HOME » NEWS » State » BANGALORE RAIN AFTER HEAVY RAIN IN BENGALURU HOSAKEREHALLI NEWBORN BABY RESCUE VIDEO VIRAL SCT

Bangalore Rain: ಬೆಂಗಳೂರಿನಲ್ಲಿ ಹಸುಗೂಸನ್ನು ಎತ್ತಿ ಹಿಡಿದು ಪ್ರವಾಹ ದಾಟಿದ ಯುವಕ; ವಿಡಿಯೋ ವೈರಲ್

ನಿನ್ನೆ ಸಂಜೆ ಹೊಸಕೆರೆಹಳ್ಳಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಬಾಣಂತಿ ಮತ್ತು 15 ದಿನದ ಮಗು ಕೂಡ ಮಳೆ ನೀರಿನಲ್ಲಿ ಸಿಲುಕಿದ್ದರು. ಯುವಕನೊಬ್ಬ 15 ದಿನದ ಮಗುವನ್ನು ಕೈಯಲ್ಲಿ ಎತ್ತಿ ಹಿಡಿದು ಪ್ರವಾಹದ ನೀರನ್ನು ದಾಟಿ, ಮಗುವನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.

news18-kannada
Updated:October 24, 2020, 9:45 AM IST
Bangalore Rain: ಬೆಂಗಳೂರಿನಲ್ಲಿ ಹಸುಗೂಸನ್ನು ಎತ್ತಿ ಹಿಡಿದು ಪ್ರವಾಹ ದಾಟಿದ ಯುವಕ; ವಿಡಿಯೋ ವೈರಲ್
ಬೆಂಗಳೂರಿನ ರಸ್ತೆಗಳಲ್ಲಿ ನಿಂತ ಮಳೆ ನೀರು
  • Share this:
ಬೆಂಗಳೂರು (ಅ. 24): ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿದ ಮಳೆಯಿಂದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಉಕ್ಕಿ ಹರಿದ ಪರಿಣಾಮದಿಂದ ತಗ್ಗು ಪ್ರದೇಶದ ಮನೆಗಳು ಜಲಾವೃತವಾಗಿವೆ. ಬನಶಂಕರಿ, ಬಸವನಗುಡಿ, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ಮೈಸೂರು ರಸ್ತೆಯಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದೆ. ಇನ್ನೂ ಕೂಡ ಮನೆಯೊಳಗಿನ ನೀರನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಲೇ ಇದೆ. ನಿನ್ನೆ ಸಂಜೆ ಹೊಸಕೆರೆಹಳ್ಳಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಬಾಣಂತಿ ಮತ್ತು 15 ದಿನದ ಮಗು ಕೂಡ ಮಳೆ ನೀರಿನಲ್ಲಿ ಸಿಲುಕಿದ್ದರು. ಮನೆಯೊಳಗೆ ನೀರು ನುಗ್ಗಿದ್ದರಿಂದ ಹೊರಗೆ ಬರಲಾರದಂತಾಗಿತ್ತು. ಈ ವೇಳೆ ಅವರ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಬಾಣಂತಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಯುವಕನೊಬ್ಬ 15 ದಿನದ ಮಗುವನ್ನು ಕೈಯಲ್ಲಿ ಎತ್ತಿ ಹಿಡಿದು ಪ್ರವಾಹದ ನೀರನ್ನು ದಾಟಿ, ಮಗುವನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.

ಮಳೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಮತ್ತು ಹಸುಗೂಸನ್ನು ಎದುರಿನ ಮನೆಯ 2ನೇ ಮಹಡಿಗೆ ಶಿಫ್ಟ್​ ಮಾಡಲಾಯಿತು. ಆ ವಿಡಿಯೋ ವೈರಲ್ ಆಗಿದ್ದು, ಬಾಹುಬಲಿ ಸಿನಿಮಾದಲ್ಲಿ ನದಿಯಲ್ಲಿ ಮಗುವನ್ನು ಎತ್ತಿಹಿಡಿದಿದ್ದ ರೀತಿಯಲ್ಲೇ ಹೊಸಕೆರೆಹಳ್ಳಿಯಲ್ಲೂ ಮಗುವನ್ನು ರಕ್ಷಿಸಲಾಗಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ದತ್ತಾತ್ರೇಯ ನಗರದಲ್ಲಿ ಸುಮಾರು ಮೂನ್ನೂರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಒಂದು ವಠಾರದ ಐವತ್ತಕ್ಕೂ ಹೆಚ್ಚು ಮನೆ ಸಂಪೂರ್ಣ ಕೆಸರುಮಯವಾಗಿದೆ. ಹದಿನೈದು ದಿನದ ಬಾಣಂತಿಯನ್ನ ಪವಾಡದ ರೀತಿಯಲ್ಲಿ ಬಚಾವ್ ಮಾಡಿದ್ದ ಸ್ಥಳೀಯರು ಮಗುವನ್ನು ಎತ್ತಿ ಹಿಡಿದು ರಕ್ಷಿಸಿದ್ದಾರೆ.


ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರು ನಲುಗಿ ಹೋಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಬಸವನಗುಡಿ, ಕತ್ರಿಗುಪ್ಪೆ, ಗಿರಿನಗರ, ಜಯನಗರ, ಹೊಸಕೆರೆಹಳ್ಳಿ, ಬನಶಂಕರಿ, ಬಿಟಿಎಂ ಲೇಔಟ್, ನಾಯಂಡನಹಳ್ಳಿ, ಬ್ಯಾಟರಾಯನಪುರ, ಹನುಮಂತನಗರ, ವಿದ್ಯಾಪೀಠ ಸುತ್ತಮುತ್ತ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹೊಸಕೆರೆಹಳ್ಳಿಯಲ್ಲಿ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿವೆ. ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ವರುಣನ ಆರ್ಭಟ ಶುರುವಾಗಿದ್ದು, ಹೊಸಕೆರೆಹಳ್ಳಿ ಕೆರೆಯಂತಾಗಿತ್ತು.

ಹೊಸಕೆರೆಹಳ್ಳಿಯ ದತ್ತಾತ್ರೇಯ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಯಲ್ಲಿಯೇ 4-8 ಅಡಿ ಮಳೆ ನೀರು ನಿಂತಿತ್ತು. ರಾಜಕಾಲುವೆ 15 ಅಡಿ ಮೀರಿ ಹರಿಯುತ್ತಿತ್ತು. 250 ಮನೆಗಳು, 40 ಶೆಡ್, 50 ಗುಡಿಸಲಿಗೆ ಮಳೆ ನೀರಿನ ಹಾನಿಯಾಗಿದೆ. ರಾತ್ರಿಯಿಡೀ ನಿದ್ರೆಯಿಲ್ಲದೆ ಕಳೆದ‌ ಹೊಸಕೆರೆಹಳ್ಳಿ‌ ನಿವಾಸಿಗಳು ಇಂದು ಬೆಳಗ್ಗೆ ಮನೆಯೊಳಗಿನ ನುಗ್ಗಿದ ನೀರು ಹೊರ ಹಾಕಿದರು. ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿವೆ.
Published by: Sushma Chakre
First published: October 24, 2020, 9:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories