ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿದವರಿಗೆ ಮೂತ್ರ ಮಾಡಲು ಬಾಟಲಿ ಕೊಡ್ತಾರಾ?; ಹರಿದಾಡ್ತಿದೆ ಹೀಗೊಂದು ಸುದ್ದಿ

ಫ್ಲೈ ಓವರ್​ ನಿರ್ಮಾಣ, ಮೆಟ್ರೋ ಕಾಮಗಾರಿ, ರಸ್ತೆ ನಿರ್ಮಾಣ/ದುರಸ್ತಿ ಹೀಗೆ ನಾನಾ ಕಾರಣಗಳಿಗೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇತ್ತೀಚೆಗಂತೂ ಅದು ಮಿತಿ ಮೀರುತ್ತಿದೆ ಎನ್ನುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಮೇಶ್​ ಕಾರಿನಲ್ಲಿ ಮನೆಗೆ ಸಾಗುತ್ತಿದ್ದ. ಎದುರು ನೋಡಿದರೆ ಟ್ರಾಫಿಕ್​ ಸಾಗರ. ಐದು ಹತ್ತು ನಿಮಿಷವಾದರೂ ಕಾರು ನಿಂತ ಜಾಗದಲ್ಲೇ ನಿಂತಿತ್ತು. ಈ ವೇಳೆ ಪಕ್ಕದ ಮನೆಯ ವ್ಯಕ್ತಿ ಅಲ್ಲಿಯೇ ಹಾದು ಹೋದ. ಇ ವೇಳೆ ರಮೇಶ್​ ಆತನನ್ನು ಕರೆದು, ಡ್ರಾಫ್​ ಕೊಡುವುದಾಗಿ ಹೇಳಿದ್ದ. ಈ ವೇಳೆ ನೆರೆ ಮನೆಯವನು ‘ಥ್ಯಾಂಕ್ಸ್​ ಅಣ್ಣಾ. ಆದರೆ ಸದ್ಯ, ನಾನು ಅರ್ಜೆಂಟ್​ನಲ್ಲಿದ್ದೇನೆ. ಹೀಗಾಗಿ ನಡೆದೇ ಹೋಗುತ್ತೇನೆ’ ಎಂದಿದ್ದ. ಹೀಗೊಂದು ಕುಹಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಬೆಂಗಳೂರು ಟ್ರಾಫಿಕ್ ವಿಚಾರ ಸದ್ಯ ಟ್ರೋಲ್​ ಮಾಡುವವರಿಗೆ ಆಹಾರವಾಗಿದೆ.

ಫ್ಲೈ ಓವರ್​ ನಿರ್ಮಾಣ, ಮೆಟ್ರೋ ಕಾಮಗಾರಿ, ರಸ್ತೆ ನಿರ್ಮಾಣ/ದುರಸ್ತಿ ಹೀಗೆ ನಾನಾ ಕಾರಣಗಳಿಗೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇತ್ತೀಚೆಗಂತೂ ಅದು ಮಿತಿ ಮೀರುತ್ತಿದೆ ಎನ್ನುವ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ. ಕಿಲೋಮೀಟರ್​ ಉದ್ದದ ಟ್ರಾಫಿಕ್​ ಜಾಮ್​ ಉಂಟಾಗುತ್ತಿದೆ. ಈ ಮಧ್ಯೆ ಗಾಳಿ ಸುದ್ದಿಯೊಂದು ಹರಿದಾಡಿದೆ.

ಅದೇನೆಂದರೆ, ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದವರಿಗೆ ಬೆಂಗಳೂರಿನ ಸಂಸ್ಥೆಯೊಂದು ಬಾಟಲಿಗಳನ್ನು ನೀಡಲಿದೆಯಂತೆ! ಕೆಲವೊಮ್ಮೆ ಮಳೆಯ ಕಾರಣದಿಂದಾಗಿ 2-3 ಗಂಟೆಗಳ ಕಾಲ ಟ್ರಾಫಿಕನಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಅಂಥ ಸಂದರ್ಭದಲ್ಲಿ ಪ್ರಕೃತಿ ಕರೆ ಬಂದರೆ ಏನು ಮಾಡುವುದು?. ಇಂಥವರಿಗಾಗಿ ಎರಡು ಲೀಟರ್​ ಖಾಲಿ ಬಾಟಲಿಯನ್ನು ಈ ಸ್ಟಾರ್ಟ್​​ಅಪ್​ ನೀಡಲಿದೆಯಂತೆ! ಇದಕ್ಕೆ ಸಂಸ್ಥೆ ಹಣವನ್ನೂ ಪಡೆಯಲಿದೆ.ಹೀಗೊಂದು ಸುದ್ದಿ ಎಲ್ಲ ಕಡೆಗಳಲ್ಲೂ ಹರಿದಾಡಿತ್ತಿದೆ. ಆದರೆ, ಇದು ನಕಲಿ ಸುದ್ದಿ ಎಂದು ಕೆಲವರು ಹೇಳಿದ್ದಾರೆ. ‘ಬೆಂಗಳೂರು ಟ್ರಾಫಿಕ್​ ಬಗ್ಗೆ ಕುಹಕವಾಡಲು ಕೆಲವರು ಹೀಗೆ ಮಾಡಿದ್ದಾರೆ,’ ಎನ್ನಲಾಗುತ್ತಿದೆ.

First published: