Bangalore Rain; ಬೆಂಗಳೂರಿನಲ್ಲಿ ಅಬ್ಬರಿಸುತ್ತಿರುವ ವರುಣ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಜನ ಜೀವನ ಅಸ್ತವ್ಯಸ್ತ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿತ್ತು. ಮಂಗಳವಾರ ರಾತ್ರಿ ಮಾತ್ರ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆ ದಾಖಲಾಗಿತ್ತು. ಆದರೆ, ಬುಧವಾರದ ಭಾರೀ ಮಳೆಗೆ ಇಡೀ ನಗರ ಸ್ತಬ್ಥವಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಆರಂಭವಾದ ಮಳೆ ನಗರದ ಹಲವೆಡೆ ಪ್ರವಾಹದ ವಾತಾವರಣವನ್ನು ಸೃಷ್ಟಿಸಿದೆ.
ಬೆಂಗಳೂರು (ಸೆಪ್ಟೆಂಬರ್ 09); ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ಗಂಟೆಯಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಮನೆಗೆ ತೆರಳಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವಾರು ಮನೆಗಳು ಜಲಾವೃತವಾಗಿವೆ ಎಂದು ತಿಳಿದುಬಂದಿದೆ. ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರ, ಗಿರಿನಗರ, ರಾಜರಾಜೇಶ್ವರಿ ನಗರ, ಯಶವಂತಪುರ, ಕತ್ರಿಗುಪ್ಪೆ, ಬನಶಂಕರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಚರಂಡಿ ತುಂಬಿ ಹರಿದು ರಸ್ತೆಗಳು ಕೆರೆಗಳಂತೆ ಮಾರ್ಪಾಟಾಗಿವೆ. ಹೀಗಾಗಿ ಹಲವೆಡೆ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಿದೆ. ಪರಿಣಾಮ ಮನೆಗೆ ತಲುಪಲು ಸಾಧ್ಯವಾಗದೆ ಸವಾರರು ಪರದಾಡುತ್ತಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿತ್ತು. ಮಂಗಳವಾರ ರಾತ್ರಿ ಮಾತ್ರ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆ ದಾಖಲಾಗಿತ್ತು. ಆದರೆ, ಬುಧವಾರದ ಭಾರೀ ಮಳೆಗೆ ಇಡೀ ನಗರ ಸ್ತಬ್ಥವಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಆರಂಭವಾದ ಮಳೆ ನಗರದ ಹಲವೆಡೆ ಪ್ರವಾಹದ ವಾತಾವರಣವನ್ನು ಸೃಷ್ಟಿಸಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಅಲ್ಲಿನ ಜನ ಇಡೀ ರಾತ್ರಿ ನಿದ್ದೆಯಿಲ್ಲದೆ ಮಳೆಯ ನಡುವೆಯೇ ದಿನಕಳೆಯುವಂತಾಗಿರುವುದು ಮಾತ್ರ ವಿಪರ್ಯಾಸ.
ಅದೃಷ್ಟವಶಾತ್ ಮಳೆಯ ಜೊತೆಗೆ ವಿಪರೀತ ಗಾಳಿ ಇಲ್ಲದ ಪರಿಣಾಮ ಎಲ್ಲೂ ಸಹ ಮರಗಳು ಉರುಳಿರುವ ಕುರಿತು ಮಾಹಿತಿ ಇಲ್ಲ. ಆದರೆ, ಮುಂದಿನ ಮೂರು ನಾಲ್ಕು ದಿನ ಸಂಜೆ ವೇಳೆ ಹೀಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ವಾಹನ ಸವಾರರು ಮತ್ತು ಕಛೇರಿಯಲ್ಲಿ ಕೆಲಸ ಮಾಡುವವರು ಸಂಜೆ 6 ಗಂಟೆಯ ಒಳಗೆ ಮನೆಗೆ ತೆರಳುವುದು ಉತ್ತಮ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ