Tik Tok: ಬೆಂಗಳೂರು ಪೊಲೀಸರು ಇನ್ಮುಂದೆ ಟಿಕ್​ಟಾಕ್​​ನಲ್ಲೂ ಸಿಗ್ತಾರೆ!; ಜಾಗೃತಿ ಮೂಡಿಸಲು ಹೊಸ ಕ್ರಮ

ಈ ಮೊದಲು ಹಲವು ರಾಜ್ಯಗಳ ಪೊಲೀಸ್ ವಿಭಾಗಗಳು ಟಿಕ್‍ಟಾಕ್ ವೇದಿಕೆಯನ್ನು ಉತ್ತಮ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿವೆ. ಕೇರಳ, ಉತ್ತರಾಖಂಡ ಪೊಲೀಸರು ಈಗಾಗಲೇ ಟಿಕ್​ಟಾಕ್​ ಬಳಕೆ ಆರಂಭಿಸಿದ್ದಾರೆ. ಈಗ ಬೆಂಗಳೂರು ಕೂಡ ಈ ಸಾಲಿಗೆ ಸೇರ್ಪಡೆಯಾಗಿದೆ.

Rajesh Duggumane | news18-kannada
Updated:February 7, 2020, 12:07 PM IST
Tik Tok: ಬೆಂಗಳೂರು ಪೊಲೀಸರು ಇನ್ಮುಂದೆ ಟಿಕ್​ಟಾಕ್​​ನಲ್ಲೂ ಸಿಗ್ತಾರೆ!; ಜಾಗೃತಿ ಮೂಡಿಸಲು ಹೊಸ ಕ್ರಮ
ಭಾಸ್ಕರ್​ ರಾವ್​
  • Share this:
ಬೆಂಗಳೂರು (ಫೆ.7): ಸಾಮಾಜಿಕ ಜಾಲತಾಣಗಳಿಂದ ನಮಗೆ ಲಾಭವೂ ಇದೆ ನಷ್ಟವೂ ಇದೆ. ಆದರೆ, ಅದನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟ ವಿಚಾರ. ಅದೇ ರೀತಿ, ಟಿಕ್​ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಮಧ್ಯೆ ಟಿಕ್​ಟಾಕ್​ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ಪೊಲೀಸ್​ ಇಲಾಖೆ ಮುಂದಾಗಿದೆ.

ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರೇರಕ ವಿಡಿಯೋಗಳನ್ನು ಟಿಕ್‍ಟಾಕ್ ಮೂಲಕ ಹಂಚುವ ಗುರಿಯನ್ನು ಬೆಂಗಳೂರು ಪೊಲೀಸ್ ವಿಭಾಗವು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ವಿಭಾಗದ ವತಿಯಿಂದ ನಗರದಲ್ಲಿ ಆಯೋಜಿಸಲಾಗಿರುವ ಹಲವಾರು ಕಾರ್ಯಕ್ರಮಗಳ ಸಣ್ಣ ವಿಡಿಯೋಗಳನ್ನು ಟಿಕ್‍ಟಾಕ್‍ನಲ್ಲಿ ಅಪ್‍ಲೋಡ್ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಮೊದಲು ಹಲವು ರಾಜ್ಯಗಳ ಪೊಲೀಸ್ ವಿಭಾಗಗಳು ಟಿಕ್‍ಟಾಕ್ ವೇದಿಕೆಯನ್ನು ಉತ್ತಮ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿವೆ. ಕೇರಳ, ಉತ್ತರಾಖಂಡ ಪೊಲೀಸರು ಈಗಾಗಲೇ ಟಿಕ್​ಟಾಕ್​ ಬಳಕೆ ಆರಂಭಿಸಿದ್ದಾರೆ. ಈಗ ಬೆಂಗಳೂರು ಕೂಡ ಈ ಸಾಲಿಗೆ ಸೇರ್ಪಡೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ 7 ಜನ ಪೊಲೀಸ್​ ಆಯುಕ್ತರ ನೇಮಕ; ಯಾರು ಆ ಹೊಸ ಕಮೀಷನರ್​​ಗಳು?

ಈ ಕುರಿತು ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ “ಸಾಮಾಜಿಕ ಜಾಲತಾಣ ಬಳಸಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬಹುದು ಎಂಬುದರ ಬಗ್ಗೆ ಬೆಂಗಳೂರು ಪೊಲೀಸರಿಗೆ ವಿಶ್ವಾಸವಿದೆ. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ಜತೆ ಸಂವಹನ ಮಾಡುವಲ್ಲಿ ಬೆಂಗಳೂರು ಪೊಲೀಸ್ ಒಂದು ಹೆಜ್ಜೆ ಮುಂದಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರೇರಕವಾದ ವಿಡಿಯೋಗಳನ್ನು ಟಿಕ್‍ಟಾಕ್‍ನಲ್ಲಿ ಹಂಚುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯವಿದೆ,’’ ಎಂದರು.
First published: February 7, 2020, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading