ರೈಲ್ವೆ ಇ-ಟಿಕೆಟ್ ವಂಚಕ ಗುಲಾಂ ಮುಸ್ತಾಫ ಪ್ರಕರಣ: ಎಟಿಎಸ್ ತನಿಖೆಗೆ ಆದೇಶ

ವಂಚಕರು ರೈಲ್ವೆ ವೆಬ್​ಸೈಟನ್ನು ಹ್ಯಾಕ್ ಮಾಡಿ ಅಲ್ಲಿಯ ಟಿಕೆಟ್ ಬುಕಿಂಗ್ ಸಾಫ್ಟ್​ವೇರನ್ನು ನಕಲು ಮಾಡಿ ಇ-ಟಿಕೆಟ್​ಗಳನ್ನು ಇವರು ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ಮೂಲಕ ರೈಲ್ವೆ ಇಲಾಖೆಗೆ ಸೇರಬೇಕಿದ್ದ ಕೋಟ್ಯಂತರ ಹಣವು ಈ ವಂಚಕರ ಪಾಲಾಗುತ್ತಿದ್ದುದು ಕಂಡುಬಂದಿದೆ.

ಗುಲಾಂ ಮುಸ್ತಾಫ

ಗುಲಾಂ ಮುಸ್ತಾಫ

  • News18
  • Last Updated :
  • Share this:
ಬೆಂಗಳೂರು(ಜ. 29): ರೈಲ್ವೆ ಇ-ಟಿಕೆಟ್ ದಂಧೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಗುಲಾಂ ಮುಸ್ತಾಫ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪ್ರಕರಣವನ್ನು ಉಗ್ರ ನಿಗ್ರಹ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಸಿಬಿಯ ಎಟಿಎಸ್ ವಿಭಾಗಕ್ಕೆ ಪ್ರಕರಣ ವರ್ಗಾವಣೆ ಮಾಡಿ ಹೆಚ್ಚಿನ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.

ಭಾರತೀಯ ರೈಲ್ವೆ ವೆಬ್​ಸೈಟ್ ಅನ್ನ ಹ್ಯಾಕ್ ಮಾಡಿ ಇ-ಟಿಕೆಟ್ ವಂಚನೆಯ ಮೂಲಕ ಕೋಟ್ಯಂತರ ಹಣವನ್ನು ಲಪಟಾಯಿಸುತ್ತಿರುವ ವ್ಯವಸ್ಥಿತ ಜಾಲವೊಂದನ್ನು ರೈಲ್ವೆ ರಕ್ಷಣಾ ದಳ(ಆರ್​ಪಿಎಫ್) ಇತ್ತೀಚೆಗೆ ಭೇದಿಸಿತ್ತು. ಹಮೀದ್ ಅಶ್ರಫ್ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ಧಾನೆ. ಉತ್ತರ ಪ್ರದೇಶ ಮೂಲದ ಈತ ಸದ್ಯಕ್ಕೆ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಈ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ಧಾರೆ. ಅವರಲ್ಲಿ ಗುಲಾಂ ಮುಸ್ತಾಫ ಕೂಡ ಒಬ್ಬ.

ವಂಚಕರು ರೈಲ್ವೆ ವೆಬ್​ಸೈಟನ್ನು ಹ್ಯಾಕ್ ಮಾಡಿ ಅಲ್ಲಿಯ ಟಿಕೆಟ್ ಬುಕಿಂಗ್ ಸಾಫ್ಟ್​ವೇರನ್ನು ನಕಲು ಮಾಡಿ ಇ-ಟಿಕೆಟ್​ಗಳನ್ನು ಇವರು ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ಮೂಲಕ ರೈಲ್ವೆ ಇಲಾಖೆಗೆ ಸೇರಬೇಕಿದ್ದ ಕೋಟ್ಯಂತರ ಹಣವು ಈ ವಂಚಕರ ಪಾಲಾಗುತ್ತಿದ್ದುದು ಕಂಡುಬಂದಿದೆ.

ಇದನ್ನೂ ಓದಿ: ಮ್ಯೂಸಿಕಲ್ ಚೇರ್​ನಂತಾಯ್ತು ಸಂಪುಟ ವಿಸ್ತರಣೆ ಆಟ: ಯಡಿಯೂರಪ್ಪ ವಿಲವಿಲ ಒದ್ದಾಟ

ಇ-ಟಿಕೆಟ್ ವಂಚನೆಯ ಸುಳಿವು ಸಿಕ್ಕ ನಂತರ ಯಶವಂಪುತರದ ರೈಲ್ವೆ ಅಧಿಕಾರಿಗಳು ಬೆಂಗಳೂರಿನಲ್ಲಿ ಹನುಮಂತರಾಜು ಎಂಬಾತನನ್ನು ಬಂಧಿಸಿದ್ದರು. ಈತನ ಮೂಲಕ ಗುಲಾಂ ಮುಸ್ತಾಫನ ಸುಳಿವು ಸಿಕ್ಕು ಆತನನ್ನು ಬಂಧಿಲಾಯಿತು. ಜಾರ್ಖಂಡ್ ಮೂಲದ 26 ವರ್ಷದ ಗುಲಾಂ ಮುಸ್ತಾಫ ಮೂಲತಃ ಸಾಫ್ಟ್​ವೇರ್ ಡೆವಲಪರ್. ಈತನ ಲ್ಯಾಪ್​ಟಾಪ್​ನಲ್ಲಿ ಹ್ಯಾಕಿಂಗ್ ಸಾಫ್ಟ್​ವೇರ್​ಗಳು, ಸರ್ಕಾರದ ಜಾಲತಾಣಗಳ ವಿವರ, 3 ಸಾವಿರ ಬ್ಯಾಂಕ್ ಖಾತೆಗಳ ವಿವರ, ಇಸ್ರೋ ಬಗೆಗಿನ ಕೆಲ ಸೂಕ್ಷ್ಮ ಮಾಹಿತಿ ಇತ್ಯಾದಿಗಳು ಪತ್ತೆಯಾಗಿದ್ದವು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಜೊತೆ ಈತ ಸಂಪರ್ಕದಲ್ಲಿದ್ದನೆಂಬುದೂ ಗೊತ್ತಾಗಿದೆ.

ಈತ ಸೈಬರ್ ಉಗ್ರ ಎಂಬ ಶಂಕೆ ಹಿನ್ನೆಲೆಯಲ್ಲಿ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈಗ ಇದು ಇನ್ನೂ ಗಂಭೀರ ಸ್ವರೂಪವೆನಿಸುವುದರಿಂದ ಎಟಿಸಿಗೆ ಪ್ರಕರಣ ವರ್ಗಾಯಿಸುವಂತೆ ಠಾಣಾಧಿಕಾರಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಸಿಸಿಬಿ ಎಟಿಸಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ಹೊರಿಸಿ ಆದೇಶ ಹೊರಡಿಸಿದ್ಧಾರೆ. ಸದ್ಯಕ್ಕೆ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿರುವ ಗುಲಾಂ ಮುಸ್ತಾಫನನ್ನು ಶೀಘ್ರದಲ್ಲೇ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: