ಬೆಂಗಳೂರು (ಆಗಸ್ಟ್ 05); ನಗರದಲ್ಲಿ ಪೊಲೀಸರ ಪಿಸ್ತೂಲು ಮತ್ತೊಮ್ಮೆ ಸದ್ದು ಮಾಡಿದೆ. ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಭೂಗತನಾಗಿದ್ದ ನಟೋರಿಯಸ್ ರೌಡಿ ಶೀಟರ್ ಮೇಲೆ ಶೂಟೌಟ್ ನಡೆದಿದೆ. ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯ ಅರೇಬಿಕ್ ಕಾಲೇಜು ಬಳಿ ನಟೋರಿಯಸ್ ರೌಡಿ ಅನೀಫ್ ಮೇಲೆ ಕೆ.ಜಿ ಹಳ್ಳಿ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಫೈರ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ರೌಡಿ ಅನೀಫ್ ಕೆ ಜಿ ಹಳ್ಳಿ ರೌಡಿ ಪೊಲೀಸರಿಗೆ ಕಳೆದ ಮೂರು ವರ್ಷಗಳಿಂದ ಚಳ್ಳೆಹಣ್ಣು ತಿನ್ನಿಸಿದ್ದ. ಈತ ಒಂದು ಕೊಲೆ ಮತ್ತು ಹಲವು ರಾಬರಿ ಕೇಸ್‌ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅರೋಪಿಯಾಗಿದ್ದ ಎಂದು ತಿಳಿದುಬಂದಿದೆ. ಈತನ ಮೇಲೆ ಸದಾ ಒಂದು ಕಣ್ಣಿಟ್ಟಿದ್ದ ಪೊಲೀಸರಿಗೆ ಕಳೆದ ರಾತ್ರಿ ಒಂದು ಮೆಸೇಜ್ ಬಂದಿತ್ತು. ಅರೇಬಿಕ್ ಕಾಲೇಜಿನ ಬಳಿ ಅನೀಫ್ ಇದ್ದಾನೆ ಎಂದು ತಿಳಿದುಬಂದಿತ್ತು. ಕೂಡಲೇ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ತಂಡವನ್ನು ರಚನೆ ಮಾಡಿಕೊಂಡು ಮುಂಜಾನೆಯ ವೇಳೆಯಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಇದನ್ನೂ ಓದಿ : ಅಯೋಧ್ಯೆಯಲ್ಲಿ ಭೂಮಿ ಪೂಜೆ ಮಾಡುತ್ತಿದ್ದಂತೆ ಯಾದಗಿರಿ ಜಿಲ್ಲಾದ್ಯಂತ ದೇಗುಲಗಳಲ್ಲಿ ವಿಶೇಷ ಪೂಜೆ
ಇದೇ ವೇಳೆ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಅನೀಫ್ ತನ್ನ ಬಳಿ ಇದ್ದ ಆಯುಧದಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಗಾಳಿಯಲ್ಲಿ ಎರಡು ರೌಂಡ್ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದರೂ ಕೇಳದ ಆತ ಇನ್ಸ್ ಪೆಕ್ಟರ್ ಮೇಲೆಯೇ ಅಟ್ಯಾಕ್ ಮಾಡಲು ಬಂದಾಗ ಪ್ರಾಣ ರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ