Bangalore Rain: ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ; ಇಂದು ಕೂಡ ಭಾರೀ ಮಳೆಯಾಗಲಿದೆ ಎಚ್ಚರ!
Bangalore Rain Updates: ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿದ ಮಳೆ ರಾತ್ರಿಯವರೆಗೂ ಮುಂದುವರೆದಿತ್ತು. ಒಂದೇ ಸಮನೆ ಸುರಿದ ಮಳೆಯಿಂದ ರಸ್ತೆಗಳೆಲ್ಲ ಹೊಳೆಯಂತಾಗಿತ್ತು. ರಾಜಕಾಲುವೆಗಳು ಉಕ್ಕಿ ಹರಿದಿದ್ದು, ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನಿಂತಿತ್ತು.
news18-kannada Updated:October 24, 2020, 8:13 AM IST

ಬೆಂಗಳೂರಿನ ಮಳೆಗೆ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಏರಿಯಾಗೆ ನುಗ್ಗಿದ ನೀರು
- News18 Kannada
- Last Updated: October 24, 2020, 8:13 AM IST
ಬೆಂಗಳೂರು (ಅ. 24): ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ಶುಕ್ರವಾರ ಅಕ್ಷರಶಃ ಕೆರೆಯಂತಾಗಿತ್ತು. ಎಲ್ಲಿ ನೋಡಿದರೂ ಮಳೆಯ ನೀರು, ಅಲ್ಲಲ್ಲಿ ತೇಲಿಬಂದ ಕಾರು, ಬೈಕುಗಳು, ಮನೆಯೊಳಗೆ ನುಗ್ಗಿದ ಕೆಂಪು ನೀರು, ಮಳೆಗೆ ಕುಸಿದ ಗೋಡೆಗಳು, ಮುರಿದು ಬಿದ್ದ ಮರಗಳು, ರಾಜಕಾಲುವೆ ಯಾವುದು, ರಸ್ತೆ ಯಾವುದು ಎಂಬು ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇಂದು ಬೆಳಗ್ಗೆಯೂ ಮೋಡ ಕವಿದಿದ್ದು, ಮಧ್ಯಾಹ್ನದಿಂದ ಮತ್ತೆ ಮಳೆ ಶುರುವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಇಂದು ಕೂಡ ಹಳದಿ ಅಲರ್ಟ್ ಘೋಷಿಸಿದೆ.
ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರು ನಲುಗಿ ಹೋಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಬಸವನಗುಡಿ, ಆರ್ಆರ್ ನಗರ, ಮೈಸೂರು ರಸ್ತೆ, ಕೆಂಗೇರಿ, ಹೆಬ್ಬಾಳ, ಕತ್ರಿಗುಪ್ಪೆ, ಗಿರಿನಗರ, ಜಯನಗರ, ಹೊಸಕೆರೆಹಳ್ಳಿ, ಬನಶಂಕರಿ, ಬಿಟಿಎಂ ಲೇಔಟ್, ನಾಯಂಡನಹಳ್ಳಿ, ಬ್ಯಾಟರಾಯನಪುರ, ಹನುಮಂತನಗರ, ವಿದ್ಯಾಪೀಠ ಸುತ್ತಮುತ್ತ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹೊಸಕೆರೆಹಳ್ಳಿಯಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿವೆ.
ಹೊಸಕೆರೆಹಳ್ಳಿಯಲ್ಲಿ ಮನೆಯಲ್ಲಿ ಸಿಲುಕಿದ ಮಕ್ಕಳು ಮತ್ತು ನವಜಾತ ಶಿಶುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹೊಸಕೆರೆಹಳ್ಳಿ ನಾಲ್ಕನೇ ರಸ್ತೆಯಲ್ಲಿರುವ ಶೀಟಿನ ಮನೆಯಲ್ಲಿದ್ದ ಕೃಷ್ಣಮೂರ್ತಿ ಕುಟುಂಬಸ್ಥರು ಕೂಗುತ್ತ ಸಹಾಯಕ್ಕಾಗಿ ಮೊರೆಯಿಡುತ್ತಿದ್ದರು. ತಕ್ಷಣ ಮನೆಯೊಳಗೆ ಓಡಿದ ಸ್ಥಳೀಯರು ಎದೆಯೆತ್ತರಕ್ಕೆ ನಿಂತ ನೀರಿನ ನಡುವೆಯೂ ಮನೆಯೊಳಗಿದ್ದ ಎರಡು ವರುಷದ ಮಗು, 15 ದಿನದ ನವಜಾತ ಶಿಶು, ತಾಯಿ ಲಕ್ಷ್ಮಿ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು.ಇದನ್ನೂ ಓದಿ: Bangalore Rain: ಮಹಾಮಳೆಗೆ ಮುಳುಗಿದ ಬೆಂಗಳೂರು
ನವರಾತ್ರಿಯ ಏಳನೇ ದಿನವೇ ಮಳೆ ಅಬ್ಬರಿಸಿದ್ದು, ವರುಣನ ಆರ್ಭಟಕ್ಕೆ ನಿನ್ನೆ ಸಿಲಿಕಾನ್ ಸಿಟಿಯ ಜನರು ಅಕ್ಷರಶ: ತತ್ತರಿಸಿದ್ದಾರೆ. ಬೆಂಗಳೂರಿನ ನೈಋತ್ಯ ಮತ್ತು ದಕ್ಷಿಣ ಭಾಗದಲ್ಲಿ ನಿನ್ನೆ 10.3 ಸೆಂ.ಮೀ ಮಳೆ ಸುರಿದಿದೆ. ಇಂದು ಮತ್ತು ನಾಳೆ ಎರಡು ದಿನ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆ ಮುಂದುವರೆಯುವ ಸಾಧ್ಯತೆಯಿದೆ. ರಾಜಕಾಲುವೆ ಪ್ರಮಾಣಕ್ಕಿಂತ ದುಪ್ಪಟ್ಟಾಗಿ ರಸ್ತೆಗಳಲ್ಲಿ ಪ್ರವಾಹದಂತೆ ಹರಿದಿದ್ದ ಮಳೆ ನೀರಿನಿಂದ ನಿನ್ನೆ ರಾತ್ರಿ ಪ್ರವಾಹದಂತೆ ಕೆಲ ಪ್ರದೇಶಗಳಲ್ಲಿ ಮಳೆ ನೀರು ತುಂಬಿತ್ತು. ಹೊಸಕೆರೆಹಳ್ಳಿ ಭಾಗ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳೆಲ್ಲವೂ ಕೊಚ್ಚೆಯಂತೆ ಮಾರ್ಪಾಡಾಗಿತ್ತು.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ವರುಣನ ಆರ್ಭಟ ಶುರುವಾಗಿದ್ದು, ಹೊಸಕೆರೆಹಳ್ಳಿ ಕೆರೆಯಂತಾಗಿತ್ತು. ಇಲ್ಲಿಯ ದತ್ತಾತ್ರೇಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿಯೇ 4-8 ಅಡಿ ಮಳೆ ನೀರು ನಿಂತಿತ್ತು. ರಾಜಕಾಲುವೆ 15 ಅಡಿ ಮೀರಿ ಹರಿಯುತ್ತಿತ್ತು. 250 ಮನೆಗಳು, 40 ಶೆಡ್, 50 ಗುಡಿಸಲಿಗೆ ಮಳೆ ನೀರಿನ ಹಾನಿಯಾಗಿದೆ. ರಾತ್ರಿಯಿಡೀ ನಿದ್ರೆಯಿಲ್ಲದೆ ಕಳೆದ ಹೊಸಕೆರೆಹಳ್ಳಿ ನಿವಾಸಿಗಳು ಇಂದು ಬೆಳಗ್ಗೆ ಮನೆಯೊಳಗಿನ ನುಗ್ಗಿದ ನೀರು ಹೊರ ಹಾಕಿದರು.
ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿವೆ. ದಿನ ಬಳಕೆಯ ವಸ್ತುಗಳ ಜೊತೆ ಹಬ್ಬಕ್ಕೆ ತಂದಿಟ್ಟಿದ್ದ ವಸ್ತುಗಳು ನೀರು ಪಾಲಾಗಿವೆ. ಹೊಸಕೆರೆಹಳ್ಳಿಯಲ್ಲಿ ದತ್ತಾತ್ರೇಯ ದೇವಸ್ಥಾನದ ಕಾಂಪೌಂಡ್ ಕುಸಿತವಾಗಿದೆ. ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಕೆಸರಂತಾಗಿದೆ. ದತ್ರಾತ್ರೇಯ ದೇವಸ್ಥಾನದ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶವಾಗಿವೆ.

@BBMPCOMM @CMofKarnataka @BJP4Karnataka @BBMP_MAYOR nan tax Duddhu thindu, nan vote thogondu yeno maadthaydira 🤮 #BangaloreRains pic.twitter.com/gc4JooXhu2
— HARSHA (@harsha85) October 23, 2020
ಹೊಸಕೆರೆಹಳ್ಳಿಯಲ್ಲಿ ಮನೆಯಲ್ಲಿ ಸಿಲುಕಿದ ಮಕ್ಕಳು ಮತ್ತು ನವಜಾತ ಶಿಶುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹೊಸಕೆರೆಹಳ್ಳಿ ನಾಲ್ಕನೇ ರಸ್ತೆಯಲ್ಲಿರುವ ಶೀಟಿನ ಮನೆಯಲ್ಲಿದ್ದ ಕೃಷ್ಣಮೂರ್ತಿ ಕುಟುಂಬಸ್ಥರು ಕೂಗುತ್ತ ಸಹಾಯಕ್ಕಾಗಿ ಮೊರೆಯಿಡುತ್ತಿದ್ದರು. ತಕ್ಷಣ ಮನೆಯೊಳಗೆ ಓಡಿದ ಸ್ಥಳೀಯರು ಎದೆಯೆತ್ತರಕ್ಕೆ ನಿಂತ ನೀರಿನ ನಡುವೆಯೂ ಮನೆಯೊಳಗಿದ್ದ ಎರಡು ವರುಷದ ಮಗು, 15 ದಿನದ ನವಜಾತ ಶಿಶು, ತಾಯಿ ಲಕ್ಷ್ಮಿ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಿದರು.ಇದನ್ನೂ ಓದಿ: Bangalore Rain: ಮಹಾಮಳೆಗೆ ಮುಳುಗಿದ ಬೆಂಗಳೂರು
#BengaluruRains
Hosakerehalli lake breached, Houses and roads flooded #Bengaluru pic.twitter.com/2AhRcq63xU
— Kiran Parashar (@KiranParashar21) October 23, 2020
ನವರಾತ್ರಿಯ ಏಳನೇ ದಿನವೇ ಮಳೆ ಅಬ್ಬರಿಸಿದ್ದು, ವರುಣನ ಆರ್ಭಟಕ್ಕೆ ನಿನ್ನೆ ಸಿಲಿಕಾನ್ ಸಿಟಿಯ ಜನರು ಅಕ್ಷರಶ: ತತ್ತರಿಸಿದ್ದಾರೆ. ಬೆಂಗಳೂರಿನ ನೈಋತ್ಯ ಮತ್ತು ದಕ್ಷಿಣ ಭಾಗದಲ್ಲಿ ನಿನ್ನೆ 10.3 ಸೆಂ.ಮೀ ಮಳೆ ಸುರಿದಿದೆ. ಇಂದು ಮತ್ತು ನಾಳೆ ಎರಡು ದಿನ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆ ಮುಂದುವರೆಯುವ ಸಾಧ್ಯತೆಯಿದೆ. ರಾಜಕಾಲುವೆ ಪ್ರಮಾಣಕ್ಕಿಂತ ದುಪ್ಪಟ್ಟಾಗಿ ರಸ್ತೆಗಳಲ್ಲಿ ಪ್ರವಾಹದಂತೆ ಹರಿದಿದ್ದ ಮಳೆ ನೀರಿನಿಂದ ನಿನ್ನೆ ರಾತ್ರಿ ಪ್ರವಾಹದಂತೆ ಕೆಲ ಪ್ರದೇಶಗಳಲ್ಲಿ ಮಳೆ ನೀರು ತುಂಬಿತ್ತು. ಹೊಸಕೆರೆಹಳ್ಳಿ ಭಾಗ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳೆಲ್ಲವೂ ಕೊಚ್ಚೆಯಂತೆ ಮಾರ್ಪಾಡಾಗಿತ್ತು.
Flood in banglore because of heavy rain
Retweet#BangaloreRains pic.twitter.com/a51jg0mxLX
— gautam gada (@gatsbyweed) October 23, 2020