ಸ್ಯಾಂಡಲ್​ವುಡ್​ನಲ್ಲೂ ಡ್ರಗ್​ ಮಾಫಿಯಾ: ಇಂದ್ರಜಿತ್​ ಲಂಕೇಶ್​ಗೆ ಭದ್ರತೆ ಕೊಡಲು ಸಿದ್ಧ ಎಂದ ಪೊಲೀಸ್​ ಇಲಾಖೆ..!

ಎನ್​ಸಿಬಿ ಅವರು ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಸದ್ಯ ಅವರು, ನಮ್ಮಿಂದ ಯಾವುದೇ ಮಾಹಿತಿ ಕೇಳಿಲ್ಲ. ಒಂದುವೇಳೆ ಯಾವುದೇ ಮಾಹಿತಿ ಕೇಳಿದರೂ ಕೊಡುತ್ತೇವೆ. ಪ್ರಸ್ತುತ ಅವರು, ಲಭ್ಯವಿರುವ ಮಾಹಿತಿಗಳ‌ ಆಧಾರದ ಮೇಲೆ ತನಿಖೆ ಮಾಡ್ತಿದ್ದಾರೆ' ಎಂದು ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ಪತ್ತೆಯಾಗಿದ್ದು, ಈ ಡ್ರಗ್​ ಮಾಫಿಯಾಗೆ ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳಿಗೆ ಲಿಂಕ್​ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಬಂಧನಕ್ಕೊಳಗಾಗಿರುವ ಆರೋಪಿಗಳು ಸ್ಯಾಂಡಲ್​ವುಡ್​ನಲ್ಲಿರುವ ನಟ, ನಟಿಯರು ಹಾಗೂ ಸಂಗೀತ ನಿರ್ದೇಶಕರಿಗೂ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. 

'ಈ ಪ್ರಕರಣದ ಕುರಿತಾಗಿ ಇಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಎನ್​ಸಿಬಿ ಅವರು ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಸದ್ಯ ಅವರು, ನಮ್ಮಿಂದ ಯಾವುದೇ ಮಾಹಿತಿ ಕೇಳಿಲ್ಲ. ಒಂದುವೇಳೆ ಯಾವುದೇ ಮಾಹಿತಿ ಕೇಳಿದರೂ ಕೊಡುತ್ತೇವೆ. ಪ್ರಸ್ತುತ ಅವರು, ಲಭ್ಯವಿರುವ ಮಾಹಿತಿಗಳ‌ ಆಧಾರದ ಮೇಲೆ ತನಿಖೆ ಮಾಡ್ತಿದ್ದಾರೆ' ಎಂದು ಹೇಳಿದ್ದಾರೆ.

IPS Officer Kamal Pant appointed as Bengaluru Police Commissioner Bhaskar Rao Transferred
ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್​


'ನಟ ನಟಿಯರು, ಸಂಗೀತಗಾರರಿಗೆ ಡ್ರಗ್ಸ್ ಲಿಂಕ್ ಇರುವ ಬಗ್ಗೆ ಎನ್​ಸಿಬಿ ತನಿಖೆ ನಡೆಸುತ್ತಿದೆ. ನಾವು ಈಗ ಮಧ್ಯಪ್ರವೇಶ ಮಾಡುವುದು ಸರಿಯಲ್ಲ. ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಯಾರೇ ಮಾಹಿತಿ ಕೊಟ್ಟರೂ ತೆಗೆದುಕೊಳ್ಳುತ್ತೇವೆ. ಇಂದ್ರಜಿತ್​ ಲಂಕೇಶ್​ ಹೇಳುತ್ತಿರುವ ವಿಷಯ ಮೊದಲು ಕೇಳಬೇಕು. ಅವರು ಯಾರ ಬಗ್ಗೆ ಮಾಹಿತಿ ನೀಡುತ್ತಾರೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೊದಲು ಪರಿಶೀಲನೆ ನಡೆಸಬೇಕು. ಅದಕ್ಕೆ ನಾವು ಸಿದ್ಧರಿದ್ದೇವೆ. ಅವರಿಗೆ ಈ ವಿಷಯದಲ್ಲಿ ಭದ್ರತೆ ನೀಡಲು ಸಿದ್ಧ' ಎಂದು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಹೇಳಿದ್ದಾರೆ.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ: ಕನ್ನಡಿಗರ ಸಹನೆ-ಸ್ವಾಭಿಮಾನ ಕೆಣಕಬೇಡಿ ಎಂದ ನಿಖಿಲ್​..!

ಪೊಲೀಸ್ ಆಯುಕ್ತ ಕಮಲ್​ ಪಂತ್ ಅವರ ಹೇಳಿಕೆಗೆ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. 'ಪೊಲೀಸ್ ಆಯುಕ್ತರ ತನಿಖೆಗೆ ಸಹಕರಿಸುತ್ತೇನೆ. ಭದ್ರತೆ ಕೊಡುವುದಾಗಿ ಹೇಳಿರುವುದು ಸಂತೋಷದ ವಿಷಯ. ಆದರೆ ಪೊಲೀಸ್ ಇಲಾಖೆ ನ್ಯಾಯ ಕೊಡಬೇಕು. ಚಿತ್ರರಂಗ ಸ್ವಚ್ಛ ಆಗಬೇಕು ಅನ್ನೋದು ನನ್ನ ಉದ್ದೇಶ. ಚಿತ್ರರಂಗಕ್ಕೆ ನನ್ನಿಂದ ಯಾವುದೇ ಧಕ್ಕೆ ಆಗಲ್ಲ' ಎಂದಿದ್ದಾರೆ.

Bangalore Police department is ready to give protection to indrajit lankesh in drugs mafia issue ae
ಇಂದ್ರಜಿತ್​ ಲಂಕೇಶ್​


'ಚಿತ್ರರಂಗದ ಮಂದಿ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದ್ದಾರೆ ಅಂದಾಗ ಫಿಲಂ ಚೇಂಬರ್ ಮಾತನಾಡಬೇಕಿತ್ತು. ಈ ಹಿಂದೆ ಹನಿಟ್ರ್ಯಾಪ್​ ಆರೋಪ ಸಹ ಕೇಳಿ ಬಂದಿತ್ತು. ಆಗಲೂ ಫಿಲಂ ಚೇಂಬರ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಉತ್ತರ ಕೊಟ್ಟಿದ್ದಾರೆ.'ಇಂದ್ರಜಿತ್ ಲಂಕೇಶ್ ಅವರ ಬಳಿ ಇರುವ ಮಾಹಿತಿ ಪಡೆಯಲು ಪೊಲೀಸ್​ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಅವರಿಂದ ಮಾಹಿತಿ ಪಡೆಯಲು ನೋಟಿಸ್​ ನೀಡಲಿದೆಯಂತೆ. ಇನ್ನು ಸಾರ್ವಜನಿಕರು ತಮ್ಮ ಬಳಿ ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಕುರಿತಾಗಿ ಯಾವುದೇ ಮಾಹಿತಿ ಇದ್ದರೂ 1098 ಟೋಲ್ ಪ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ' ಎಂದು ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
Published by:Anitha E
First published: