• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಂಗಳೂರು ವೈದ್ಯರ ಕ್ವಾರಂಟೈನ್​ಗೆ ತತ್ವಾರ; ಸರ್ಕಾರದ ಮನವಿಗೆ ಕ್ಯಾರೇ ಅಂತಿಲ್ಲ ಸೋಷಿಯಲ್ ಕ್ಲಬ್​ಗಳು

ಬೆಂಗಳೂರು ವೈದ್ಯರ ಕ್ವಾರಂಟೈನ್​ಗೆ ತತ್ವಾರ; ಸರ್ಕಾರದ ಮನವಿಗೆ ಕ್ಯಾರೇ ಅಂತಿಲ್ಲ ಸೋಷಿಯಲ್ ಕ್ಲಬ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಸೋಷಿಯಲ್ ಕ್ಲಬ್ ಗಳು ಸರ್ಕಾರದ ಜಾಗವನ್ನು ಲೀಸ್ ಗೆ ಪಡೆದಿದ್ದು, ಸರ್ಕಾರದ ಮನವಿ ಮಾತ್ರ ಸ್ಪಂದಿಸುತ್ತಿಲ್ಲ ಎಂಬುದೇ ವಿಪರ್ಯಾಸ.

  • Share this:

ಬೆಂಗಳೂರು (ಮೇ 15): ಕರ್ನಾಟಕದಲ್ಲಿ ದಿನೇದಿನೆ ಕೊರೋನಾ ಕೇಸ್​ಗಳು ಜಾಸ್ತಿಯಾಗುತ್ತಲೇ ಇವೆ. ಇದರ ಬೆನ್ನಲ್ಲೆ ಕೊರೋನಾ ಪಾಸಿಟಿವ್ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಸರ್ಕಾರಿ ವೈದ್ಯರ ಕ್ವಾರೆಂಟೈನ್ ಗೆ ಸರ್ಕಾರ ತಲೆಕೆಡಿಸಿಕೊಂಡಿದೆ. ಬೆಂಗಳೂರಿನಲ್ಲಿ ಸುಮಾರು 20ಕ್ಕೂ ಅಧಿಕ ಸೋಷಿಯಲ್  ಕ್ಲಬ್​ಗಳಿದ್ದು, ಯಾವುದೇ ಕ್ಲಬ್ ಕೂಡ ಸರ್ಕಾರಿ ವೈದ್ಯರ ಕ್ವಾರೆಂಟೈನ್ ಗೆ ರೂಂಗಳನ್ನು ಕೊಡಲು ಸಿದ್ದರಿಲ್ಲ. ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಗೆ ಸರ್ಕಾರಿ ಪತ್ರ ಬರೆದಿದ್ದರೂ ಅದಕ್ಕೂ ಕ್ಯಾರೆ ಅಂದಿಲ್ಲ.


ಕೊನೆಗೆ, ಬೌರಿಂಗ್ ಇನ್​ಸ್ಟಿಟ್ಯೂಟ್​ ಕ್ಲಬ್ ಹಾಗೂ ಇಂದಿರಾನಗರ ಕ್ಲಬ್ ವೈದ್ಯರ ಕ್ವಾರೆಂಟೈನ್ ಗೆ ಸೈ ಅಂದಿದ್ದು, 95 ಸರ್ಕಾರಿ ವೈದ್ಯರಿಗೆ ಕ್ವಾರಂಟೈನ್​ ವ್ಯವಸ್ಥೆ ಕಲ್ಪಿಸಿವೆ. ಉಳಿದ ಸೋಷಿಯಲ್ ಕ್ಲಬ್ ಗಳು ಸರ್ಕಾರದ ಜಾಗವನ್ನು ಲೀಸ್ ಗೆ ಪಡೆದಿದ್ದು, ಸರ್ಕಾರದ ಮನವಿ ಮಾತ್ರ ಸ್ಪಂದಿಸುತ್ತಿಲ್ಲ ಎಂಬುದೇ ವಿಪರ್ಯಾಸ. ಬೌರಿಂಗ್ ಇನ್​ಸ್ಟಿಟ್ಯೂಟ್​ ಕ್ಲಬ್ ನಲ್ಲಿ ಒಟ್ಟು 60 ರೂಂಗಳಿದ್ದು,ಅದರಲ್ಲಿ 55 ರೂಂಗಳನ್ನು ಕೊರೋನಾ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರ ಕ್ವಾರೆಂಟೈನ್ ಗೆ ಅನುಕೂಲ ಮಾಡಿಕೊಟ್ಟಿದೆ.


ಇದನ್ನೂ ಓದಿ: ಕರ್ನಾಟಕದಲ್ಲಿಂದು ದಾಖಲೆಯ 69 ಕೊರೋನಾ ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 1,056ಕ್ಕೆ ಏರಿಕೆ


ಇಂದಿರಾನಗರ ಕ್ಲಬ್ ನಲ್ಲಿ 42 ರೂಂಗಳಿದ್ದು, ಅದರಲ್ಲಿ 40 ರೂಂಗಳನ್ನು ವೈದ್ಯರ ಕ್ವಾರೆಂಟೈನ್ ಗೆ ನೀಡಲಾಗಿದೆ. ಇದರ ಜೊತೆಗೆ 3 ಹೊತ್ತು ಊಟ, ತಿಂಡಿ ಹಾಗೂ ಇತರೆ ಸೌಕರ್ಯಗಳನ್ನು ಸಹ ಈ ಎರಡು ಕ್ಲಬ್ ನವರೇ ನೋಡಿಕೊಳ್ಳುತ್ತಿದ್ದಾರೆ. ಇನ್ನು ಉಳಿದ ಕ್ಲಬ್ ಗಳು ಸರ್ಕಾರದ ಮನವಿ ಪತ್ರಕ್ಕೆ ತಿರಸ್ಕಾರ ಮಾಡಿದ್ದು, ಕ್ಲಬ್ ಗಳಲ್ಲಿ ಇರುವ ಸದಸ್ಯ ವೈದ್ಯರ ಕ್ವಾರೆಂಟೈನ್ ಗೆ ಒಪ್ಪಿಗೆ ನೀಡುತ್ತಿಲ್ಲ. ಒಂದುವೇಳೆ ವೈದ್ಯರ ಕ್ವಾರಂಟೈನ್​ಗೆ ಅವಕಾಶ ನೀಡಿದರೆ ನಾಳೆ ನಮಗೂ ಕೊರೋನಾ ಬಂದರೆ ಕಷ್ಟ ಎಂಬ ಭಯವನ್ನು ಅವರು ವ್ಯಕ್ತ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.


ಇಂತಹ ಕಷ್ಟದ ಸಮಯದಲ್ಲಿ ಸೋಷಿಯಲ್ ಕ್ಲಬ್ ಗಳು ಸರ್ಕಾರದ ನೆರವಿಗೆ ಬರೋದಿಲ್ಲ ಎಂದರೆ ಇನ್ನು ಯಾವ ಟೈಂನಲ್ಲಿ ಸಹಾಯ ಮಾಡುತ್ತವೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇನ್ನಾದರೂ ನಗರದಲ್ಲಿ ಇರುವ ಸೋಷಿಯಲ್ ಕ್ಲಬ್ ಗಳು ಎಚ್ಚೆತ್ತುಕೊಂಡು ಕೊರೋನಾ ವಾರಿಯರ್ಸ್​ ಎನಿಸಿಕೊಂಡಿರುವ ವೈದ್ಯರ ಕ್ವಾರೆಂಟೈನ್​ಗೆ ರೂಂಗಳನ್ನು ನೀಡಿದರೆ ಉತ್ತಮ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು