ವೈದ್ಯರ ನಿರ್ಲಕ್ಷ್ಯಕ್ಕೆ ಜೀವಂತ ಹೆಣವಾದ ಮಹಿಳೆ; ಹೆಂಡತಿಯ ಜೀವ ಉಳಿಸಿಕೊಳ್ಳಲು ಬೆಂಗಳೂರು ಟೆಕ್ಕಿಯ ಶಪಥ

2015 ರಿಂದ 2019ರವರೆಗೆ 4 ಕೋಟಿ ರೂ.ಗೂ ಹೆಚ್ಚಿನ ಬಿಲ್‌ ಆಗಿದೆ. ಈಗಲೂ ನ್ಯಾಯಕ್ಕಾಗಿ, ತನ್ನ ಹೆಂಡತಿಯ ಆರೋಗ್ಯ ಸುಧಾರಿಸಲಿ ಅಂತ ಪ್ರತಿನಿತ್ಯ ರಿಜೇಶ್ ಅಲೆಯುತ್ತಿದ್ದಾರೆ.

ಹೆಂಡತಿ ಪೂನಂ ಜೊತೆ ರಿಜೇಶ್

ಹೆಂಡತಿ ಪೂನಂ ಜೊತೆ ರಿಜೇಶ್

  • Share this:
ಬೆಂಗಳೂರು (ಜ. 24): ಅದು 2015ರ ಜನವರಿ 3. ಆ ದಿನವನ್ನು ಮಾತ್ರ ರಿಜೇಶ್ ನಾಯರ್‌ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಗೆ ರಿಜೇಶ್​ ಅವರ ಹೆಂಡತಿ ಪೂನಂ ಹೊಟ್ಟೆ ನೋವು ಎಂದು ಬಂದು ಅಡ್ಮಿಟ್ ಆಗಿದ್ದ ದಿನ ಅದು. ಮಣಿಪಾಲ್ ಆಸ್ಪತ್ರೆಗೆ ಪೂನಂ  ಬರುತ್ತಿದ್ದಂತೆ ಚೆಕ್ ಮಾಡಿದ್ದ ವೈದ್ಯರು ಹೊಟ್ಟೆ ನೋವಿಗೆ ಏನೇನೋ ಕಾರಣ ಎಂದು  ಹೇಳಿ ಕೊನೆಗೆ ಮೋಷನ್​ನಲ್ಲಿ ಸಮಸ್ಯೆಯಾಗಿದೆ ಎಂದಿದ್ದರು.

ಆಪರೇಷನ್ ಮಾಡಿದರೆ ಮಾತ್ರ ಈ ಸಮಸ್ಯೆ ಸರಿಯಾಗುತ್ತದೆ. ಅದಕ್ಕೆ 3.5 ಲಕ್ಷ ಖರ್ಚಾಗುತ್ತದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಹೇಳಿದ್ದರು. ಪರವಾಗಿಲ್ಲ ಎಂದುಕೊಂಡಿದ್ದ ರಿಜೇಶ್ ಆಪರೇಷನ್ ಮಾಡಿ ಅಂತ ವೈದ್ಯರಿಗೆ ಹೇಳಿದ್ದರು. ಆಪರೇಷನ್ ಆದ ಸ್ವಲ್ಪ ಹೊತ್ತು ಆತನ ಹೆಂಡತಿ ಚೆನ್ನಾಗಿಯೇ ಇದ್ದಳು. ಆದರೆ, ಆಸ್ಪತ್ರೆಯ ಸಿಬ್ಬಂದಿ ಪೂನಂಗೆ ಹಾಕಿದ್ದ ಆಕ್ಸಿಜನ್ ಸಪ್ಲೈ ಕಟ್ ಆಗಿರೋದನ್ನು ನೋಡದೇ ಇದ್ದಿದ್ದು ಭಾರೀ ಎಡವಟ್ಟಾಗಿತ್ತು. ಆಕ್ಸಿಜನ್ ಕಟ್ ಆಗಿದ್ದರಿಂದ ಪೂನಂ ಮೆದುಳಿಗೆ ಹಾನಿಯಾಗಿತ್ತು. ನಂತರ 2 ತಿಂಗಳು ಕೋಮಾಗೆ ಹೋಗೋ ಪರಿಸ್ಥಿತಿ ನಿರ್ಮಾಣವಾಯಿತು ಎಂದು ರಿಜೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಹಿಂದೂಗಳಿಗೆ ನೀರು ಕೊಡುತ್ತಿಲ್ಲ; ಪ್ರಚೋದನಕಾರಿ ಟ್ವೀಟ್ ಮಾಡಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಕೇಸ್ ದಾಖಲು

ಪೂನಂ ರಾಣಾಗೆ ಕೋಮಾದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಸ್ವಲ್ಪ ಚೇತರಿಕೆ ಕಂಡಿದ್ದರು. ಆದರೆ, ಆ ವೇಳೆಗಾಗಲೇ ಪೂನಂ ಗಂಡ 86 ಲಕ್ಷ ಹಣ ಬಿಲ್ ಪಾವತಿ ಮಾಡಿದ್ದ. 25 ಲಕ್ಷ ಕೈಯಿಂದ ಹಾಕಿದ್ದ ರಿಜೇಶ್​ಗೆ ಇನ್ಷುರೆನ್ಸ್​ನಿಂದ 62 ಲಕ್ಷ ರೂ. ಸಿಕ್ಕಿತ್ತು. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಮಾರಿ ಬಿಲ್‌ ಕಟ್ಟಿದ್ದರು ರಿಜೇಶ್. ಇಷ್ಟಾದರೂ ಪೂನಂ ಆರೋಗ್ಯದಲ್ಲಿ ಚೇತರಿಕೆ ಕಾಣಲೇ ಇಲ್ಲ. ದಿನದಿಂದ ದಿನಕ್ಕೆ ಆಕೆಯ ಆರೋಗ್ಯ ಕ್ಷೀಣಿಸುತ್ತಿತ್ತು. ಈ ಮಧ್ಯೆ ಪೂನಂ ಚಿಕಿತ್ಸೆಯ ಮೆಡಿಕಲ್ ರೆಕಾರ್ಡ್ ಪಡೆದ ರಿಜೇಶ್ ನಿಮ್ಹಾನ್ಸ್ ವೈದ್ಯರಿಂದ ಸೆಕೆಂಡ್ ಒಪಿನಿಯನ್ ಪಡೆದಿದ್ದರು.  ವೈದ್ಯರ ಎಡವಟ್ಟಿನಿಂದ ಪೂನಂ ಬ್ರೈನ್ ಡ್ಯಾಮೇಜ್ ಆಗಿದೆ ಅಂತ ಆಗ ಗೊತ್ತಾಗಿತ್ತು.

ಪೂನಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇರಲಿಲ್ಲ. ಲಕ್ಷ-ಲಕ್ಷ ಬಿಲ್ ಕಟ್ಟಿದ ಮೇಲೆ ನಾವು ಚಿಕಿತ್ಸೆ ಕೊಡಲು ಆಗಲ್ಲ ಕರೆದುಕೊಂಡು ಹೋಗಿ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ರಿಜೇಶ್​ಗೆ ಹೇಳಿದ್ದರು. ಈ ನಡುವೆ ಪೂನಂಗೆ ಚಿಕಿತ್ಸೆ ನೀಡಿದ್ದ ವೈದ್ಯ ಸದತ್ ಪೂನಂ ವಿಚಾರವಾಗಿ ಮ್ಯಾನೇಜ್ಮೆಂಟ್ ಜೊತೆ ಜಗಳವಾಡಿಕೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ಹೋಗಿದ್ದರು. ಕಳೆದ ಮೂನಾಲ್ಕು ವರ್ಷಗಳಿಂದ ಓಲ್ಡ್ ಏರ್​ಪೋರ್ಟ್​ ರಸ್ತೆಯ ಮಣಿಪಾಲ್ ಆಸ್ಪತ್ರೆಯ 2ನೇ ಮಹಡಿಯ ಐಸಿಯುನಲ್ಲಿ ಪೂನಂಗೆ ಚಿಕಿತ್ಸೆ ಕೊಡಲಾಗುತ್ತಿದೆ. 86 ಲಕ್ಷ ಬಿಲ್ ಕಟ್ಟಿದ ಮೇಲೆ ಸೋತ ಗಂಡ ರಿಜೇಶ್ ಇನ್ನು ಮುಂದೆ ಹಣ ಕಟ್ಟಲು ಸಾಧ್ಯವಿಲ್ಲ ಎಂದಿದ್ದರು. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬೆಂಗಳೂರು ಕಮಿಷನರ್ , ಜೀವನ ಭೀಮಾನಗರಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಪ್ರಾಣಕ್ಕೆ ಕುತ್ತು ತಂದ ಫೇಸ್​ಬುಕ್​ ಕ್ರೇಜ್; ಪ್ರೀತಿಸಿ ಮದುವೆಯಾದವಳ ತಲೆಯನ್ನೇ ಛಿದ್ರಗೊಳಿಸಿದ ಗಂಡ

2015 ರಿಂದ 2019ರವರೆಗೆ 4 ಕೋಟಿ ರೂ.ಗೂ ಹೆಚ್ಚಿನ ಬಿಲ್‌ ಆಗಿದೆ. ಈಗಲೂ ನ್ಯಾಯಕ್ಕಾಗಿ, ತನ್ನ ಹೆಂಡತಿಯ ಆರೋಗ್ಯ ಸುಧಾರಿಸಲಿ ಅಂತ ಪ್ರತಿನಿತ್ಯ ರಿಜೇಶ್ ಅಲೆಯುತ್ತಿದ್ದಾರೆ. ಎಲ್ಲವನ್ನು ಮಾರಿಕೊಂಡಿರೋ ರಿಜೇಶ್ ಒಂದು ಹೊತ್ತು ಊಟಕ್ಕಾಗಿ ಪರದಾಡುತ್ತಿದ್ದಾರೆ.  ಐಸಿಯುನಲ್ಲಿ ಇರೋ ಪೂನಂ ಭೇಟಿ ಮಾಡಲು ಅವಕಾಶ ಕೊಡದ ವೈದ್ಯರು ಪೂನಂಳನ್ನು ಜೀವಂತ ಶವವಾಗಿ ಮಾಡಿ ಬಿಟ್ಟಿದ್ದಾರೆ. ಬೆಡ್​ ರೆಸ್ಟ್​ನಲ್ಲಿರುವ ಪೂನಂ ರಾಣಾ ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಾ ಸಾವಿನ ಅಂಚಿನಲ್ಲಿ ಇದ್ದಾರೆ.

 

 
First published: