HOME » NEWS » State » BANGALORE POLICE COLLECT 58 CRORE FINE FROM TRAFFIC RULES VIOLATION GVTV SESR

Traffic Fine: ಐದೇ ತಿಂಗಳಲ್ಲಿ ಬರೋಬ್ಬರಿ 58 ಕೋಟಿ ರೂ ದಂಡ ವಸೂಲಿ ಮಾಡಿದ ಸಂಚಾರಿ ಪೊಲೀಸ್ ಇಲಾಖೆ 

ಕೊರೋನಾ ಸೋಂಕಿನಿಂದಾಗಿ ನಗರದಲ್ಲಿ ಕೊಂಚ ಟ್ರಾಫಿಕ್​ ದಟ್ಟಣೆ ಕಡಿಮೆಯಾಗಿದ್ದು, ಅಪಘಾತ ಪ್ರಕರಣ ಗಣನೀಯವಾಗಿ ಇಳಿಕೆ ಕಂಡಿದೆ

news18-kannada
Updated:June 15, 2021, 6:34 PM IST
Traffic Fine: ಐದೇ ತಿಂಗಳಲ್ಲಿ ಬರೋಬ್ಬರಿ 58 ಕೋಟಿ ರೂ ದಂಡ ವಸೂಲಿ ಮಾಡಿದ ಸಂಚಾರಿ ಪೊಲೀಸ್ ಇಲಾಖೆ 
ಟ್ರಾಫಿಕ್ ಪೊಲೀಸ್
  • Share this:
ಬೆಂಗಳೂರು (ಜೂ. 15): ರಾಜ್ಯದಲ್ಲಿ ಲಾಕ್​ಡೌನ್​ ಜಾರಿ ಇದೆ. ಸರ್ಕಾರ ಸೇರಿದಂತೆ ಪೊಲೀಸ್​ ಇಲಾಖೆ ಕೋವಿಡ್​ ನಿಯಂತ್ರಣಕ್ಕೆ ಹರಸಾಹಸ ನಡೆಸುತ್ತಿದ್ದಾರೆ. ಈ ಹಿನ್ನಲೆ ಸಂಚಾರಿ ನಿಯಮ ಉಲ್ಲಂಘಿಸಿದರೂ ಪೊಲೀಸರಿಗೆ ಗೊತ್ತಾಗಲ್ಲ ಎಂದು ಅನೇಕ ಮಂದಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದ್ದಾರೆ. ಈ ರೀತಿ ಕಳೆದ ಐದು ತಿಂಗಳಿನಿಂದ  ನಿಯಮ ಉಲ್ಲಂಘಿಸಿದವರನ್ನು ಪತ್ತೆ ಹಚ್ಚಿದ ಪೊಲೀಸರು ಬರೋಬ್ಬರಿ 58 ಕೋಟಿ ದಂಡ ವಸೂಲಿ ಮಾಡಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಪೊಲೀಸರು ಇಲ್ಲದಿದ್ದರೂ ಸಿಸಿಟಿವಿಗಳಯ ಕಾರ್ಯಚಾರಣೆ ಮೂಲಕ ಸಿಗ್ನಲ್​ ಜಂಪ್​, ಹೆಲ್ಮೆಟ್​ ಇಲ್ಲದೇ ಪ್ರಯಾಣ, ಡ್ರೈವಿಂಗ್​ ವೇಳೆ ಫೋನಿನಲ್ಲಿ ಮಾತನಾಡಿದವರನ್ನು ಹುಡುಕಿ ಸರ್ಕಾರ ದಂಡ ಹಾಕಿದೆ. 

ಮೂರನೇ ಕಣ್ಣಿನ ಕಾರ್ಯಾಚರಣೆ

ಲಾಕ್​ಡೌನ್​ ಹಾಗೂ ಅದಕ್ಕಿಂತ ಮುಂಚೆ ಫೀಲ್ಡ್ ಟ್ರಾಫಿಕ್ ವೈಲೇಷನ್ ಡಿವೈಸ್ ನಾಲ್ಕು ಸಾವಿರಕ್ಕೂ ಹೆಚ್ಚಿದ್ದು, ಇದರ ಮೂಲಕ ದಂಡ ವಿಧಿಸಲಾಗಿದೆ.  ಡಿವೈಸ್ ನಲ್ಲಿ ಸಂಚಾರಿ ಉಲ್ಲಂಘನೆಯ ಒಂದು ಫೋಟೋ ಕ್ಲಿಕ್ ಮಾಡಿದರೆ ಕೇಂದ್ರ ಕಚೇರಿಗೆ ತಲುಪುತ್ತೆ ಲೊಕೇಷನ್ ಸಮೇತ ಬೈಕ್ ಸವಾರನಿಗೆ ದಂಡ ಬೀಳುತ್ತೆ. ಇದಷ್ಟೇ ಅಲ್ಲದೆ 1500 ಸಿಸಿ ಕ್ಯಾಮೆರಾಗಳಿದ್ದು, ಕಮಾಂಡ್ ಸೆಂಟರ್ ನಲ್ಲಿ ನಿಗಾವಹಿಸಲಾಗಿದೆ.. ಐದೇ ತಿಂಗಳಲ್ಲಿ  ಸಂಚಾರಿ ಪೊಲೀಸ್ ಇಲಾಖೆಯಿಂದ  58 ಕೋಟಿ 92 ಲಕ್ಷ ದಂಡದ ಹಣವನ್ನು ವಸೂಲಿ ಮಾಡಲಾಗಿದೆ. ಇನ್ನು ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ 45 ಕೋಟಿಗೂ ಹೆಚ್ಚು ಹಣ ಬಾಕಿ ಇದೆ.

ಇಳಿಕೆ ಕಂಡ ಅಪಘಾತ ಪ್ರಕರಣ

ಕೊರೋನಾ ಸೋಂಕಿನಿಂದಾಗಿ ನಗರದಲ್ಲಿ ಕೊಂಚ ಟ್ರಾಫಿಕ್​ ದಟ್ಟಣೆ ಕಡಿಮೆಯಾಗಿದ್ದು, ಅಪಘಾತ ಪ್ರಕರಣ ಗಣನೀಯವಾಗಿ ಇಳಿಕೆ ಕಂಡಿದೆ. ಮೇ ತಿಂಗಳಲ್ಲಿ 125 ಕೇಸ್ ದಾಖಲಾಗಿದ್ದರೆ, 27 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ: ಹುಬ್ಬಳ್ಳಿಯಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಟಯರ್ ಬ್ಲಾಸ್ಟ್: ಪೈಲಟ್ ಚಾಣಾಕ್ಷತನದಿಂದ ತಪ್ಪಿದ ಅನಾಹುತ!

ದಂಡ ಸಂಗ್ರಹಕ್ಕೆ ಕ್ರಮಇನ್ನು ಲಾಕ್ ಡೌನ್ ಸಮಯದಲ್ಲಿ ರಸ್ತೆಗಳು ಖಾಲಿಯಿದ್ದು, ಅಜಾಗರುಕತೆ ಹಾಗೂ ಅತಿವೇಗ ಚಾಲನೆಯಿಂದ ಅಪಘಾತಗಳು ನಡೆದಿವೆ . ಇದರ ಜೊತೆಗೆ ಮಳೆಗಾಲ ಪ್ರಾರಂಭವಾಗಿದ್ದು, ನಗರದ ಅನೇಕ ಕಡೆ ಇಂಗು ಗುಂಡಿಗಳಿದ್ದು, ನೀರು ಹೋಗದ ಪರಿಸ್ಥಿತಿ ಇದೆ.  ಅಂತಹ ಸ್ಥಳಗಳನ್ನ ಗುರುತಿಸಿ ಸಂಚಾರಿ ಪೊಲೀಸರು ಸ್ವಚ್ಛತ ಕ್ರಮಕ್ಕೆ ಮುಂದಾಗಿದ್ದಾರೆ. ಜೊತೆಗೆ ನಗರದಲ್ಲಿ ಬಹುತೇಕ ರಸ್ತೆಗಳ ಕಾಮಗಾರಿ ನಡೀತಿದ್ದು, ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಬಾಕಿ ಉಳಿದಿರುವ ದಂಡ ವಸೂಲಿಗೆ ಸಂಚಾರಿ ಪೊಲೀಸ್ ಇಲಾಖೆ ಮುಂದಾಗಿದೆ. ಮನೆ ಮನೆಗೆ ತೆರಳಿ ನೋಟೀಸ್ ಕೊಟ್ಟು ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಿದ್ದಾರೆ. ದಂಡ ಕಟ್ಟದೆ ಓಡಾಡುವ ಯಾವುದೇ ವಾಹನ ಇದ್ರೂ, ಪತ್ತೆಯಾದ್ರೆ ದಂಡ ಕಟ್ಟಿಸಿ ಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಅತಿ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಚಾಲಕರಿಗೂ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದಾರೆ.‌‌

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 15, 2021, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories