ಸೀರಿಯಲ್ ನಟಿಯರ ಮೂಲಕ 10 ರಾಜಕಾರಣಿಗಳ ಹನಿಟ್ರ್ಯಾಪ್; ಈ ಜಾಲಕ್ಕೆ ಸಿಲುಕಿದ್ದಾರೆ ಇಬ್ಬರು ಅನರ್ಹ ಶಾಸಕರು!

Bangalore Honey Trap Scam: ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಗದೆ ಅಲೆದಾಡುತ್ತಿದ್ದ ನಟಿಯರನ್ನು ಬಳಸಿಕೊಂಡು ರಾಜಕಾರಣಿಗಳ ಪರಿಚಯ ಮಾಡುತ್ತಿದ್ದ. ಅವರ ಕೈಗೆ ವ್ಯಾನಿಟಿ ಬ್ಯಾಗ್ ಕೊಟ್ಟು ಅದರಲ್ಲಿ ಕ್ಯಾಮೆರಾ ಇಟ್ಟು ಆ ನಟಿಯರ ಜೊತೆಗೆ ರಾಜಕಾರಣಿಗಳು ನಡೆಸುತ್ತಿದ್ದ ರಾಸಲೀಲೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ.

news18-kannada
Updated:November 29, 2019, 10:05 AM IST
ಸೀರಿಯಲ್ ನಟಿಯರ ಮೂಲಕ 10 ರಾಜಕಾರಣಿಗಳ ಹನಿಟ್ರ್ಯಾಪ್; ಈ ಜಾಲಕ್ಕೆ ಸಿಲುಕಿದ್ದಾರೆ ಇಬ್ಬರು ಅನರ್ಹ ಶಾಸಕರು!
ಹನಿಟ್ರ್ಯಾಪಿಂಗ್ ಆರೋಪಿಗಳು
  • Share this:
ಬೆಂಗಳೂರು (ನ. 29): ರಾಜ್ಯದ ಜನಪ್ರತಿನಿಧಿಗಳ ಹನಿಟ್ರ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳಾಗುತ್ತಿವೆ. ಈ ಜಾಲದಲ್ಲಿ ಇಬ್ಬರು ಅನರ್ಹ ಶಾಸಕರು ಕೂಡ ಸಿಲುಕಿದ್ದಾರೆ ಎಂಬ ವಿಷಯ ಬಯಲಿಗೆ ಬಂದಿದೆ. ಕಿರುತೆರೆ ನಟಿಯರನ್ನು ಬಳಸಿಕೊಂಡು 10ಕ್ಕೂ ಹೆಚ್ಚು ರಾಜಕಾರಣಿಗಳಿಗೆ ಹನಿಟ್ರ್ಯಾಪ್ ಬಲೆ ಬೀಸಲಾಗಿತ್ತು ಎಂಬುದು ಕೂಡ ಬೆಳಕಿಗೆ ಬಂದಿದ್ದು, ಈ ವಿಷಯ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ.

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿಡಿಯೋ ಬಿಡುಗಡೆ ಮಾಡಬಹುದು ಎಂಬ ಆತಂಕ ಕರ್ನಾಟಕದ ರಾಜಕಾರಣಿಗಳಿಗೆ ಎದುರಾಗಿತ್ತು. ಧಾರಾವಾಹಿಗಳಲ್ಲಿ ಮೇಕಪ್ ಮಾಡುತ್ತಿದ್ದ ಪುಷ್ಪಾ ಎಂಬ ಯುವತಿಯನ್ನು ಮುಂದಿಟ್ಟುಕೊಂಡು ಆರೋಪಿ ರಘು ಕಿರುತೆರೆ ನಟಿಯರನ್ನು ಹನಿಟ್ರ್ಯಾಪ್​ ಮಾಡಲು ಬಳಸಿಕೊಳ್ಳುತ್ತಿದ್ದ. ಕಾಂಗ್ರೆಸ್ ನ ಇಬ್ಬರು ಶಾಸಕರು, ಇಬ್ಬರು ಅನರ್ಹ ಶಾಸಕರು, ಬಿಜೆಪಿ ಶಾಸಕರೂ ಹನಿಟ್ರ್ಯಾಪಿಂಗ್ ಜಾಲದೊಳಗೆ ಸಿಲುಕಿರುವುವುದು ಪೊಲೀಸ್ ವಿಚಾರಣೆ ವೇಳೆ ಪತ್ತೆಯಾಗಿದೆ.

ಹೈದರಾಬಾದ್ ಕರ್ನಾಟಕದ ಇಬ್ಬರು ಶಾಸಕರು, ಚಿತ್ರದುರ್ಗ ನಾಡು ಜಿಲ್ಲೆಯ ಬಿಜೆಪಿ ಶಾಸಕ, ಕಾಂಗ್ರೆಸ್ ಮೇಲ್ಮನೆಯ ಓರ್ವ ಸದಸ್ಯ ಸೇರಿ ಅನೇಕ ಮಂದಿಯ ವಿಡಿಯೋಗಳು ಪತ್ತೆಯಾಗಿವೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಇದು ರಾಜ್ಯದ ಜನರನ್ನು ಅಚ್ಚರಿಗೊಳಿಸಿರುವುದು ಮಾತ್ರವಲ್ಲದೆ ರಾಜಕಾರಣಿಗಳನ್ನೂ ತಲ್ಲಣಗೊಳಿಸಿದೆ.

ಗಂಡನೊಂದಿಗೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋದ ಚೆಲುವೆ ಗುಂಡೇಟಿಗೆ ಬಲಿಯಾದಳು!

ಹನಿಟ್ರ್ಯಾಪಿಂಗ್​ನ ವಿಡಿಯೋಗಳನ್ನು ಆರೋಪಿಗಳು ಎಲ್ಲಿ ಇಟ್ಟಿದ್ದಾರೆ ಎನ್ನುವ ಬಗ್ಗೆ ಸಿಸಿಬಿಯಿಂದ ತನಿಖೆ ಚುರುಕುಗೊಂಡಿದೆ. ಸಿಸಿಬಿ ಬಳಿಯಿರುವ ಪೆನ್ ಡ್ರೈವ್​ನಲ್ಲಿ ವಿಡಿಯೋಗಳು ಲಭ್ಯವಾಗಿವೆ. ಆದರೆ, ಆ ವಿಡಿಯೋಗಳ ನಕಲಿ ಪ್ರತಿಗಳನ್ನು ಎಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವಾಗ ಬೇಕಿದ್ದರೂ ಆರೋಪಿಗಳು ಆ ವಿಡಿಯೋಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಸಿಸಿಬಿ ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡ ಹೆಚ್ಚಾಗುತ್ತಿದೆ.

10ಕ್ಕೂ ಹೆಚ್ಚು ಶಾಸಕರ ಹನಿಟ್ರ್ಯಾಪ್?:

ಆರೋಪಿಗಳು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಶಾಸಕರನ್ನು ಹನಿಟ್ರ್ಯಾಪ್ ಮಾಡಿರುವ ಸಂಗತಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಲು ಯಾವೊಬ್ಬ ಶಾಸಕರೂ ಮುಂದೆ ಬರುತ್ತಿಲ್ಲ. ಟ್ರ್ಯಾಪ್ ಗೆ ಒಳಗಾದ ಉಳಿದ ಶಾಸಕರು ಸಹಿತ ದೂರು ನೀಡಿದರೆ ತನಿಖೆಗೆ ಅನುಕೂಲವಾಗುತ್ತದೆ ಎಂದು ಸಿಸಿಬಿ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೈಗೊಳ್ಳಲಾಗುತ್ತದೆ. ಆದರೆ, ತಮ್ಮ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಿಂದ ಹನಿಟ್ರ್ಯಾಪಿಂಗ್​ಗೆ ಒಳಗಾಗಿರುವ ಶಾಸಕರು ದೂರು ನೀಡಲು ಒಪ್ಪುತ್ತಿಲ್ಲ.ಗಂಡನ ಬರ್ತಡೇ​ ಪಾರ್ಟಿಯಲ್ಲಿ ಹೆಂಡತಿಗೆ ಕಾದಿತ್ತು ಶಾಕ್; ಕೈ, ಬಾಯಿ ಕಟ್ಟಿ ಅತ್ಯಾಚಾರ ನಡೆಸಿದ ಬೆಂಗಳೂರು ಯುವಕನ ಬಂಧನ

ಆರೋಪಿ ರಘು ಅಲಿಯಾಸ್ ರಾಘವೇಂದ್ರನ ಮನೆಯಲ್ಲಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಪೆನ್​ಡ್ರೈವ್, ಹಾರ್ಡ್​ ಡಿಸ್ಕ್​ ಮತ್ತು ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿದೆ. 6 ಮೊಬೈಲ್​ಗಳಲ್ಲಿ ಹನಿ ಟ್ರ್ಯಾಪ್​ಗೆ ಒಳಗಾದ ಶಾಸಕರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹನಿಟ್ರ್ಯಾಪಿಂಗ್​ಗೆ ದಾಳವಾಗಿದ್ದ ಯುವತಿಯರ ಜೊತೆ ಶಾಸಕರು ಮಾತಾಡಿದ ಆಡಿಯೋಗಳು ಕೂಡ ಲಭ್ಯವಾಗಿವೆ. 200ಕ್ಕೂ ಹೆಚ್ಚು ಕಿರುತೆರೆ ನಟಿಯರನ್ನು ಬಳಸಿಕೊಂಡು ರಘು ರಾಜಕಾರಣಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು ಹನಿಟ್ರ್ಯಾಪಿಂಗ್ ದಂಧೆಯನ್ನು ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.

ಕಿರುತೆರೆ ನಟಿಯರೇ ದಾಳ:
ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಸಿಗದೆ ಅಲೆದಾಡುತ್ತಿದ್ದ ನಟಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ರಘು ಅವರನ್ನು ಬಳಸಿಕೊಂಡು ರಾಜಕಾರಣಿಗಳ ಪರಿಚಯ ಮಾಡುತ್ತಿದ್ದ. ಅವರ ಕೈಗೆ ವ್ಯಾನಿಟಿ ಬ್ಯಾಗ್ ಕೊಟ್ಟು ಅದರಲ್ಲಿ ಕ್ಯಾಮೆರಾ ಇಟ್ಟು ಆ ನಟಿಯರ ಜೊತೆಗೆ ರಾಜಕಾರಣಿಗಳು ನಡೆಸುತ್ತಿದ್ದ ರಾಸಲೀಲೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ನಂತರ ಆ ವಿಡಿಯೋಗಳನ್ನು ತೋರಿಸಿ ರಾಜಕಾರಣಿಗಳನ್ನು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ.ತಮ್ಮ ಮಾನ ಉಳಿಸಿಕೊಳ್ಳಲು ರಘು ಗ್ಯಾಂಗ್​ಗೆ ಕೋಟಿ-ಕೋಟಿ ರೂ. ಹಣ ಕೊಟ್ಟು ರಾಜಕಾರಣಿಗಳು ಸುಮ್ಮನಾಗುತ್ತಿದ್ದರು.

ಈ ಬಗ್ಗೆ ಶಾಸಕರು ಧೈರ್ಯವಾಗಿ ಮುಂದೆ ಬಂದು ದೂರು ಕೊಟ್ಟರೆ ಅವರ ಮಾಹಿತಿಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಸಿಸಿಬಿ ಪೊಲೀಸರು ಹನಿಟ್ರ್ಯಾಪಿಂಗ್​ಗೆ ಒಳಗಾದ ಶಾಸಕರಿಗೆ ಭರವಸೆ ನೀಡಿದ್ದಾರೆ. ಆದರೂ ಯಾರೂ ಬಹಿರಂಗವಾಗಿ ಈ ವಿಚಾರವನ್ನು ಒಪ್ಪಿಕೊಂಡು ದೂರು ನೀಡಲು ಮುಂದೆ ಬರುತ್ತಿಲ್ಲ.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ