ಕೆಜಿಎಫ್​ ಸಿನಿಮಾ ಹೊಗಳಿ ಪೇಚಿಗೆ ಸಿಲುಕಿದ ಬೆಂಗಳೂರು ಪೊಲೀಸರಿಂದ ಟ್ವೀಟ್​​ ಡಿಲಿಟ್​

ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಿರುವ ಪೊಲೀಸರು ಈ ರೀತಿಯ ರಕ್ತಸಿಕ್ತ ಕಥೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಹೇಗೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಈ ಪೋಸ್ಟ್​ ಅನ್ನು ಡಿಲಿಟ್​ ಮಾಡಲಾಗಿದೆ.

Seema.R | news18
Updated:December 26, 2018, 12:06 PM IST
ಕೆಜಿಎಫ್​ ಸಿನಿಮಾ ಹೊಗಳಿ ಪೇಚಿಗೆ ಸಿಲುಕಿದ ಬೆಂಗಳೂರು ಪೊಲೀಸರಿಂದ ಟ್ವೀಟ್​​ ಡಿಲಿಟ್​
ಪ್ರಾತಿನಿಧಿಕ ಚಿತ್ರ
  • News18
  • Last Updated: December 26, 2018, 12:06 PM IST
  • Share this:
ಬೆಂಗಳೂರು (ಡಿ.26):  ಕೆಜಿಎಫ್​ ಸಿನಿಮಾಗೆ ಈಗ ಎಲ್ಲೆಡೆ ಬಹುಪರಾಕ್​ ಕೇಳಿ ಬರುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ಬಿಡುಗಡೆಯಾದ ಐದು ಭಾಷೆಗಳಲ್ಲಿ ಜನರು ಚಿತ್ರವನ್ನು ಮೆಚ್ಚಿಕೊಂಡಿದ್ದು, ಈಗಾಗಲೇ ಚಿತ್ರ 100 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ಶಾರುಖ್​ ನಟನೆಯ ಜೀರೋ ಚಿತ್ರವನ್ನು ಹಿಂದಿಕ್ಕಿ ಮುನ್ನುಗುತ್ತಿರುವ ಚಿತ್ರವನ್ನು ಜನರು ಕೊಂಡಾಡುತ್ತಿದ್ದಾರೆ. ಚಿತ್ರದ ಅದ್ಬುತ ಮೇಕಿಂಗ್ ಸೇರಿದಂತೆ ನಿರ್ದೇಶನ, ಸಂಗೀತಕ್ಕೆ ಜನರು ಪ್ರಶಂಸೆ ಮಳೆ ಕರೆಯುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಡಿಸಿಎಂ ಪರಮೇಶ್ವರ್​ ಹಾಗೂ ಬೆಂಗಳೂರು ಸಿಟಿ ಪೊಲೀಸರು ಕೂಡ ಮೆಚ್ಚಿ ಟ್ವೀಟ್​ ಮಾಡಿದ್ದರು.

ಬೆಂಗಳೂರು ಪೊಲೀಸರು ಡಿಲಿಟ್​ ಮಾಡಿದ ಟ್ವೀಟ್​


ಚಿತ್ರದ ತಾಂತ್ರಿಕತೆ ಅದ್ಭುತವಾಗಿದ್ದರು ಅದರಲ್ಲಿ ಮುಂಬೈ ಭೂಗತ ಜಗತ್ತಿನ ಒಬ್ಬ ಕ್ರಿಮಿನಲ್​ ಕಥೆ ಇದೆ. ರಕ್ತಪಾತ, ಹೊಡೆದಾಟ ಬಡಿದಾಟಗಳು ಇವೆ. ಈ ಚಿತ್ರವನ್ನು ಹೊಗಳಿ ಬೆಂಗಳೂರು ಪೊಲೀಸರು ಟೀಕೆ ಮಾಡಿದಕ್ಕೆ ಮೆಚ್ಚಿಗೆ ಜೊತೆ ಟೀಕೆ ಕೂಡ ವ್ಯಕ್ತವಾಗುತ್ತಿದೆ.

ಸಮಾಜದ ಸ್ವಾಸ್ಥವನ್ನು ಕಾಪಾಡಬೇಕಿರುವ ಪೊಲೀಸರು ಈ ರೀತಿಯ ರಕ್ತಸಿಕ್ತ ಕಥೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇದು ದುಷ್ಪರಿಣಾಮ ಬೀರುತ್ತದೆ. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವುದರಲ್ಲಿ ತಪ್ಪಿಲ್ಲ. ಆದರೆ ಅದು ಬೆಂಗಳೂರು ಪೊಲೀಸರ ಅಫೀಶಿಯಲ್ ಕಥೆಯಿಂದ ಟ್ವೀಟ್​ ಆದರೆ ಸಮಾಜಕ್ಕೆ ರವಾನಿಸುವ ಸಂದೇಶ ಬೇರೆ ಎಂದು ಜನರು ಟೀಕಿಸಿದ್ದಾರೆ. ಈ ರೀತಿ ಪ್ರತಿಕ್ರಿಯೆ ವ್ಯಕ್ತವಾದ ಮೇಲೆ ಈ ಟ್ವೀಟ್​ ಅನ್ನು ಕೂಡ ಬೆಂಗಳೂರು ಪೊಲೀಸರು ತಮ್ಮ ಖಾತೆಯಿಂದ ಅಳಿಸಿ ಹಾಕಿದ್ದಾರೆ.

ಇದನ್ನು ಓದಿ: 'ಬಾಹುಬಲಿ 2' ದಾಖಲೆಯನ್ನು ಮುರಿಯಲಿದೆ 'ಕೆಜಿಎಫ್'​; ಎಲ್ಲೆಲ್ಲೂ ಅಣ್ತಮ್ಮಂದೇ ಹವಾ

ಅಲ್ಲದೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸಿಪಿ ಅಜಯ್​, ಈ ಟ್ವೀಟ್​ ಯಾರು ಮಾಡಿದರು ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ಧಾರೆ.
First published:December 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading