ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನು ನಂಬಿಸಿ ವಂಚನೆ; ಬೆಂಗಳೂರಲ್ಲಿ ಸಿಕ್ಕಿಬಿದ್ದ ಕೇರಳದ ಆರೋಪಿ

ಕೋರಮಂಗಲದಲ್ಲಿ ಸ್ಕೂಲ್ ಟೀಚರ್ ಗೆ, ಡೇಟಿಂಗ್ ಆ್ಯಪ್ ಮೂಲಕ ಸಂಪರ್ಕಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ದೊಡ್ಡ ಬ್ಯುಸಿನಸ್ ಮ್ಯಾನ್ ಎಂದು ನಂಬಿಸಿ ಹೋಟೆಲ್​ಗೆ ಕಾರ್​ನಲ್ಲಿ ಕರೆದೊಯ್ದು ನಂಬಿಸಿದ್ದ.

ಆರೋಪಿ ಮ್ಯಾಥ್ಯೂ

ಆರೋಪಿ ಮ್ಯಾಥ್ಯೂ

  • Share this:
ಬೆಂಗಳೂರು (ಜೂ. 19): ಮಾತಿನ ಮೂಲಕವೇ ಯುವತಿಯರು ಮತ್ತು ಗೆಳೆಯರನ್ನು ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಯನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಜೋ ಅಬ್ರಾಹಾಂ ಮ್ಯಾಥ್ಯೂ ಬಂಧಿತ ಆರೋಪಿಯಾಗಿದ್ದಾನೆ. ಕೇರಳದಿಂದ ಬಂದಿದ್ದ ಜೋ ಅಬ್ರಾಹಾಂ ಬಿಕಾಂ ಪದವೀಧರನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಪ್ರಾರಂಭಿಸಿದ್ದ. ದಿನ ಕಳೆದಂತೆ ಕುಟುಂಬವನ್ನು ಕರೆತಂದು ನಗರದಲ್ಲೇ ವಾಸವಾಗಿದ್ದ. ದಿನ ಕಳೆದಂತೆ ಐಷಾರಾಮಿ ಜೀವನಕ್ಕೆ ಸ್ನೇಹಿತರ ಬಳಿ ಬ್ಯುಸಿನಸ್ ಗೆ ಅಂತ ಲಕ್ಷ ಲಕ್ಷ ಹಣ ಪಡೆದುಕೊಳ್ಳುತ್ತಿದ್ದ. ಹಣ ಸಿಗುತ್ತಿದ್ದಂತೆ ವಾಪಾಸ್ ಕೊಡದೆ ಐಷಾರಾಮಿ ಕಾರು ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದ.

ಅಷ್ಟೇ ಅಲ್ಲದೆ, ಕಾರನ್ನು ತಾನೇ ಖರೀದಿ ಮಾಡುತ್ತೇನೆ ಎಂದು ಸ್ನೇಹಿತರ ಬಳಿಯೇ ಕಡಿಮೆ ಹಣಕ್ಕೆ ತೆಗೆದುಕೊಳ್ಳುತ್ತಿದ್ದ. ಬಳಿಕ ಹಣ ನೀಡದೆ ಕಾರು ವಾಪಾಸ್ ನೀಡದೆ ಸತಾಯಿಸುತ್ತಿದ್ದ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರನ್ನು ಸಂಪರ್ಕ ಮಾಡುತ್ತಿದ್ದ. ಹೆಚ್ಚಾಗಿ ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಯುವತಿಯರನ್ನು ಸಂಪರ್ಕಿಸಿ ಪಬ್, ಬಾರ್​ಗೆ ಕರೆದೊಯ್ಯುತ್ತಿದ್ದ. ಮದುವೆ ಆಗುತ್ತೇನೆ ಎಂದು ನಂಬಿಸಿ, ಲಕ್ಷಗಟ್ಟಲೆ ಹಣ ಪಡೆದು ವಂಚಿಸುತ್ತಿದ್ದ. ಹೀಗೆ ಕೋರಮಂಗಲದಲ್ಲಿ ಸ್ಕೂಲ್ ಟೀಚರ್ ಗೆ, ಡೇಟಿಂಗ್ ಆ್ಯಪ್ ಮೂಲಕ ಸಂಪರ್ಕಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ದೊಡ್ಡ ಬ್ಯುಸಿನೆಸ್ ಮ್ಯಾನ್ ಎಂದು ನಂಬಿಸಿ ಹೋಟೆಲ್​ಗೆ ಕಾರ್​ನಲ್ಲಿ ಕರೆದೊಯ್ದು ನಂಬಿಸಿದ್ದ.

ಇದನ್ನೂ ಓದಿ: ಮಾಸ್ಕ್ ಧರಿಸದೆ ವಿಧಾನಸೌಧಕ್ಕೆ ಬಂದ ಪ್ರತಾಪ್ ಸಿಂಹ; ಸಂಸದನಿಗೂ ನೋ ಎಂಟ್ರಿ ಎಂದ ಅಧಿಕಾರಿಗಳು!

ಬಳಿಕ, ಮದುವೆಯಾಗೋದಾಗಿ ಹೇಳಿ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಮಾಡಿದ್ದ. ಇದಾದ ಮೇಲೆ ಬ್ಯುಸಿನೆಸ್​ನ್ಲಲಿ ನಷ್ಟವಾಗಿದೆ, ತಂಗಿ ಮದುವೆ ಆಗಬೇಕು ಅಂತ ಹಂತ ಹಂತವಾಗಿ ಆಕೆಯಿಂದ 34 ಲಕ್ಷ ರೂ. ಹಣ ಪಡೆದಿದ್ದ. ಇದೇ ರೀತಿ ತಲಘಟ್ಟಪುರದಲ್ಲಿ ಕಾರು ತೆಗೆದುಕೊಂಡು ಹಣ ಕೊಡದೆ ವಂಚಿಸಿದ್ದ. ವಂಚನೆ ಹಿನ್ನೆಲೆ ಕುಟುಂಬಸ್ಥರೇ ಮನೆಯಿಂದ ಹೊರ ಹಾಕಿದರೂ ಅಭ್ಯಾಸ ಬಿಟ್ಟಿರಲಿಲ್ಲ. ನಿರರ್ಗಳವಾಗಿ ಮಾತನಾಡುತ್ತಿದ್ದ ಆತ ಇಂಗ್ಲಿಷ್​ನಿಂದ ಯುವತಿಯರನ್ನು ಬಲೆಗೆ ಬೀಳಿಸುತ್ತಿದ್ದ. ಸದ್ಯ ಆರೋಪಿ ಮ್ಯಾಥ್ಯೂನನ್ನು ಬಂಧಿಸಲಾಗಿದ್ದು, ಆರೋಪಿಯ ಬಂಧನದಿಂದ ಒಟ್ಟು ಹತ್ತು ಪ್ರಕರಣಗಳು ಪತ್ತೆಯಾಗಿವೆ. ಕೇರಳದಲ್ಲಿ ಎರಡು ವಂಚನೆ ಪ್ರಕರಣಗಳು ಸಹ ಬೆಳಕಿಗೆ ಬಂದಿವೆ.
First published: