರೆ, ಒಂದಕ್ಕೆ ಎರಡು ಮೂರು ಪಟ್ಟು ಬೆಲೆಗಳು ಹೆಚ್ಚಾದಾಗ ಗ್ರಾಹಕರ ಮೇಲಿನ ಹೊರೆ ಜಾಸ್ತಿಯಾಗುತ್ತದೆ. ಈ ವ್ಯತ್ಯಾಸಗಳು ಕಡಿಮೆಯಾಗಲಿ ಎನ್ನುವ ನಿರೀಕ್ಷೆ ಸಾಮಾನ್ಯ ಜನರದ್ದು.
Published by: Sushma Chakre
First published: October 18, 2020, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading