Bangalore Rain: ಬೆಂಗಳೂರಿನ ಮಳೆಗೆ ಮತ್ತೊಂದು ಬಲಿ; ಬೇಗೂರು ಬಳಿ ಮರ ಬಿದ್ದು ಮಹಿಳೆ ಸಾವು

Bengaluru Rains: ಇಂದು ಸಂಜೆ ಬೊಮ್ಮನಹಳ್ಳಿಯ ಬೇಗೂರಿನಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ 45 ವರ್ಷದ ಹೇಮಾ ಎಂಬ ಮಹಿಳೆ ಮೇಲೆ ಮರ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಕೂಟಿಯ ಮೇಲೆ ಬಿದ್ದ ಮರ

ಸ್ಕೂಟಿಯ ಮೇಲೆ ಬಿದ್ದ ಮರ

  • Share this:
ಬೆಂಗಳೂರು (ಮೇ 26): ಬೆಂಗಳೂರಿನಲ್ಲಿ ಇಂದು ಸಂಜೆಯಿಂದ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲ ಹೊಳೆಯಂತಾಗಿತ್ತು. ಗಾಳಿ, ಮಿಂಚು, ಗುಡುಗು ಸಹಿತ ಮಳೆಯ ಕಾರಣದಿಂದ ನಗರದ ಬೃಹತ್ ಮರಗಳು ಉರುಳಿ ಬಿದ್ದಿವೆ. ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಮರದ ರೆಂಬೆ ಮುರಿದುಬಿದ್ದ ಪರಿಣಾಮ ಆ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಮೂಲಕ ಇಂದಿನ ಭಾರೀ ಮಳೆಗೆ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು ಬಲಿಯಾದಂತಾಗಿದೆ. ಬೆಂಗಳೂರಿನ ಲಕ್ಷ್ಮೀದೇವಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಕಲ್ಲು ಕೆಳಗೆ ಬಿದ್ದು 22 ವರ್ಷದ ಶಿಲ್ಪಾ ಎಂಬ ಯುವತಿ ಸಾವನ್ನಪ್ಪಿದ್ದರು. ಇಂದು ಸಂಜೆ ಮನೆಯಲ್ಲೇ ಆಫೀಸ್ ಕೆಲಸ ಮಾಡುತ್ತಿದ್ದಾಗ ಮನೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲಿಂದ ಇಟ್ಟಿಗೆ ತಲೆ ಮೇಲೆ ಬಿದ್ದಿತ್ತು. ಘಟನೆ ನಡೆದ ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು.

one more Woman Died in Bengaluru after Tree Falls on her Scooty in Bengaluru
ಮೃತ ಮಹಿಳೆ ಹೇಮಾ


ಇದನ್ನೂ ಓದಿ: ಗಾಳಿ ಮಳೆಗೆ ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಕಲ್ಲು ಬಿದ್ದು ಯುವತಿ ಸಾವು

ಇಂದು ಸಂಜೆ ಬೊಮ್ಮನಹಳ್ಳಿಯ ಬೇಗೂರಿನಲ್ಲಿಯೂ ಭಾರೀ ಮಳೆಯಾಗಿದ್ದು, ಮಳೆಯಿಂದ ಪಾರಾಗಲು 45 ವರ್ಷದ ಹೇಮಾ ಎಂಬ ಮಹಿಳೆ ಸ್ಕೂಟಿಯಲ್ಲಿ ಮನೆಯತ್ತ ಹೋಗುತ್ತಿದ್ದರು. ಈ ವೇಳೆ ರಭಸವಾಗಿ ಬೀಸಿದ ಗಾಳಿಯಿಂದ ಮರ ಕೆಳಗೆ ಉರುಳಿದ್ದು, ಅದರ ರೆಂಬೆಗಳು ಹೇಮಾ ಅವರ ಸ್ಕೂಟಿಯ ಮೇಲೆ ಬಿದ್ದಿವೆ. ರೆಂಬೆಗಳ ಅಡಿಯಲ್ಲಿ ಸಿಲುಕಿದ ಹೇಮಾ ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರೂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
First published: