Karnataka Rain: ರಾಜಧಾನಿಗೆ ತಂಪೆರದ ಮಳೆ; ಕೊಡಗಿನಲ್ಲೂ ವರ್ಷಧಾರೆ

ಇಂದು ಮತ್ತು ನಾಳೆ ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗುಡುಗು ಮಿಂಚಿನ ಮಳೆಯಾಗಬಹುದು

ಬೆಂಗಳೂರಿನಲ್ಲಿ ಮಳೆ

ಬೆಂಗಳೂರಿನಲ್ಲಿ ಮಳೆ

 • Share this:
  ನವ ಸಂವತ್ಸರದ ಮೊದಲ ಮಳೆ ರಾಜಧಾನಿಗೆ ತಂಪೆರೆದಿದೆ. ಬೆಳಗ್ಗೆಯಿಂದ ಮೋಡ ಮುಸುಕಿನ ವಾತವರಣವಿದ್ದು, ಮಳೆಯಾಗುವ ಬಗ್ಗೆ ಈ ಮೊದಲೇ ಹವಾಮಾನ ಇಲಾಖೆ ವರದಿ ಮಾಡಿತ್ತು. ಅಂತೆ ಸಂಜೆ ಹೊತ್ತಿನ ವರ್ಷಾಧಾರೆಗೆ ಸಿಲಿಕಾನ್​ ಸಿಟಿ ತಂಪಾಗಿದೆ. ಮೆಜೆಸ್ಟಿಕ್​, ಗಾಂಧಿನಗರ , ಶಿವಾನಂದ ವೃತ್ತ, ಶೇಷಾದ್ರಿಪುರ ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಇನ್ನು ಎರಡು ದಿನ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇರುವ ಕುರಿತು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ವೈಪರೀತ್ಯ ಹಾಗೂ ನೈಋತ್ಯ ಚಂಡಮಾರುತದ ಅಬ್ಬರದಿಂದ ರಾಜ್ಯದ ಹಲವೆಡೆ ಸಾಧಾರಾಣ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿತ್ತು. ಇನ್ನು ಕೊಡಗಿನಲ್ಲೂ ಕೂಡ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.  ಇಂದು ಮತ್ತು ನಾಳೆ ರಾಜ್ಯದ ಹಲವೆಡೆ ಮೋಡ ಮುಸುಕಿದ ವಾತಾವರಣ ಇರಲಿದ್ದು, ಗುಡುಗು ಮಿಂಚಿನ ಮಳೆಯಾಗಬಹುದು. ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಹಳದಿ ಆಲರ್ಟ್​ ಘೋಷಿಸಲಾಗಿದೆ. ಇನ್ನು ಧರ್ಮಸ್ಥಳ, ಪಣಂಬೂರು, ಯೆಲ್ಲಾಪುರದಲ್ಲಿ 8 ಸೆಮಿ ಮಳೆಯಾಗುವ ಸಾಧ್ಯತೆ ಇದೆ.  ಉತ್ತರ ಒಳನಾಡಿನಲ್ಲಿ ಸಾಧಾರಣ ಮಾಡಲಾಗಿದೆ. ತಾಪಮಾನದ ಹೆಚ್ಚಳದಿಂದಾಗಿ ರಾಜ್ಯದ ಹಲವೆಡೆ ಮುಂಗಾರು ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಅಧಿಕಾರಿ ಜಿಎಸ್​ ಶ್ರೀನಿವಾಸ್​ ರೆಡ್ಡಿ ತಿಳಿಸಿದ್ದಾರೆ.

  ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ತೆಲಂಗಾಣ, ಕೇರಳದಲ್ಲೂ ಇನ್ನು ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದೆ. ಪುದುಚೆರಿ, ಕನ್ಯಾಕುಮಾರಿ, ವಯನಾಡ್, ತಿರುವನಂತಪುರಂ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಹೆಚ್ಚು ಮಳೆ ಹೆಚ್ಚಳವಾಗಲಿದೆ. ಕರಾವಳಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇನ್ನು 3 ದಿನ ಮಳೆ ತೀವ್ರಗೊಳ್ಳಲಿದೆ
  Published by:Seema R
  First published: