ಬೆಂಗಳೂರು ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ತಗಡಿನ ಶೆಡ್ ಮೇಲೆ ಗೋಡೆ ಕುಸಿದು ಯುವಕ ದುರ್ಮರಣ

ಘಟನೆ ಬಳಿಕ ಮೂವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪುರಣ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆ

ಮಳೆ

  • Share this:
ಬೆಂಗಳೂರು: ಆ ಯುವಕ ಬದುಕಿನ ಸುಂದರ ಕನಸುಗಳನ್ನ ಕಾಣುತ್ತ ಕೆಲಸ ಹುಡುಕಿ ಗೆಳೆಯರೊಂದಿಗೆ ಸಿಲಿಕಾನ್‌ ಸಿಟಿಗೆ ಬಂದಿದ್ದ. ಓದು ಅಷ್ಟಕಷ್ಟೇ ಆದ್ರೂ, ಕೈ ರುಚಿ ಬಲು ಜೋರಿತ್ತು. ಹೀಗಾಗಿ ಕಟ್ಟಡ ಕೆಲಸ ಮಾಡುವ ತನ್ನ ಗೆಳಯರಿಗೆ ಅಡುಗೆ ಮಾಡುವ ಜವಾಬ್ದಾರಿ ಹೊತ್ತಿದ್ದ. ಹೀಗಿರುವಾಗ ರಾತ್ರಿ ಬರ ಸಿಡಿಲಿನಂತೆ ಬಂದ ವರುಣ ಆ ಯುವಕನನ್ನು ಬಲಿ ಪಡೆದಿದೆ. ಹೌದು, ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಇಸ್ಕಾನ್ ಟೆಂಪಲ್ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಿಹಾರದಿಂದ ಬಂದಿರುವ ಇಪ್ಪತ್ತಕ್ಕೂ ಹೆಚ್ಚು ಯುವಕರು ಕಟ್ಟಡ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಇದೇ ಸ್ಥಳದಲ್ಲಿ ತಾತ್ಕಾಲಿಕ ತಗಡಿನ ಶೆಡ್ ಹಾಕಿಕೊಡಲಾಗಿತ್ತು. ಆ ಶೆಡ್​ನಲ್ಲಿ 19 ವರ್ಷದ ಪುರಣ್ ಪೂಜಾರಿ , ಭವಾನಿ ಸಿಂಗ್, ಮತ್ತು ಮಿಥುನ್ ಮೂವರು ಯುವಕರಿದ್ದರು. ಭವಾನಿ ಮತ್ತು ಮಿಥುನ್ ಕಟ್ಟಡ ಕೆಲಸ ಮಾಡುತ್ತಿದ್ದರೆ, ಪುರಣ್ ಅಡುಗೆ ಭಟ್ಟನಾಗಿದ್ದ.  ನೆನ್ನೆ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ತಾತ್ಕಾಲಿವಾಗಿ ನಿರ್ಮಿಸಿದ್ದ ಶೆಡ್ ಪಕ್ಕದಲ್ಲೇ ಇದ್ದ ಹಳೇ ಗೋಡೆ ತಳಭಾಗದಲ್ಲಿ ನೀರು ನಿಂತಿತ್ತು. ರಾತ್ರಿ ಮಳೆಯಲ್ಲಿ ಭಯದ ನಡುವೆಯೇ ಮಲಗಿದ್ದರು. ಬೆಳಗ್ಗೆ 5.30 ರ ಸುಮಾರಿಗೆ ಶೆಡ್ ಮೇಲೆ ಗೋಡೆ ಕುಸಿದಿದೆ. ಪರಿಣಾಮ ಆ ಗೋಡೆಗೆ ಹೊಂದಿಕೊಂಡಂತೇ ಮಲಗಿದ್ದ ಪುರಣ್ ಪೂಜಾರಿ ತಲೆಗೆ ಹೊಡೆದಿದ್ದು, ತೀವ್ರ ರಕ್ತ ಸ್ರಾವವಾಗಿದೆ‌. ಉಳಿದ ಇಬ್ಬರಿಗೂ ಗಾಯಗಳಾಗಿವೆ.

ಇದನ್ನು ಓದಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಗಮ ಸಂಚಾರಕ್ಕಿಲ್ಲ ಭಾಗ್ಯ; ನಡೆಯುತ್ತಿದೆ ಶೂನ್ಯ ಫಲಿತಾಂಶದ ದುರಸ್ತಿ ಕಾಮಗಾರಿಘಟನೆ ಬಳಿಕ ಮೂವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪುರಣ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
Published by:HR Ramesh
First published: