ಸ್ಯಾಂಡಲ್ ವುಡ್ ಖ್ಯಾತ ನಟ ಶಕ್ತಿ ಕಪೂರ್ ಪುತ್ರ. ನಟಿ ಶ್ರದ್ಧಾ ಕಪೂರ್ (Shradha Kapoor) ಸಹೋದರನ ಬಂಧನ ಆಗಿದೆ. ಬೆಂಗಳೂರು (Bengaluru) ಹಲಸೂರು ಪೊಲೀಸರು ಡ್ರಗ್ಸ್ ಕೇಸಲ್ಲಿ (Drugs Case) ಬಂಧನ ಮಾಡಿದ್ದಾರೆ. ನಗರದ ಟ್ರಿನಿಟಿ ಸರ್ಕಲ್ ಬಳಿ ಇರೋ ದಿ ಪಾರ್ಕ್ ಅನ್ನೋ ಪಂಚತಾರ ಹೋಟೆಲ್ ನಲ್ಲಿ (Five Star Hotel) ಸಿದ್ದಾಂತ್ ಕಪೂರ್ ಬಂಧನ ಆಗಿದೆ. ಟ್ರಿನಿಟಿ ಸರ್ಕಲ್ ಬಳಿಯ ಹೋಟೆಲ್ ನಲ್ಲಿ ತಡ ರಾತ್ರಿ ಪಾರ್ಟಿ ನಡಿತಾ ಇತ್ತು. ಪಾರ್ಟಿಯಲ್ಲಿ ರಾಜಕಾರಣಿ, ಉದ್ಯಮಿಗಳ ಮಕ್ಕಳು ಸೇರಿದ್ರು. ಈ ವೇಳೆ ಅಲ್ಲಿಗೆ ಲಗ್ಗೆ ಇಟ್ಟ ಪೊಲೀಸರು (Police) ಮತ್ತೇರಿಸಿಕೊಳ್ತಿದ್ದವರನ್ನ ಲಾಕ್ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ 150 ಕ್ಕೂ ಹೆಚ್ಚು ಜನರಲ್ಲಿ ಅನೇಕರು ಪೇರಿ ಕಿತ್ತಿದ್ದಾರೆ. ಹೋಟೆಲ್ ಪೂರ್ತಿ ಹುಡುಕಾಡಿದ ಪೊಲೀಸರಿಗೆ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಆಗ್ತಿತ್ತು ಅನ್ನೋ ಸಾಕ್ಷ್ಯ ಸಿಕ್ಕಿದೆ.
ಅಷ್ಟೇ ಅಲ್ಲ ಬಾಲಿವುಡ್ ನ ಶೂಟ್ ಔಟ್@ವಡಾಲಾ, ಅಗ್ಲಿ, ಅಲ್ಲಾ ಬೂಲ್ ಬುಲಯ್ಯಾ, ಭಾಗಮ್ ಭಾಗ್, ಚುಪ್ಚುಪ್ಕೆ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಖ್ಯಾತ ನಟ ಮತ್ತು ನಿರ್ದೇಶಕ ಸಿದ್ಧಾಂತ್ ಕಪೂರ್ ಕೂಡ ಲಾಕ್ ಆಗಿದ್ದಾರೆ.
ವೀಕೆಂಡ್ ಬಂದ್ರೆ ನಶೆ ಏರಿಸಿಕೊಳ್ಳೋ ಯುವಜನ
ಇನ್ನು ಸಿಲಿಕಾನ್ ಸಿಟಿಯಲ್ಲಿ ವಿಕೇಂಡ್ ಬಂದ್ರೆ ಸಾಕು ಮೋಜು ಮಸ್ತಿಗಳಿಗೆ ಏನು ಕಮ್ಮಿ ಇಲ್ಲ. ವಿಕೇಂಡ್ ಅದ್ರೆ ಸಿಟಿ ಮಂದಿ ಸಿನಿಮಾ, ಪಬ್, ಲಾಂಗ್ ಡ್ರೈವ್ ಅಂತ ಪ್ಲಾನ್ ಮಾಡಿಕೊಳ್ತಾರೆ. ಇದು ಒಂದು ಕಡೆ ಆದ್ರೆ ಮತ್ತೊಂದು ಕಡೆ ಸಿಲಿಕಾನ್ ಸಿಟಿಯ ಮತ್ತೊಂದು ಮುಖ ಅನಾವರಣ ಗೊಳ್ಳುತ್ತೆ. ಅಲ್ಲಿ ಬರೀ ಮೋಜು ಮಸ್ತಿ, ನಶೆಯದ್ದೇ ಕಾರುಬಾರು.
4 ಗುಲಾಬಿ ಬಣ್ಣ 3 ನೀಲಿ ಬಣ್ಣದ ಎಂಡಿಎಂಎ ಟ್ಯಾಬ್ಲೆಟ್ ಪತ್ತೆ
ಇದೇ ರೀತಿ ಸಿಲಿಕಾನ್ ಸಿಟಿಯ ದಿ ಸ್ಟಾರ್ ಎಂಬ ಫೈವ್ ಸ್ಟಾರ್ ಹೊಟೇಲ್ ನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದು ಹೋಟೆಲ್ ನ ಐ ಬಾರ್ ನ ಡಸ್ಟ್ ಬಿನ್ ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ .ಇದ್ರಲ್ಲಿ 4 ಗುಲಾಬಿ ಬಣ್ಣ 3 ನೀಲಿ ಬಣ್ಣದ ಎಂಡಿಎಂಎ ಟ್ಯಾಬ್ಲೆಟ್ ಪತ್ತೆಯಾಗಿದ್ದು,5 ಗ್ರಾಂ ತೂಕದ ಗಾಂಜಾ ಸಿಕ್ಕಿದೆ.
ಇದನ್ನು ಓದಿ: Covid19: ಎಚ್ಚರ, ಎಚ್ಚರ, ಬೆಂಗಳೂರಲ್ಲಿ ಜೋರಾಗಿದೆ ಕೊರೊನಾ ಅಬ್ಬರ; ಮಾಸ್ಕ್ ಮರೆಯದಿರಿ ಎಂದ್ರು ಮಿನಿಸ್ಟರ್
150 ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ರು, ಸಿಕ್ಕಿಬಿದ್ದಿದ್ದು 38 ಜನ
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರಿಗೆ 150 ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ದಿದ್ದು ಗೊತ್ತಾಗಿದೆ. ರೇಡ್ ಆಗ್ತಿದ್ದಂತೆ ಎಲ್ಲಾ ಪೇರಿ ಕಿತ್ತಿದ್ದು 14 ಯುವತಿಯರ ಮತ್ತು 21 ಜನ ಯುವಕರು ಸೇರಿದಂತೆ 35 ಜನರು ಖಾಕಿ ಕೈಗೆ ಲಾಕ್ ಆಗಿದ್ರು.ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡ್ರಗ್ಸ್ ಟೆಸ್ಟ್ ಮಾಡಿಸಿದಾಗ 38 ವರ್ಷದ ಬಾಲಿವುಡ್ ನಟ ಸಿದ್ದಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿರೋದು ದೃಢಪಟ್ಟಿದೆ. ಇವ್ರ ಜೊತೆಗೆ ಅಕಿಲ್ ಸೋನಿ,ಹರ್ಜೋತ್ ಸಿಂಗ್,ಅಕಿಲ್,ಹನಿ ಎಂಬ ಉತ್ತರ ಭಾರತ ಐವರ ರಿಪೋರ್ಟ್ ಪಾಸಿಟಿವ್ ಬಂದಿದೆ .
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಿವುಡ್ ಸ್ಟಾರ್ ನಟನ ಮಗ ಅರೆಸ್ಟ್, ಲೇಟ್ ನೈಟ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ!
ಸದ್ಯ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪೊಲೀಸರು ಹೆಚ್ವಿನ ತನಿಖೆ ನಡೆಸ್ತಿದ್ದಾರೆ.ಅಲ್ಲದೇ ಹೋಟೆಲ್ ಉಸ್ತುವಾರಿಗಳಿ ನೋಟಿಸ್ ನೀಡಿದ್ದಾರೆ .ಪಾರ್ಟಿ ನಡೆಸ್ತಿದ್ದವರು ಯಾರು..? ಡ್ದಗ್ಸ್ ಎಲ್ಲಿಂದ ಲಭ್ಯವಾಗ್ತಿತ್ತು ಅನ್ನೋ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಜೊತೆಗೆ ಹೋಟೆಲ್ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡ್ತಾ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ