Bengaluru: ಬೆಂಗಳೂರಿನ ಏಳೂವರೆ ತಿಂಗಳ ಮಗುವಿನ ಎರಡೂ ಕಿಡ್ನಿಗಳಲ್ಲಿ ಕಲ್ಲು; ಜಗತ್ತಲ್ಲೇ ಅಪರೂಪದ ಶಸ್ತ್ರಚಿಕಿತ್ಸೆ

Bangalore: ಕೇವಲ 7 ತಿಂಗಳು 15 ದಿನಗಳ ಹೆಣ್ಣು ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಸೃಷ್ಟಿಯಾಗಿದ್ದ Kidney Stoneಗಳನ್ನು ರಾಜಾಜಿನಗರದ ಎನ್. ಯು ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದೆ.

ರಾಜಾಜಿನಗರದ ಎನ್. ಯು ಆಸ್ಪತ್ರೆಯ ವೈದ್ಯರ ತಂಡ

ರಾಜಾಜಿನಗರದ ಎನ್. ಯು ಆಸ್ಪತ್ರೆಯ ವೈದ್ಯರ ತಂಡ

  • Share this:
ಬೆಂಗಳೂರು (ಡಿ. 31): ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ವಯಸ್ಸಿನ ಮಗುವಿಗೆ ಮೂತ್ರ ಪಿಂಡದಲ್ಲಿ ಕಲ್ಲಿನ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿರುವ ಬೆಂಗಳೂರಿನ ಎನ್. ಯು ಆಸ್ಪತ್ರೆಯ ತಜ್ಞ ವೈದ್ಯರು ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕೇವಲ 7 ತಿಂಗಳು 15 ದಿನಗಳ ಹೆಣ್ಣು ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಸೃಷ್ಟಿಯಾಗಿದ್ದ Kidney Stoneಗಳನ್ನು ರಾಜಾಜಿನಗರದ ಎನ್. ಯು ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಮಿನಿ ಪಿ. ಇ. ಆರ್. ಸಿ ಮತ್ತು ಲೇಸರ್ ಚಿಕಿತ್ಸೆ ಮೂಲಕ ತೆಗೆದಿದ್ದಾರೆ. ಇದೀಗ ಮಗು ಆರೋಗ್ಯದಿಂದಿದ್ದು, ಚೇತರಿಸಿಕೊಂಡಿದೆ.

ಸಾಮಾನ್ಯವಾಗಿ ಮಕ್ಕಳಲ್ಲಿ ಮೂತ್ರ ಪಿಂಡದ ಕಲ್ಲಿನ ಸಮಸ್ಯೆಗಳು ಕಂಡು ಬರುವುದಿಲ್ಲ. ಏಕೆಂದರೆ ಈ ವಯಸ್ಸಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಘನ ಪದಾರ್ಥ ಸೇವಿಸುವುದಿಲ್ಲ. ಹೀಗಾಗಿ ಮಕ್ಕಳ ಮೂತ್ರಪಿಂಡದಲ್ಲಿ ಕಲ್ಲು ಉತ್ಪತ್ತಿಯಾಗುವುದಿಲ್ಲ. ಆದರೆ ಈ ಮಗುವಿಗೆ ಎರಡೂ ಮೂತ್ರ ಪಿಂಡಗಳಲ್ಲಿ ಕಲ್ಲಿನ ಸಮಸ್ಯೆ ಕಂಡು ಬಂದಿರುವುದು ಸಹ ಮತ್ತೊಂದು ವಿಸ್ಮಯವಾಗಿದೆ.

ಯುರೆಕ್ಟ್ರೋಸ್ಕೋಪಿ ತಂತ್ರಜ್ಞಾನ ಬಳಕೆ:

ಮೂರು ವಾರಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಈ ಮಗು ವಿಪರೀತವಾಗಿ ಅಳುತ್ತಿತ್ತು. ತಜ್ಞ ವೈದ್ಯರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಎರಡೂ ಕಿಡ್ನಿಗಳಲ್ಲಿ ಕಲ್ಲುಗಳು ಇರುವುದನ್ನು ಪತ್ತೆ ಮಾಡಿದ್ದರು. ಎಡ ಭಾಗದಲ್ಲಿ ಕಿಡ್ನಿಯಿಂದ ಮೂತ್ರ ಕೋಶಕ್ಕೆ ಸಂಪರ್ಕ ಕಲ್ಪಿಸುವ ಟ್ಯೂಬ್ ನಲ್ಲಿ 9 ಮಿಲಿಮೀಟರ್, ಒಂದು ಸೆಂಟಿಮೀಟರ್ ಕಲ್ಲು ಇರುವುದು ಕಂಡು ಬಂದಿತು. ಯುರೆಕ್ಟ್ರೋಸ್ಕೋಪಿ ತಂತ್ರಜ್ಞಾನದ ಮೂಲಕ ಕಲ್ಲು ತೆಗೆಯಲಾಗಿದೆ. ಎರಡು ವಾರಗಳ ನಂತರ ಇದೀಗ ಮಗು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಸಂಪೂರ್ಣವಾಗಿ  ಮುಕ್ತವಾಗಿದೆ.

ಇದನ್ನೂ ಓದಿ: Ravi Kumar IAS: ಕರ್ನಾಟಕ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ IAS ಅಧಿಕಾರಿ ಪಿ. ರವಿಕುಮಾರ್ ನೇಮಕ

ಮಕ್ಕಳಲ್ಲಿ ಕಂಡು ಬರುವ ಮೂತ್ರಪಿಂಡ ಕಲ್ಲು ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜತೆಗೆ ಹೊಲ್ಮಿಯಮ್ ತಂತ್ರಜ್ಞಾವನ್ನು ಬಳಕೆ ಮಾಡಲಾಗುತ್ತದೆ. ಮಕ್ಕಳ ಮೂತ್ರ ಸಮಸ್ಯೆ ನಿವಾರಣಾ ತಜ್ಞ ಡಾ. ಪ್ರಸನ್ನ ವೆಂಕಟೇಶ್ ನೇತೃತ್ವದ ಪರಿಣಿತರ ತಂಡ ಈ ಪ್ರಕಣದಲ್ಲಿ ಆಧುನಿಕ ವೈದ್ಯಕೀಯ ಪರಿಕರಗಳ ಜತೆಗೆ  ವೈದ್ಯಕೀಯ ಕೌಶಲ್ಯವನ್ನು ಬಳಕೆ ಮಾಡಿಕೊಂಡಿದೆ, ಆಸ್ಪತ್ರೆಯ ಮಕ್ಕಳ ಅನಸ್ತೇಷಿಯಾ ತಂಡ ಮತ್ತಿತರರ ಪರಿಶ್ರಮದಿಂದ  ನೋವಿನಿಂದ ಅಳುತ್ತಿದ್ದ ಮಗು ಇದೀಗ ಆರೋಗ್ಯವಾಗಿದೆ. ವೈದ್ಯರ  ತಂಡದಲ್ಲೂ ಸಾರ್ಥಕತೆಯ ಭಾವ ಮೂಡಿದೆ.

ಮಕ್ಕಳ ಯೂರಾಲಜಿ ಮತ್ತು ನೆಫ್ರಾಲಜಿ ವಿಭಾಗಗಳನ್ನು ಹೊಂದಿರುವ ದೇಶದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಎನ್. ಯು ಆಸ್ಪತ್ರೆಯೂ ಸಹ ಒಂದಾಗಿದೆ. ಮಕ್ಕಳ ಮೂತ್ರ ಸಂಬಂಧಿ ಸಮಸ್ಯೆಗಳ  ನಿವಾರಣೆಗೆ ಅತ್ಯಾಧುನಿಕ ಮತ್ತು ಸುಸಜ್ಜಿತ ತಂಡ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವುದ ಸಹ ವಿಶೇಷವಾಗಿದೆ.
Published by:Sushma Chakre
First published: