ಸಿಲಿಕಾನ್ ಸಿಟಿಯಲ್ಲಿ (Bengaluru) ಮಾದಕ ದ್ರವ್ಯ ಜಾಲ (drugs) , ತನ್ನ ಕಬಂಧ ಬಾಹುಗಳನ್ನು ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಲೇ ಇದೆ. ಈ ನಡುವೆ ಪೊಲೀಸರು (Police) ಸಹ ಗಾಂಜಾ ಡ್ರಗ್ಸ್ ಫೆಡ್ಲರ್ಗಳನ್ನು ಬಂಧನ ಮಾಡುತ್ತಲೇ ಇದ್ದಾರೆ. ಆದರೂ ಡ್ರಗ್ಸ್ ಮಾರಾಟ ಜಾಲಕ್ಕಿನ್ನೂ ಬ್ರೇಕ್ ಬಿದ್ದಿಲ್ಲ. ಹೀಗಿರುವಾಗ ರಾಜಧಾನಿಯ ಕಾಳಸಂತೆಯಲ್ಲಿ ಮೊದಲ ಬಾರಿಗೆ ಬ್ಲಾಕ್ ಎಂಡಿಎಂಎ ಡ್ರಗ್ ಪತ್ತೆಯಾಗಿದೆ. ವಿದೇಶಗಳಲ್ಲಿ ಕಂಡುಬರುತ್ತಿದ್ದ ಈ ಬ್ಲಾಕ್ ಎಂಡಿಎಂಎ (MDMA) ಸಿಲಿಕಾನ್ ಸಿಟಿಯಲ್ಲಿಯೂ ಸಹ ಪತ್ತೆಯಾಗಿದ್ದು, ನಿಜಕ್ಕೂ ಆತಂಕದ ವಿಚಾರವಾಗಿದೆ. ವಿಶ್ವದಲ್ಲೇ ಟಾಪ್ ಎಂಡ್ ಡ್ರಗ್ ಗಳಲ್ಲಿ ಬ್ಲಾಕ್ ಎಂಡಿಎಂಎಗೆ ಬಹಳ ಮುಖ್ಯವಾಗಿದೆ.
ಹೈ ಎಂಡ್ ಪಾರ್ಟಿಗಳು ಮತ್ತು ಸೆಲೆಬ್ರಿಟಿಗಳಿಗೆ ಸಪ್ಲೈ ಆಗ್ತಿದ್ದ ಡ್ರಗ್ ಸೀಜ್ ಮಾಡಲಾಗಿದೆ. ನೈಜೀರಿಯ ಮೂಲದ ಸಿಕ್ಸ್ಟಸ್ ಉಕ್ಚೆಕ್ ಮತ್ತು ಚುಕ್ವಾಡ್ಬೆಮ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 3 ಕೋಟಿ ಮೌಲ್ಯದ 1.5 ಕೆಜಿ ಎಂಡಿಎಂಎ ಕ್ರಿಸ್ಟಲ್ , 120 ಗ್ರಾಂ ಬ್ಲಾಕ್ ಎಂ ಡಿ ಎಂ ಎ , 16.5 ಕೆಜಿ ಎಂಡಿಎಂಎ ಮಿಕ್ಸ್ಡ್ ವೀಡ್ ಆಯಿಲ್ , 300 ಗ್ರಾಂ ವೀಡ್ ಆಯಿಲ್ ಸೀಜ್ ಮಾಡಲಾಗಿದೆ.
ಇದನ್ನೂ ಓದಿ: Congress ನನ್ನ ಬಿಟ್ಟಿದೆ - ರೇಪ್ ಮಾಡಿಸಿಕೊಂಡವರ ಸ್ಥಿತಿ ನನ್ನದಾಗಿದೆ - ಹೀಗೆಂದವರು ಯಾರು ಗೊತ್ತಾ..?
ಗೋವಿಂದಪುರ ಇನ್ಸ್ ಪೆಕ್ಟರ್ ಪ್ರಕಾಶ್ ಅಂಡ್ ಟೀಂ ನಿಂದ ಈ ಆರೋಪಿಗಳು ಅರೆಸ್ಟ್ ಮಾಡಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ. ಬೆಂಗಳೂರಿನ ಹೊರಮಾವಿನಲ್ಲಿರುವ ನ್ಯೂ ರಾಜಣ್ಣ ಬಡಾವಣೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳು ಹೆಚ್ಚು ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು.
ಇದನ್ನೂ ಓದಿ: Siddaramaih ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡ್ತಾರೆ - ಮಾಜಿ ಸಿಎಂ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಸೆಲೆಬ್ರಿಟಿಗಳೇ ಇವರ ಟಾರ್ಗೆಟ್
ಅದರಲ್ಲೂ ಎಚ್ಬಿಆರ್ ಬಡಾವಣೆ 5ನೇ ಹಂತದಲ್ಲಿರುವ ಅಂಬೇಡ್ಕರ್ ಮೈದಾನದ ಬಳಿ ಸೆಲಿಬ್ರಿಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳ ಬಂಧನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ