• Home
  • »
  • News
  • »
  • state
  • »
  • Bangalore University Student: ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪಾ ಸಾವು

Bangalore University Student: ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪಾ ಸಾವು

ಮೃತ ಶಿಲ್ಪಾ

ಮೃತ ಶಿಲ್ಪಾ

ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶಿಲ್ಪಾ ಶ್ರೀಧರ್ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ 14 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು.

  • News18 Kannada
  • Last Updated :
  • Bangalore [Bangalore], India
  • Share this:

ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ(Bangalore university Student) ಶಿಲ್ಪಾ ಇಂದು ಮೃತರಾಗಿದ್ದಾರೆ. ಬಸ್ ಹತ್ತುವಾಗ ಆಯತಪ್ಪಿ ಬಿದ್ದಿದ್ದ ಶಿಲ್ಪಾ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದಿತ್ತು. ಅಕ್ಟೋಬರ್ 11ರಂದು ಅಪಘಾತ  (Accident) ನಡೆದಿತ್ತು. ಈ ಘಟನೆ ಬಳಿಕ ರಸ್ತೆಗೆ ಇಳಿದಿದ್ದ ವಿವಿ ವಿದ್ಯಾರ್ಥಿಗಳು (Bangalore university Student Protest) ಖಾಸಗಿ ಬಸ್ (Private Bus) ಓಟಾಟಕ್ಕೆ ಬ್ರೇಕ್ ಹಾಕಬೇಕೆಂದು ದೊಡ್ಡ ಪ್ರತಿಭಟನೆ ಕೂಡಾ ನಡೆಸಿದ್ದರು. ಈಗಲೂ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಶಿಲ್ಪಾ ಆರೋಗ್ಯ ಚೇತರಿಕೆಗಾಗಿ ಸಾವಿರಾರರು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾ ಮೃತರಾಗಿದ್ದಾರೆ.


ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶಿಲ್ಪಾ ಶ್ರೀಧರ್ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ 14 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು.


ಅಪಘಾತದಲ್ಲಿ ಶಿಲ್ಪಾ ಸೊಂಟದ ಕೆಳಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್​ ಆಸ್ಪತ್ರೆಗೆ ಶಿಲ್ಪಾಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.


ದುಪ್ಪಟ್ಟು ದರ ವಸೂಲಿ!


ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಸಾಕಷ್ಟು ಜನರು ತಮ್ಮ ಸ್ವಂತ ಊರಿಗೆ ಹೋಗ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಬಸ್ಸುಗಳು ಟಿಕೆಟ್ ದರವನ್ನು ಡಬಲ್ ಪಡೆಯುತ್ತಿದ್ದಾರೆ.


ಖಾಸಗಿ ಬಸ್​ ದುಪ್ಪಟ್ಟು ದರ ವಸೂಲಿ ಆರೋಪ ಹಿನ್ನೆಲೆ ಆರ್​ಟಿಒ ಅಧಿಕಾರಿಗಳು ಖಾಸಗಿ ಬಸ್​ಗಳಿಗೆ ದಂಡ ವಿಧಿಸಿ, ಕೇಸ್ ಹಾಕಿದ್ರು. ಸಾಮಾನ್ಯ ದಿನದಲ್ಲಿ ಖಾಸಗಿ ಬಸ್‌ಗಳ ಟಿಕೆಟ್ ದರ 700 ರೂ.ನಿಂದ 800 ರೂ. ಆದರೆ ನಿನ್ನೆ 2,700 ರೂಪಾಯಿ. ಹೀಗಾಗಿ ಖಾಸಗಿ ಬಸ್‌ಗಳಿಗೆ ಆರ್​ಟಿಒ ಬಿಸಿ ಮುಟ್ಟಿಸಿದ್ರು.


ಕರೆಂಟ್ ಶಾಕ್, ಇಬ್ಬರು ಸಾವು!


ವಿದ್ಯುತ್ ತಂತಿ ತಗಲಿ ಇಬ್ಬರು ಛಾಯಾಗ್ರಾಹಕರು ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಲಕ್ಷ್ಮೀ ಫೋಟೋ ಸ್ಟುಡಿಯೋ ಮುಂದೆ ನಾಮಫಲಕ ಅಳವಡಿಸುವ ವೇಳೆ ಈ ಅವಘಡ ನಡೆದಿದೆ.


ಮದ್ದೂರಿನ ಮರಳಿಗ ಗ್ರಾಮದ ವಿಕೇಕ್ ಹಾಗೂ ಗೆಜ್ಜಲಗೆರೆ ಗ್ರಾಮದ ಮಧುಸೂದನ್ ಮೃತ ದುರ್ದೈವಿಗಳು. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಮೃತ ಛಾಯಾಗ್ರಾಹಕರ ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಇದನ್ನೂ ಓದಿ:  Bengaluru: ಬೆಂಗಳೂರಿನಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ! 'ಮಂಕೀಸ್ ಚೀಕ್' ಯೋಜನೆಗೆ ಬಿಬಿಎಂಪಿ ನಿರ್ಧಾರ

 ಬೈಕ್ ಅಪಘಾತ, ಇಬ್ಬರ ದುರ್ಮರಣ


ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್‌ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹೂವಳ್ಳಿ ಬಳಿ ನಡೆದಿದೆ. 46 ವರ್ಷದ ವೆಂಕಟರಮಣಪ್ಪ, 43 ವರ್ಷದ ರತ್ನಮ್ಮ ಮೃತ ದುರ್ದೈವಿಗಳು. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಸ್ತೆ ಬದಿ‌ ನಿಲ್ಲಿಸಿದ್ದ ಬೈಕ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೈಕ್‌ ಕೆಲವೇ ಕ್ಷಣಗಳಲ್ಲಿ ಸುಟ್ಟು ಕರಕಲಾಗಿದೆ. ಈ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ. ಹಾಶಿಂಪೀರ ಹಚ್ಚಾಳ ಎಂಬುವರ ಬೈಕ್ ಬೆಂಕಿಗಾಹುತಿ ಆಗಿದೆ.


ಸರ್ಕಾರದ ವಿರುದ್ಧ ಮುತಾಲಿಕ್ ಆಕ್ರೋಶ


ಪ್ರಾರ್ಥನಾ ಮಂದಿರಗಳ ಲೌಡ್ ಸ್ಪೀಕರ್​​ಗೆ ಸರ್ಕಾರ ಅನುಮತಿ ಕೊಟ್ಟಿದ್ದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೌಡ್​ ಸ್ಪೀಕರ್​ಗೆ ಕೊಟ್ಟ ಅನುಮತಿಯನ್ನ ಈ ಕೂಡಲೇ ವಾಪಸ್ ಪಡೆಯಬೇಕು ಅಂತಾ ಆಗ್ರಹಿಸಿದ್ದಾರೆ.


ಇದನ್ನೂ ಓದಿ:  V Somanna: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದೇ ತಪ್ಪಾಯ್ತಾ? ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ಸೋಮಣ್ಣ

 ಕಾನೂನು ಉಲ್ಲಂಘಿಸಿ ಮಸೀದಿಗಳಲ್ಲಿ ಮೈಕ್ ಬಳಕೆ ಆಗುತ್ತಿದೆ. ಮಸೀದಿಗಳಲ್ಲಿ ಬೆಳಗ್ಗೆ 5ಕ್ಕೆ ಲೌಡ್​ ಸ್ಪೀಕರ್ ಶುರುವಾಗುತ್ತೆ.. ಇದ್ರಿಂದ ಆಸ್ಪತ್ರೆ, ಶಿಕ್ಷಣಕ್ಕೆ ತೊಂದರೆ ಆಗ್ತಿದೆ. ಹೀಗಾಗಿ ಧ್ವನಿವರ್ಧಕಗಳಿಗೆ ಕೊಟ್ಟ ಅವಕಾಶವನ್ನ ಮತ್ತೆ ವಾಪಸ್ ಪಡೆಯಬೇಕು ಅಂತಾ ಆಗ್ರಹಿಸಿದ್ದಾರೆ.

Published by:Mahmadrafik K
First published: