Police shootout: ಮೀಸೆ ಚಿಗುರದ ವಯಸ್ಸಲ್ಲೇ ರೌಡಿ ಶೀಟರ್ ಪಟ್ಟ ಪಡೆದ ಸ್ಲಂ ಭರತ ಶಿಷ್ಯ

ಇನ್ನು ಮೀಸೆ ಚಿಗುರದ ಈ 21ರ ಯುವಕನ ಮೇಲೆ ಕೊಲೆ, ಡಕಾಯಿತಿ ಸೇರಿದಂತೆ 10 ಪ್ರಕರಣಗಳಿವೆ.

ಆರೋಪಿ ಸಂತೋಷ್​

ಆರೋಪಿ ಸಂತೋಷ್​

  • Share this:
ಬೆಂಗಳೂರು (ಫೆ. 10): ಕುಖ್ಯಾತ ರೌಡಿ ಶೀಟರ್​ ಸ್ಲಂ ಭರತ ಸಾವನ್ನಪ್ಪಿದರೂ ಆತನ ಶಿಷ್ಯ ವರ್ಗದವರಿಂದ ಅನೇಕ ಡಾಕಾಯತಿ, ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಅದರಲ್ಲಿಯೂ ಬಿಎಸ್​ಪಿ ಮುಖಂಡನಾಗಿದ್ದ ಶ್ರೀನಿವಾಸ್​ ಅಲಿಯಾಸ್​ ಕರಿಸೀನಾನನ್ನು ಹಾಡು ಹಗಲೇ ಆತನ ಶಿಷ್ಯಂದಿರೇ ಹತ್ಯೆ ಮಾಡಿದ್ದರು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು. ಸ್ಲಂ ಭರತನ ಸಾವಿಗೆ  ಶ್ರೀನಿವಾಸ್​ ಕಾರಣನಾದ ಹಿನ್ನಲೆ ಆತನ ಶಿಷ್ಯ ವರ್ಗ ದ್ವೇಷದ ಪ್ರತೀಕಾರಕ್ಕೆ ಕೊಲೆಗೆ ಯೋಜನೆ ರೂಪಿಸಿತ್ತು. ಹಾಡು ಹಗಲೇ  ನಡೆದ ಈ ಬರ್ಬರ ಹಲ್ಲೆ ಸಿಲಿಕಾನ್​ ಸಿಟಿಯ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಹತ್ಯೆ ಬಳಿಕ ಈ ಕೊಲೆ ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಅದರಲ್ಲಿ ಪ್ರಮುಖ ಆರೋಪಿಯಾಗಿದ್ದವನೇ ಈ ಸಂತೋಷ್​ ಅಲಿಯಾಸ್​ ಇಲ್ಲಿಕುಟ್ಟಿ. ಇನ್ನು ಮೀಸೆ ಚಿಗುರದ ಈ 21ರ ಯುವಕನ ಮೇಲೆ ಕೊಲೆ, ಡಕಾಯಿತಿ ಸೇರಿದಂತೆ 10 ಪ್ರಕರಣಗಳಿವೆ. ಈ ಸಂತೋಷನಿಗಾಗಿ ತೀವ್ರ ಶೋಧ ನಡೆಸಿದ್ದ ಪೊಲೀಸರಿಗೆ ಇಂದು ಇವನ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆ ಬಂಧನಕ್ಕೆ ಪೊಲೀಸರು ತೆರಳಿದ್ದರು.

ಕಳೆದ ಒಂದು ತಿಂಗಳಿಂದ ಹುಡುಕುತ್ತಿದ್ದ ಪೊಲೀಸರಿಗೆ ಬೆಳಗಿನ ಜಾವ ಜಿಕೆಡಬ್ಲೂ ಲೇಔಟ್ ಬಳಿ ಈತ ಅಡಗಿರುವುದಾಗಿ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪಿಎಸ್ ಐ ಹನುಮಂತ್ ಹಾದಿಮನಿ ಮತ್ತು ತಂಡ ಈತನ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಸಂತೋಷನನ್ನು ಪೊಲೀಸರು ಹಿಡಿಯಲು ಮುಂದಾಗುತ್ತಿದ್ದಂತೆ, ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಎಸ್ಕೇಪ್​ ಆಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತನನ್ನು ಶರಣಾಗುವಂತೆ ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಜಾತ್ರೆ, ಉತ್ಸವಕ್ಕೆ ಅವಕಾಶ; ದೇವಾಲಯಗಳಲ್ಲಿ ಅನ್ನದಾಸೋಹಕ್ಕೂ ಅನುಮತಿ ನೀಡಿದ ಸರ್ಕಾರ

ಈ ವೇಳೆ ಸ್ವಯಂ ರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ಗಾಯಗೊಂಡ ಮುಖ್ಯಪೇದೆ ಸಿದ್ದರಾಮು ಮತ್ತು ಗಾಯಾಳು ಆರೋಪಿ ಸಂತೋಷ್ ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಲ್ಲದೆ ಸ್ಲಂ ಭರತನ ಕೆಲ ಶಿಷ್ಯಂದಿರು ಸಹ ಪ್ರಕರಣದಲ್ಲಿರುವ ಬಗ್ಗೆ ಮಾಹಿತಿ ಇದ್ದು, ಅವರ ಹುಡುಕಾಟ ನಡೆಸಲಾಗುತ್ತಿದೆ.

ಇನ್ನು ಕೊಲೆಯಾದ ಬಿಎಸ್ ಪಿ ಮುಖಂಡ ಶ್ರೀನಿವಾಸ್ ಪೊಲೀಸ್ ಇನ್ಫಾರ್ಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಆತನೇ ಸ್ಲಂ ಭರತನ ಕಾರ್ಯಚಾರಣೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಇದರಿಂದ ಶ್ರೀನಿವಾಸ್ ಸ್ಲಂ ಭರತನ ತಮ್ಮಂದಿರು ತಮ್ಮ ಶಿಷ್ಯರು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದರು.
Published by:Seema R
First published: