ಫುಡ್​ ಡೆಲಿವರಿ ಸಮಯವನ್ನು 40 ನಿಮಿಷಕ್ಕೆ ಹೆಚ್ಚಿಸಿ, ಇಲ್ಲ ಕಂಬಿ ಎಣಿಸಲು ಸಿದ್ಧರಾಗಿ: ಸ್ವಿಗ್ಗಿ ಸಂಸ್ಥೆಯನ್ನು ಬೆಂಡೆತ್ತಿದ ಬೆಂಗಳೂರು ಕಮೀಷನರ್

ಸ್ವಿಗ್ಗಿ ಕಂಪೆನಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಯಾರಾದರು ಡೆಲಿವರಿ ಬಾಯ್​ಗಳ ನಿಯಮ ಉಲ್ಲಂಘನೆ ಮಾಡಿದ್ದು ನಿಮ್ಮ ಗೋಚರಕ್ಕೆ ಬಂದರೆ ದಯವಿಟ್ಟು 080-46866699 ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಟ್ವೀಟ್​ನಲ್ಲಿ ತಿಳಿಸಿದೆ.

ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್

ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್

 • Share this:
  ಬೆಂಗಳೂರು: ಆನ್​ಲೈನ್​ ಫುಡ್​ ಡೆಲಿವರಿ ಕಂಪೆನಿಗಳು ಗ್ರಾಹಕರಿಗಾಗಿ 30 ನಿಮಿಷದೊಳಗೆ ಆಹಾರವನ್ನು ತಲುಪಿಸುತ್ತಿದೆ. ಆಹಾರ ಸರಿಯಾದ ಸಮಯದೊಳಕ್ಕೆ ತಲುಪಿಸಲು ಡೆಲಿವರಿ ಬಾಯ್​ಗಳು ಇದಕ್ಕಾಗಿ ಹರ ಸಾಹಸ ಪಡುತ್ತಿದ್ದಾರೆ. ಟ್ರಾಫಿಕ್​ ನಿಯಮವನ್ನು ಪಾಲಿಸದೆ ಸಮಯಕ್ಕೆ ಸರಿಯಾಗಿ ಈ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಹಾಗಾಗಿ ಫುಡ್​ ಡೆಲಿವರಿ ಕಂಪೆನಿಗಳು ಡೆಲಿವರಿ ಬಾಯ್​ ಸಮಯವನ್ನು 30 ರಿಂದ 40 ನಿಮಿಷಕ್ಕೆ ಹೆಚ್ಚಿಸಬೇಕೆಂದು ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಟ್ವೀಟ್​ ಮಾಡಿದ್ದಾರೆ.  ಆನ್​ಲೈನ್​ ಫುಡ್​ ಡೆಲಿವರಿ ಕಂಪೆನಿಗಳು ಗ್ರಾಹಕರಿಗಾಗಿ 30 ನಿಮಿಷದೊಳಗೆ ಆಹಾರವನ್ನು ತಲುಪಿಸುತ್ತಿದೆ. 30 ನಿಮಿಷಕ್ಕಿಂತ ಹೆಚ್ಚಾದರೆ ಆಹಾರವನ್ನು ಫ್ರೀ ಆಗಿ ನೀಡುತ್ತಿದೆ. ಇದಕ್ಕಾಗಿ ಡೆಲಿವರಿ ಬಾಯ್​​ಗಳು ತಮ್ಮ ಜೀವವನ್ನು ಪಣಕ್ಕಿಟ್ಟು​ ಟ್ರಾಫಿಕ್​ ನಿಯಮವನ್ನು ಉಲ್ಲಂಫಿಸಿ 30 ನಿಮಿಷದೊಳಗೆ ಆಹಾರವನ್ನು ತಲುಪಿಸುತ್ತಿದ್ದಾರೆ.

  ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಟ್ವೀಟ್​ಗೆ ಟ್ವೀಟಿಗರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಹೌದು ನೀವು ಹೇಳೋದು ನಿಜ. ಕೇವಲ ಪಿಜ್ಜಾ ಮಾತ್ರವಲ್ಲ, ಇತರೇ ಆಹಾರ ಪೂರೈಕೆದಾರರದೂ ಇದೇ ಕಥೆ, ವ್ಯಥೆ‘ ಎಂದು ಟ್ವೀಟ್​ ಮಾಡಿದ್ದಾರೆ.

  ಸ್ವಿಗ್ಗಿ ಕಂಪೆನಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಕಾಳಜಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಯಾರಾದರು ಡೆಲಿವರಿ ಬಾಯ್​ಗಳ ನಿಯಮ ಉಲ್ಲಂಘನೆ ಮಾಡಿದ್ದು, ನಿಮ್ಮ ಗೋಚರಕ್ಕೆ ಬಂದರೆ ದಯವಿಟ್ಟು 080-46866699 ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಟ್ವೀಟ್​ನಲ್ಲಿ ತಿಳಿಸಿದೆ.

   

  ಈ ಟ್ವೀಟ್‍ನಿಂದ  ಸಿಟ್ಟಿಗೆದ್ದ ಭಾಸ್ಕರ್ ರಾವ್, ನಿಮ್ಮ ಕಿರಿಕ್‍ನಿಂದಾಗಿ ಡೆಲಿವರಿ ಬಾಯ್‍ಗಳು ನಿಯಮವನ್ನು ಉಲ್ಲಂಘಿಸಿ ಟ್ರಾಫಿಕ್ ಪೊಲೀಸರೊಂದಿಗೆ  ಬಿಟ್ಟು ಬಿಡಿ ಸರ್, ಇಲ್ಲದಿದ್ದರೆ, ನಮಗೆ ತೊಂದರೆಯಾಗುತ್ತೆ. ಸರಿಯಾದ ಸಮಯಕ್ಕೆ ಡೆಲಿವರಿ ಮಾಡಬೇಕು ಎಂದು ಕೇಳಿಕೊಳ್ತಾರೆ. ಸಿಕ್ಕಾಪಟ್ಟೆ ರಸ್ತೆ ನಿಯಮ ಉಲ್ಲಂಘನೆ  ಮಾಡುವುದು ನಿಮ್ಮ ಡೆಲಿವರಿ ಬಾಯ್ ಗಳು, ಯಾರಾದರೂ ಡೆಲಿವರಿ ಬಾಯ್‍ಗೆ ಆಕ್ಸಿಡೆಂಟ್ ಆಗಿ ಸಮಸ್ಯೆಯಾಗಬೇಕು. ಆಗ ನಿಮ್ಮ ಸ್ವಿಗ್ಗಿ ಮ್ಯಾನೇಜ್ ಮೆಂಟ್ ನವರು ಕಂಬಿ ಹಿಂದೆ ಇರಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

  ಇದನ್ನೂ ಓದಿ: 2018ರಲ್ಲಿ ಬೆಂಗಳೂರಲ್ಲಿ ಬಂಧಿತನಾಗಿದ್ದ ವ್ಯಕ್ತಿಯೇ ಮಂಗಳೂರಿನಲ್ಲಿ ಬಾಂಬ್ ಇಟ್ಟನಾ? ಚುರುಕುಗೊಂಡ ಪೊಲೀಸ್ ತನಿಖೆ

  ಇದನ್ನೂ ಓದಿ: ಆದ್ಯತೆ ಮೇರೆಗೆ ಅಭಿವೃದ್ಧಿ ಕೆಲಸ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಖಡಕ್ ಸೂಚನೆ
  First published: