Bengaluru Crime: ಆಸ್ತಿಗಾಗಿ ಪೀಡಿಸುತ್ತಿದ್ದ ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

Bangalore Crime: ಆಂಧ್ರ ಪ್ರದೇಶದ ಮೂಲದ ಟೆಕ್ಕಿ ಶ್ರೀನಾಥ್ 2009ರಲ್ಲಿ ರೇಖಾ ಎಂಬುವವರ ಜೊತೆ ಮದುವೆಯಾಗಿದ್ದರು. ಗಂಡ-ಹೆಂಡತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದರು. ಬ್ಯಾಂಕ್ ನಲ್ಲಿ ಸಾಲ ಮಾಡಿ ಅಪಾರ್ಟ್​ಮೆಂಟ್​ನಲ್ಲಿ ಇತ್ತೀಚೆಗೆ ಫ್ಲಾಟ್​ ಖರೀದಿಸಿದ್ದರು

news18-kannada
Updated:December 14, 2019, 9:11 AM IST
Bengaluru Crime: ಆಸ್ತಿಗಾಗಿ ಪೀಡಿಸುತ್ತಿದ್ದ ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ. 14): ಹೆಂಡತಿಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶ್ರೀನಾಥ್ ಎಂಬ 39 ವರ್ಷದ ಟೆಕ್ಕಿ ಸಾವನ್ನಪ್ಪಿದ ವ್ಯಕ್ತಿ.

ಬೆಳ್ಳಂದೂರು ಠಾಣಾ ವ್ಯಾಪ್ತಿಯ ಹಾಲನಾಯಕನಹಳ್ಳಿಯಲ್ಲಿ ಘಟನೆ ನಡೆದಿದ್ದು, ಅಸ್ಟ್ರೋ ಮ್ಯಾನ್ಷನ್ ಅಪಾರ್ಟ್​ಮೆಂಟ್​ನ ಪ್ಲಾಟ್​ನಲ್ಲಿ ಶ್ರೀನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಮೂಲದ ಟೆಕ್ಕಿ ಶ್ರೀನಾಥ್ 2009ರಲ್ಲಿ ರೇಖಾ ಎಂಬುವವರ ಜೊತೆ ಮದುವೆಯಾಗಿದ್ದರು. ಗಂಡ-ಹೆಂಡತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದರು. ಬ್ಯಾಂಕ್ ನಲ್ಲಿ ಸಾಲ ಮಾಡಿ ಅಪಾರ್ಟ್​ಮೆಂಟ್​ನಲ್ಲಿ ಇತ್ತೀಚೆಗೆ ಫ್ಲಾಟ್​ ಖರೀದಿಸಿದ್ದರು.

ಪತಿ ಶ್ರೀನಾಥ್​ ಪ್ರತಿ ತಿಂಗಳು ಬ್ಯಾಂಕ್​ನ ಸಾಲ ಕಟ್ಟುತ್ತಿದ್ದರು. ಆದರೆ, ಹೆಂಡತಿ ರೇಖಾ ಮಾತ್ರ ಐಷಾರಾಮಿ ಜೀವನ ನಡೆಸಿ ದುಂದು ವೆಚ್ಚ ಮಾಡುತ್ತಿದ್ದರು. ಕಡಿಮೆ ಖರ್ಚು ಮಾಡುವಂತೆ ಪತ್ನಿಗೆ ಶ್ರೀನಾಥ್​ ಬುದ್ಧಿ ಹೇಳಿದ್ದರು. ಗಂಡನ ಮಾತನ್ನು ಕೇಳದೆ ಕೋಪಗೊಂಡ ರೇಖಾ ಪ್ರತಿದಿನ ಗಂಡನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಬ್ಯಾಂಕ್​ನ ಸಾಲ ತೀರಿಸಲು ಆತನ ತಂದೆ-ತಾಯಿಯಿಂದ ಆಸ್ತಿ ಪಡೆದುಕೊಂಡು ಬರುವಂತೆ ಪೀಡಿಸುತ್ತಿದ್ದರು. ಇಲ್ಲದೆ ಇದ್ದರೆ ವಿಚ್ಚೇದನ ನೀಡುವುದಾಗಿ ಬೆದರಿಕೆ ಹಾಕಿದ್ದರು.

ಬೆಂಗಳೂರಿನಲ್ಲಿ ಕಳ್ಳತನ ಮಾಡಲು ಹೋದವನಿಗೆ ಮನೆಯೊಡತಿಯಿಂದ ಸರ್​ಪ್ರೈಸ್​ ಗಿಫ್ಟ್​​

ಹೆಂಡತಿಯ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಶ್ರೀನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀನಾಥ್​ ಅವರ ತಂದೆ ನಾಗೇಶ್ವರ ರಾವ್ ನೀಡಿದ ದೂರಿನ ಹಿನ್ನೆಲೆ ಎಫ್​ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಐಪಿಸಿ ಸೆಕ್ಷನ್ 34ರ ಅಪರಾಧಿಕ ಸಂಚು ಅಡಿ ಮೃತ ವ್ಯಕ್ತಿಯ ಪತ್ನಿ ರೇಖಾ ಹಾಗೂ ಆಕೆಯ ಪೋಷಕರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.
First published: December 14, 2019, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading