ಬೆಂಗಳೂರು (ಮಾ.21): ನಗರದಲ್ಲಿ ಶುಕ್ರವಾರ ಏಕಾಏಕಿ ಮಳೆ ಸುರಿದಿತ್ತು. ಬೇಸಿಗೆಯ ಝಳಕ್ಕೆ ತತ್ತರಿಸಿದ್ದ ಬೆಂಗಳೂರು ಜನತೆಗೆ ತಂಪನ್ನೆರೆದಿತ್ತು. ಆದರೆ, ಏಕಾಏಕಿ ಸುರಿದ ಮಳೆಗೆ ಬೆಂಗಳೂರಿಗರು ತತ್ತರಿಸಿದ್ದರು. ಇಂದು ಕೂಡ ಮಳೆ ಸುರಿಯಲಿದೆಯೇ? ಈ ಪ್ರಶ್ನೆ ಅನೇಕರಲ್ಲಿ ಕಾಡುವುದು ಸಹಜ. ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಲ್ಲಿ ಮಳೆ ಆರಂಭವಾಗಿತ್ತು. ಮಿಂಚು-ಗುಡುಗು ಸಹಿತ ಮಳೆಯಾಗಿತ್ತು. ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದರೆ ಮತ್ತೆ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಿದೆಕೆಲವರು ಕಚೇರಿಯಿಂದ ಮನೆಗೆ ತೆರಳುವವರಿದ್ದರು. ಇನ್ನೂ ಕೆಲವರು ಬೇರೆ ಬೇರೆ ಕೆಲಸಗಳಿಗಾಗಿ ಮನೆಯಿಂದ ಹೊರ ಬಂದಿದ್ದರು. ಇವರೆಲ್ಲರೂ ಮಳೆಯಲ್ಲಿಯೇ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯಕಂಡು ಬಂತು.
ಇದನ್ನೂ ಓದಿ: ರಾಜಧಾನಿಯಲ್ಲಿ ಧಾರಾಕಾರ ಮಳೆ; ಬೇಸಿಗೆಯಿಂದ ಬೆಂದ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ
ಹಾಗಿದ್ದರೆ ಇಂದಿನ ಹವಾಮಾನ ಹೇಗಿರಲಿದೆ? ಇಂದು ಮಳೆಯಾಗುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಮುಂಜಾನೆ ಸೂರ್ಯನ ದರ್ಶನ ಆಗಿದೆ. ಸಂಜೆಯವರೆಗೆ ಆಗಾಗ ಮೋಡ ಕವಿಯಲಿದೆ. ಇದನ್ನು ಹೊರತುಪಡಿಸಿ ಮಳೆಯಾಗದು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಇಂದು ಮುಂಜಾನೆ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇತ್ತು. ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯನ್ ದಾಖಲಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ತಾಪಾಮನಾ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ