ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರ ವಿನೂತನ ಪ್ರಯತ್ನಕ್ಕೆ ಉತ್ತಮ ಸ್ಪಂದನೆ

ವಯೋ ವೃದ್ದರಿಗೆ ಏನೇ ಸಮಸ್ಯೆಯಾದರೂ ಕೂಡಲೇ ಮನೆಗೆ ಭೇಟಿ ಕೊಡುತ್ತಾರೆ. ಇತ್ತೀಚೆಗೆ ಗಿರಿನಗರದಲ್ಲಿ ಸರಗಳ್ಳತನವಾಗಿದ್ದ ವಯೋವೃದ್ದೆಯ ಮನೆಗೆ  ಡಿಸಿಪಿ ಭೇಟಿಕೊಟ್ಟಿದ್ದರು. ಅಷ್ಟೇ ಅಲ್ಲದೇ ಅನಾರೋಗ್ಯವುಳ್ಳ ವಯೋವೃದ್ದರ ಮಾಹಿತಿ ಪಡೆದು ಔಷಧಿಯನ್ನ ಪೊಲೀಸ್ ಸಿಬ್ಬಂದಿ ತಲುಪಿಸುತ್ತಿದ್ದಾರೆ.

ನಮ್ಮ ಹಿರಿಯರು ಕಾರ್ಯಕ್ರಮ

ನಮ್ಮ ಹಿರಿಯರು ಕಾರ್ಯಕ್ರಮ

  • Share this:
ಬೆಂಗಳೂರು(ಜೂ.09): ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರ ವಿನೂತನ ಪ್ರಯತ್ನದ ಫಲವಾಗಿ 'ನಮ್ಮ ಹಿರಿಯರು' ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಉತ್ತಮ ಸ್ಪಂದನೆ ಸಿಗುತ್ತಿದೆ.

ಪೊಲೀಸ್​ ಠಾಣೆಗೆ ಹಿರಿಯ ನಾಗರೀಕರು ಖುದ್ದು ಭೇಟಿ ಕೊಡುತ್ತಿದ್ದಾರೆ. ಸಹಾಯವಾಣಿ ಮೂಲಕವೂ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಒಂದೇ ವಾರದಲ್ಲಿ ಸಾವಿರಾರು ವಯೋವೃದ್ಧರಿಂದ ರಿಜಿಸ್ಟ್ರೇಷನ್ ಆಗಿದೆ.

ಹೌದು, ಒಂದೇ ವಾರದಲ್ಲಿ ಎಂಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಯೋವೃದ್ದರಿಂದ ನೊಂದಣಿ ಆಗಿದೆ. ಅದರಲ್ಲೂ ಜಯನಗರ ಮತ್ತು ಸಿಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ‌ ಹೆಚ್ಚು ವಯೋವೃದ್ದರಿಂದ‌ ರಿಜಿಸ್ಟ್ರೇಶನ್ ಆಗಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸಹಾಯವಾಣಿ ನಂಬರ್ಸ್ ಗೆ ನಿರೀಕ್ಷೆಗೂ ಮೀರಿದ ಕರೆಗಳು ಬರುತ್ತಿದ್ದು, ಆಯಾ ಠಾಣಾ ವ್ಯಾಪ್ತಿಯಲ್ಲಿ‌ ವಯೋವೃದ್ದರ ಜೊತೆ ಸಭೆ ನಡೆಸಿ ಅರಿವು ಮೂಡಿಸಲಾಗುತ್ತಿದೆ. ಹೀಗೆ ಕಷ್ಟ ಸುಖ-ದುಖ:ಗಳಿಗೆ ಪೊಲೀಸ್ ಇಲಾಖೆ ಜೊತೆಯಾಗಲಿದೆ ಎಂದು ಧೈರ್ಯ ಹೇಳಲಾಗುತ್ತಿದೆ.

ತೆಲಂಗಾಣದ ಬಳಿಕ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದುಗೊಳಿಸಿದ ತಮಿಳುನಾಡು ರಾಜ್ಯ ಸರ್ಕಾರ

ಲಾಕ್ ಡೌನ್ ವೇಳೆ ಒಬ್ಬಂಟಿಯಾಗಿರೋ ವಯೋವೃದ್ದರ ಕಷ್ಟಗಳಿಗೆ ಸ್ಪಂದಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ರ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ದಕ್ಷಿಣ ವಿಭಾಗದಲ್ಲಿ ಬರುವ ಎಂಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬೊಬ್ಬರಂತೆ ನೋಡೆಲ್ ಆಫೀಸರ್ ನೇಮಿಸಲಾಗಿದೆ. ಜೊತೆಗೆ ಪಿಎಸ್ ಐ ಮತ್ತು ಇಬ್ಭರು ಕಾನ್ಸ್ ಟೇಬಲ್ ಗಳನ್ನ ಆಯಾ ಠಾಣೆಗೆ ನಿಯೋಜನೆ ಮಾಡಲಾಗಿದೆ.

ವಯೋ ವೃದ್ದರಿಗೆ ಏನೇ ಸಮಸ್ಯೆಯಾದರೂ ಕೂಡಲೇ ಮನೆಗೆ ಭೇಟಿ ಕೊಡುತ್ತಾರೆ. ಇತ್ತೀಚೆಗೆ ಗಿರಿನಗರದಲ್ಲಿ ಸರಗಳ್ಳತನವಾಗಿದ್ದ ವಯೋವೃದ್ದೆಯ ಮನೆಗೆ  ಡಿಸಿಪಿ ಭೇಟಿಕೊಟ್ಟಿದ್ದರು. ಅಷ್ಟೇ ಅಲ್ಲದೇ ಅನಾರೋಗ್ಯವುಳ್ಳ ವಯೋವೃದ್ದರ ಮಾಹಿತಿ ಪಡೆದು ಔಷಧಿಯನ್ನ ಪೊಲೀಸ್ ಸಿಬ್ಬಂದಿ ತಲುಪಿಸುತ್ತಿದ್ದಾರೆ.

ಎಲ್ಲಾ ವಯೋವೃದ್ದರ ಸಂವಹನಕ್ಕೆ ವಾಟ್ಸ್ ಅಪ್ ಗ್ರೂಪ್ ಕ್ರಿಯೇಟ್ ಮಾಡಿದ್ದು, ವಯೋವೃದ್ದರ ಪ್ರತಿಕ್ರಿಯೆಗೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ‌.
First published: