Bengaluru Rains: ಮಳೆಯ ಆರ್ಭಟಕ್ಕೆ ತೊಯ್ದು ತೊಪ್ಪೆಯಾದ ಬೆಂಗಳೂರು; ಉಕ್ಕಿ ಹರಿದ ಚರಂಡಿಗಳು

Heavy Rainfall in Bengaluru: ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು (ಏ.24): ನಗರದಲ್ಲಿ ವರುಣ ಅಬ್ಬರಿಸಿದ್ದಾನೆ. ರಾತ್ರಿ ಇಡೀ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಮುಂಜಾನೆ ಜೋರಾಗಿದೆ. ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ.

    ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಗುಡು-ಮಿಂಚು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಚಿಕ್ಕದಾಗಿ ಮಳೆ ಸುರಿದಿತ್ತು. ಬೆಳಗ್ಗೆ 6.30ರ ಸುಮಾರಿಗೆ ಮಳೆ ರೌದ್ರ ನರ್ತನ ಆರಂಭಿಸಿತ್ತು. ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗಿದೆ.

    ಇದನ್ನೂ ಓದಿ: ರಾಮನಗರ ಜೈಲಿನಲ್ಲಿ ಇರಿಸಿದ್ದ ಪಾದರಾಯನಪುರ ಗಲಭೆ ಆರೋಪಿತರ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು!

    ಪರದಾಡಿದ ಜನತೆ

    ಮುಂಜಾನೆ ಹಾಲು-ಮೊಸರು ಇತ್ಯಾದಿ ಅಗತ್ಯ ವಸ್ತುಗಳನ್ನು ತರಲು ಜನರು ಹೊರ ನಡೆದಿದ್ದರು. ಈ ವೇಳೆ ಮಳೆಯಿಂದ ಅನೇಕರು ಪರದಾಡಿದರು. ಇನ್ನು, ಬಹುತೇಕ ಸಂಸ್ಥೆಗಳಿಗೆ ವರ್ಕ್​ ಫ್ರಮ್​ ಹೋಮ್​ ನೀಡಿವೆ. ಹೀಗಾಗಿ, ಈ ಮಳೆಯಿಂದ ಅಷ್ಟಾಗಿ ತೊಂದರೆ ಉಂಟಾಗಿಲ್ಲ.

    ರಸ್ತೆ ಮೇಲೆ ನಿಂತ ನೀರು

    ಭಾರೀ ಮಳೆಯಿಂದಾಗಿ ಮೋರಿಗಳು ಉಕ್ಕಿ ರಸ್ತೆಯ ಮೇಲೆಲ್ಲ ನೀರು ತುಂಬಿದ ದೃಶ್ಯಗಳು ಬಹತೇಕ ಕಡೆಗಳಲ್ಲಿ ಕಂಡು ಬಂತು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

    First published: