Karnataka Rains: ಇನ್ನೂ ಮೂರು ದಿನ ಭಾರೀ ಮಳೆ; ಬೆಂಗಳೂರು ಸೇರಿ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಅಲರ್ಟ್?

Rainfall in Karnataka: ಈ ವೀಕೆಂಡ್​ನಲ್ಲಿ ಬೆಂಗಳೂರು ಮಳೆಗೆ ತೊಯ್ದು ತೊಪ್ಪೆ ಆಗಲಿದೆ. ಇಂದು ನಾಳೆ ನಗರದಾದ್ಯಂತ ಭಾರೀ ಮಳೆ ಉಂಟಾಗುವ ಸಾಧ್ಯತೆ ಇದೆ. ಭಾನುವಾರ ಮಳೆಯ ಅಬ್ಬರ ಕೊಂಚ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಳೆಯ ಚಿತ್ರ.

ಮಳೆಯ ಚಿತ್ರ.

 • Share this:
  ಬೆಂಗಳೂರು (ಏ.24): ಶುಕ್ರವಾರ ಮುಂಜಾನೆ ಬೆಂಗಳೂರು, ಕೊಡಗು ಸೇರಿ ರಾಜ್ಯದ ಬಹುತೆಕ ಕಡೆಗಳಲ್ಲಿ ಭಾರೀ ಮಳೆ ಆಗಿದೆ. ಇದೇ ಹವಾಮಾನ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೆಳಿದೆ.

  ಈ ವೀಕೆಂಡ್​ನಲ್ಲಿ ಬೆಂಗಳೂರು ಮಳೆಗೆ ತೊಯ್ದು ತೊಪ್ಪೆ ಆಗಲಿದೆ. ಇಂದು ನಾಳೆ ನಗರದಾದ್ಯಂತ ಭಾರೀ ಮಳೆ ಉಂಟಾಗುವ ಸಾಧ್ಯತೆ ಇದೆ. ಭಾನುವಾರ ಮಳೆಯ ಅಬ್ಬರ ಕೊಂಚ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

  ಇನ್ನು, ದಕ್ಷಿಣ ಕರ್ನಾಟಕದ ಭಾಗದಲ್ಲಿ ಭಾರೀ ಮಳೆ ಆಗಲಿದೆಯಂತೆ. ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಭಾಗದ ಜನತೆಗೆ ಈಗಾಗಲೇ ಹವಾಮಾನ ಇಲಾಖೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.

  ಗುರುವಾರ ರಾತ್ರಿಯಿಂದಲೇ ವರುಣನ ಆರ್ಭಟ ಆರಂಭವಾಗಿದೆ. ಕೊಡಗು ಭಾಗದಲ್ಲಿ ಈಗಾಗಲೇ ಮಳೆ ಜೋರಾಗಿದೆ. ಹೀಗಾಗಿ ಜನತೆ ಈ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.]

  ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ತೊಯ್ದು ತೊಪ್ಪೆಯಾದ ಬೆಂಗಳೂರು; ಉಕ್ಕಿ ಹರಿದ ಚರಂಡಿಗಳು

  ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಗುಡು-ಮಿಂಚು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಚಿಕ್ಕದಾಗಿ ಕಾಣಿಸಿಕೊಂಡಿದ್ದ ಮಳೆ ಬೆಳಗ್ಗೆ 6.30ರ ವೇಳೆಗೆ ರೌದ್ರ ನರ್ತನ ಆರಂಭಿಸಿತ್ತು. ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.
  First published: