ವಿದೇಶದಿಂದ ಡ್ರಗ್ಸ್​ ತರಿಸಿ ಮಾರುತ್ತಿದ್ದ ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್ ಬಂಧನ

ಬೆಂಗಳೂರಿನಲ್ಲಿ ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್​ ಸಾರ್ಥಕ್ ಆರ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

news18-kannada
Updated:October 30, 2020, 7:57 AM IST
ವಿದೇಶದಿಂದ ಡ್ರಗ್ಸ್​ ತರಿಸಿ ಮಾರುತ್ತಿದ್ದ ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 30): ಕರ್ನಾಟಕದಲ್ಲಿ ಡ್ರಗ್ ಜಾಲವನ್ನು ಭೇದಿಸಲು ಪೊಲೀಸರು ಪಣ ತೊಟ್ಟಿದ್ದಾರೆ. ಸ್ಯಾಂಡಲ್​ವುಡ್​ ಜೊತೆಗೆ ಸಂಪರ್ಕ ಹೊಂದಿದ್ದ ಡ್ರಗ್ ಜಾಲವನ್ನು ಭೇದಿಸಿದ್ದ ಪೊಲೀಸರು ಆ ಪ್ರಕರಣದಲ್ಲಿ ಅನೇಕ ಸಿನಿಮಾ ಸ್ಟಾರ್​ಗಳು, ಕಿರುತೆರೆ ನಟ-ನಟಿಯರು, ರಾಜಕಾರಣಿಗಳು, ಉದ್ಯಮಿಗಳ ವಿಚಾರಣೆ ನಡೆಸಿದ್ದರು. ಆ ಕೇಸ್​ ಮೂಲಕ ಅನೇಕ ಡ್ರಗ್ ಪೆಡ್ಲರ್​ಗಳು ಪೊಲೀಸರು ಬಲೆಗೆ ಬಿದ್ದಿದ್ದರು. ಅದಾದ ಬಳಿಕ ರಾಜ್ಯದೆಲ್ಲೆಡೆ ಡ್ರಗ್ ಸರಬರಾಜು ಮಾಡುವ ಗ್ಯಾಂಗನ್ನು ಹಿಡಿಯಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್​ ಒಬ್ಬನನ್ನು ಬಂಧಿಸಲಾಗಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿರುವ ಸಾರ್ಥಕ್ ಆರ್ಯ ಎಂಬ ಟೆಕ್ಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫಾರಿನರ್ಸ್ ಪೋಸ್ಟ್ ಮೂಲಕ ಬೆಂಗಳೂರಿಗೆ ಈತ ಡ್ರಗ್ಸ್ ತರಿಸುತ್ತಿದ್ದ. ಬಳಿಕ ಅದನ್ನು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುತ್ತಿದ್ದ. ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ಸಿಸಿಬಿ ನಿಗಾ ಇಟ್ಟಿತ್ತು. ಇತ್ತೀಚಿಗೆ ಬೆಲ್ಜಿಯಂನಿಂದ ಬೆಂಗಳೂರಿಗೆ ಬಂದ ಕೊರಿಯರ್ ಟ್ರ್ಯಾಕ್ ಮಾಡಿ ಪೋಸ್ಟ್ ಅಫೀಸಿನಲ್ಲಿ ಪರಿಶೀಲನೆ ಮಾಡಲಾಗಿತ್ತು.

ಇದನ್ನೂ ಓದಿ: ಗೋವಾದಲ್ಲಿ ಎಂಜಿನಿಯರ್ ಆಗಿದ್ದ ಕಾರವಾರ ಯುವಕನದ್ದು ಈಗ ಅಪ್ಪಕ ಕೃಷಿ ಕಾಯಕ

ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್​ನಲ್ಲಿ ಸಿಸಿಬಿ ಪೊಲೀಸರು ಆ ಕೊರಿಯರ್ ಅನ್ನು ಪರಿಶೀಲನೆ ಮಾಡಿದ್ದರು. ಆಗ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್​ಎಸ್​ಆರ್ ಲೇಔಟ್​ನ ಟೆಕ್ಕಿ ಸಾರ್ಥಕ್ ಆರ್ಯ ಎಂಬಾತನ ಮನೆ ಶೋಧ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಸಿಬ್ಬಂದಿಗೆ ಆತನ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿತ್ತು. ಟೆಕ್ಕಿಯ ಮನೆಯಲ್ಲಿ 4.99 ಗ್ರಾಂ LSD, MH ಸೀರೀಸ್ ಪ್ಯಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್, OCB ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್, 100 ml ಕೆಮಿಕಲ್ ಅಯಿಲ್ ಜಪ್ತಿ ಮಾಡಲಾಗಿದೆ.

ಈ ಬಗ್ಗೆ ಹೆಚ್​ಎಸ್​ಆರ್​ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದೇಶದಿಂದ ಮಾದಕವಸ್ತು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಸಾರ್ಥಕ್ ಆರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತನನ್ನು ಕೂಡ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
Published by: Sushma Chakre
First published: October 30, 2020, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading