ನೋಂದಣಿ ಮಾಡಿಸದೆ ವಾಹನ ಓಡಿಸ್ತಾ ಇದೀರಾ?; ಹಾಗಿದ್ರೆ ನಿಮ್ಮ ಗಾಡಿ ಜಪ್ತಿ ಆಗೋದು ಗ್ಯಾರಂಟಿ

ಬೆಂಗಳೂರಿನಲ್ಲಿ ಈ ರೀತಿ ನೋಂದಣಿ ಮಾಡಿಸದೆ ವಾಹನ ಓಡಿಸುತ್ತಿದ್ದ ಅನೇಕರಿಗೆ ಆರ್​ಟಿಒ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಇದನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಜಪ್ತಿಯಾದ ವಾಹನ

ಜಪ್ತಿಯಾದ ವಾಹನ

 • Share this:
  ಬೆಂಗಳೂರು (ಸೆಪ್ಟೆಂಬರ್​​ 15): ಶೋರೂಂನಿಂದ ವಾಹನವನ್ನು ತಂದ ನಂತರದಲ್ಲಿ ಆರ್​ಟಿಒನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ ಕೂಡ. ಆದರೆ, ಕೆಲ ಖದೀಮರು ತೆರಿಗೆ ವಂಚನೆ ಮಾಡಲು ನೋಂದಣಿ ಮಾಡಿಸಿಕೊಳ್ಳದೆ ವಾಹನ ಓಡಿಸುತ್ತಿರುತ್ತಾರೆ. ಈ ರೀತಿ ಮಾಡಿದರೆ ನಿಮ್ಮ ವಾಹನವನ್ನು ಜಪ್ತಿ ಆಗೋದು ಗ್ಯಾರಂಟಿ. ನಗರದಲ್ಲಿ ಈ ರೀತಿ ತೆರಿಗೆ ವಂಚನೆ ಮಾಡಿಕೊಂಡು ಓಡಾಡುತ್ತಿದ್ದವರನ್ನು ಆರ್​ಟಿಒ ಅಧಿಕಾರಿಗಳು ಬಂಧಿಸಿದ್ದಾರೆ.

  ಬೆಂಗಳೂರಿನಲ್ಲಿ ಈ ರೀತಿ ನೋಂದಣಿ ಮಾಡಿಸದೆ ವಾಹನ ಓಡಿಸುತ್ತಿದ್ದ ಅನೇಕರಿಗೆ ಆರ್​ಟಿಒ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಮಾರ್ಚ್‌ ತಿಂಗಳಿನಿಂದ ನೋಂದಣಿ ಮಾಡಿಸದೆ ಫಾರ್ಚೂನರ್‌ ಕಾರು ಹಾಗೂ 2 ಜೆಸಿಬಿಗಳನ್ನು ಓಡಿಸಲಾಗುತ್ತಿತ್ತು. ಇದನ್ನು ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

  ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌, ಹಿರಿಯ ಮೋಟಾರ್‌ ವಾಹನ ನಿರೀಕ್ಷಕರಾದ ರಾಜ್‌ಕುಮಾರ್‌ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು ಈ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಲಾಗಿದೆ.
  Published by:Rajesh Duggumane
  First published: