ಮರ ಕಡಿಯುವುದೊಂದೇ ಮಾರ್ಗವಲ್ಲ; ಬೆಂಗಳೂರಿನ ಟೆಕ್ಕಿಗಳಿಂದ ನಡೆದಿದೆ ಮರಗಳ ಸ್ಥಳಾಂತರ

Bengaluru Metro: ಮೆಟ್ರೋ ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ಈತನಕ 180 ಮರಗಳನ್ನು ಕಸಿ ಮಾಡಿ ಸಂರಕ್ಷಿಸಿದೆ. ಇನ್ನು ಸಾರ್ವಜನಿಕರೇ ಹೆಚ್ಚು ಆಸಕ್ತಿ ವಹಿಸಿ 115 ಮರಗಳನ್ನು ಸ್ಥಳಾಂತರಿಸಿ ಕಸಿ ಮಾಡಿಸಿ ಅವುಗಳಿಗೆ ಮರುಜೀವ ನೀಡಿದ್ದಾರೆ.

G Hareeshkumar | news18
Updated:June 2, 2020, 1:05 PM IST
ಮರ ಕಡಿಯುವುದೊಂದೇ ಮಾರ್ಗವಲ್ಲ; ಬೆಂಗಳೂರಿನ ಟೆಕ್ಕಿಗಳಿಂದ ನಡೆದಿದೆ ಮರಗಳ ಸ್ಥಳಾಂತರ
ಮರ
  • News18
  • Last Updated: June 2, 2020, 1:05 PM IST
  • Share this:
ಬೆಂಗಳೂರು(ಮೇ 15): ಬೆಂಗಳೂರಿನಲ್ಲಿ ಅಭಿವೃದ್ಧಿಯ ಓಟಕ್ಕೆ ಹಚ್ಚ ಹಸಿರಿನ ವಿಸ್ತೀರ್ಣ ಕಡಿಮೆಯಾಗಿದೆ. ಈ ಮಧ್ಯೆ ನಿಮಗೊಂದು ಒಳ್ಳೆ ಸುದ್ದಿ. ಮೆಟ್ರೋ ಕಾಮಗಾರಿಯಲ್ಲಿ ಸಾವಿರಾರು ಮರಗಳು ಧರಾಶಾಹಿಯಾಗಿರೋ ಮಧ್ಯೆ ಮಾರ್ಚ್​ನಲ್ಲಿ 2 ಬೃಹತ್​ಗಳನ್ನು ಕ್ರೌಡ್ ಫಂಡಿಂಗ್ ಬಳಸಿ ವರ್ಗಾಯಿಸಿ ಕಸಿ ಮಾಡಲಾಗಿತ್ತು. ಆ ಮರಗಳಲ್ಲಿ ಈಗ ಹಸಿರು ಚಿಗುರು ಮೂಡಿದೆ.

ಪ್ರಜ್ಞಾವಂತ ನಾಗರೀಕರು ಸ್ವಲ್ಪ ಆಸಕ್ತಿ, ಪ್ರಯತ್ನಪಟ್ಟಿರಲಿಲ್ಲ ಅಂದಿದ್ರೆ ಈ ಎರಡು ಮರಗಳು ಇಷ್ಟೊತ್ತಿಗೆ ಕಟ್ಟಿಗೆಯಾಗಿರುತ್ತಿದ್ದವು. ಈ ಎರಡು ಮರಗಳಲ್ಲಿ ಹಸಿರು ಚಿಗುರು ಮೂಡುತ್ತಿರಲಿಲ್ಲ. 70 ವರ್ಷ ಹಳೆಯ ಈ ಆಲದ ಮರ ಹಾಗೂ 30 ವರ್ಷದ ಈ ಅರಳಿಮರ ಈಗ ಅರಕೆರೆಯ ಕೆರೆ ಮೀಸಲು ಪ್ರದೇಶದಲ್ಲಿ ಈ ಮಳೆಗಾಲಕ್ಕೆ ಸೊಂಪಾಗಿ ಬೆಳೆಯಲು ಕಾದು ಕುಳಿತಿದೆ.

ಮರ ಕಡಿಯಂತೆ ಮನವಿ ಮಾಡಿದ್ದ ಟೆಕ್ಕಿಗಳು

ಗೊಟ್ಟಿಗೆರೆ -ನಾಗಾವರ ಮೆಟ್ರೋ ಕಾಮಗಾರಿಯಲ್ಲಿ 45 ಟನ್ ತೂಕದ ಈ ಆಲದ ಮರ ಹಾಗೂ 30 ಟನ್ ತೂಕದ ಅರಳಿ ಮರವನ್ನು ಕಡಿಯದಂತೆ ಜಾಯ್, ವೃಕ್ಷ ವೈದ್ಯ ವಿಜಯ್ ನಿಶಾಂತ್ ಮತ್ತು ಓರ್ವ ಮಹಿಳಾ ಟೆಕಿ ಮೆಟ್ರೋ, ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು‌. ಕೊನೆಗೆ ಈ ಮರಗಳನ್ನು ಅರೆಕೆರೆ ಕೆರೆ ಪ್ರದೇಶಕ್ಕೆ ಸ್ಥಳಾಂತರಿಸಿ ಕಸಿ ಮಾಡಲು 7 ಲಕ್ಷ ಖರ್ಚಾಗುತ್ತೆ ಅಂದಾಗ ಕ್ರೌಡ್ ಫಂಡಿಂಗ್ ಮಾಡಿ 2 ಲಕ್ಷ ರೂಪಾಯಿ ಸಂಗ್ರಹಿಸಿದ್ರು. ಉಳಿದ ಸಾಗಣೆ ವೆಚ್ಚವನ್ನು ಮೆಟ್ರೋ ಭರಿಸಿ ಈ ಮರವನ್ನು 4 ಕಿಲೋ ಮೀಟರ್ ದೂರದ ಅರಕೆರೆಗೆ ಮಾರ್ಚ್ 23 ರಂದು ದೊಡ್ಡ ಟ್ರಕ್ ನಲ್ಲಿ ಕ್ರೇನ್ ಸಹಾಯದಿಂದ 3 ದಿನ ಸಾಗಣೆ ಮಾಡಿ ಈ ಕೆರೆಯಲ್ಲಿ ಕಸಿ ಮಾಡಲಾಯ್ತು. ಇಂದು ಈ ಎರಡು ಮರಗಳು ಹಸಿರು ಚಿಗುರಿನಿಂದ ಕಂಗೊಳಿಸುತ್ತಿದೆ. ಅರಕೆರೆ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಅವರು ಈ ಮರಗಳ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಬಿಎಸ್​​ವೈಗೆ ವಯಸ್ಸಾಗಿದೆ, ಆದರೂ ಮಲಗಿದಾಗ ಸಿಎಂ ಖುರ್ಚಿಯದ್ದೇ ಕನಸು; ಮಾಜಿ ಸಿಎಂ ಸಿದ್ದರಾಮಯ್ಯ

ದಶಕಗಳಷ್ಟು ಹಳೆಯ ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ವರ್ಗಾವಣೆ ಮಾಡಿ ಕಸಿ ಮಾಡೋದು ಒಂದು ಚಾಲೆಂಜಿಂಗ್ ವಿಷಯ. ಈ ಮರಗಳನ್ನು ಇನ್ನೂ ಎರಡು ವರ್ಷಗಳ ಕಾಲ ಆರೈಕೆ ಮಾಡೋ ಅಗತ್ಯವಿದೆ. ಈ ಮರಗಳು ನಿಶ್ಚಿತವಾಗಿ ಬೆಳೆಯುತ್ತೆ ಎನ್ನುತ್ತಾರೆ ವೃಕ್ಷ ವೈದ್ಯ ವಿಜಯ್ ನಿಶಾಂತ್.

ಮೆಟ್ರೋ ಮೊದಲ ಹಂತ ಮತ್ತು ಎರಡನೇ ಹಂತದಲ್ಲಿ ಈತನಕ 180 ಮರಗಳನ್ನು ಕಸಿ ಮಾಡಿ ಸಂರಕ್ಷಿಸಿದೆ. ಇನ್ನು ಸಾರ್ವಜನಿಕರೇ ಹೆಚ್ಚು ಆಸಕ್ತಿ ವಹಿಸಿ 115 ಮರಗಳನ್ನು ಸ್ಥಳಾಂತರಿಸಿ ಕಸಿ ಮಾಡಿಸಿ ಅವುಗಳಿಗೆ ಮರುಜೀವ ನೀಡಿದ್ದಾರೆ.(ವರದಿ: ಶ್ಯಾಮ್ ಎಸ್​​)
First published: May 15, 2019, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading