HOME » NEWS » State » BANGALORE RAINS HEAVY RAIN WITH THUNDER AND LIGHTNING IN BENGALURU SCT

Bangalore Rains: ಬೆಂಗಳೂರಿನಲ್ಲಿ ಸಂಜೆಯಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆ

Bengaluru Rain News: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತೀವ್ರ ವಾಯುಭಾರ ಕುಸಿತವಾದ್ದರಿಂದ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.

news18-kannada
Updated:May 26, 2020, 6:36 PM IST
Bangalore Rains: ಬೆಂಗಳೂರಿನಲ್ಲಿ ಸಂಜೆಯಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 26): ಕಳೆದ ವಾರಾಂತ್ಯದಲ್ಲಿ ಬೆಂಗಳೂರನ್ನು ತೊಯ್ದು ತೊಪ್ಪೆಯಾಗಿಸಿದ್ದ ಮಳೆರಾಯ ನಿನ್ನೆ ಶಾಂತನಾಗಿದ್ದ. ಇಂದು ಸಂಜೆಯಿಂದ ಮತ್ತೆ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಸಂಜೆಯಿಂದ ಬೆಂಗಳೂರಿನ ಬಹುತೇಕ ಸ್ಥಳಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದಾಗಿ ಬಿಸಿಲ ಬೇಗೆಗೆ ಕಾದಿದ್ದ ಭೂಮಿಗೆ ತಂಪೆರೆದಂತಾಗಿದೆ.

ಪಶ್ಚಿಮ ಬಂಗಾಳ, ಒರಿಸ್ಸಾದಲ್ಲಿ ಅಂಫಾನ್​ ಚಂಡಮಾರುತದ ಅಬ್ಬರ ಜೋರಾಗಿದೆ. ಇಂದು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತೀವ್ರ ವಾಯುಭಾರ ಕುಸಿತವಾದ್ದರಿಂದ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.
ಬೆಂಗಳೂರಿನ ಜಯನಗರ, ಬಸವನಗುಡಿ, ಯಶವಂತಪುರ, ಹನುಮಂತನಗರ, ಜೆ.ಪಿ. ನಗರ, ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್​. ಮಾರ್ಕೆಟ್, ಕುಮಾರ ಪಾರ್ಕ್, ಚಾಲುಕ್ಯ ಸರ್ಕಲ್, ರೇಸ್​ ಕೋರ್ಸ್​ ರಸ್ತೆ, ವಿಧಾನಸೌಧ ಸುತ್ತಮುತ್ತ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಸಂಜೆ 5.30ರಿಂದ ಶುರುವಾದ ಮಿಂಚು, ಗುಡುಗು ಸಹಿತ ಮಳೆಯಿಂದ ಬೆಂಗಳೂರು ತಂಪಾಗಿದೆ.

ಇದನ್ನೂ ಓದಿ: ಜೂನ್​ 1ರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳು ಓಪನ್; ನಾಳೆಯಿಂದ ಆನ್​​ಲೈನ್​ ಬುಕ್ಕಿಂಗ್​ ಸೇವೆ ಶುರುಈಗಾಗಲೇ ಕೆಲವರಿಗೆ ಆಫೀಸ್​ ಶುರುವಾಗಿದ್ದು, ಆಫೀಸ್ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದವರು ಮಳೆಯ ಹೊಡೆತಕ್ಕೆ ಸಿಲುಕಿದ್ದಾರೆ. ಗಾಳಿಸಹಿತ ಮಳೆಯಿಂದಾಗಿ ಇನ್ನಷ್ಟು ಮರಳು ಧರೆಗುರುಳುವ ಆತಂಕ ಎದುರಾಗಿದೆ.
Youtube Video
First published: May 26, 2020, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories