ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ; ಗಾಂಜಾ, ಡ್ರಗ್ಸ್, ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ

ಮೊಹಮದ್ ಹಾಗೂ ಅರ್ಬಾಜ್ ಎಂಬಾತನನ್ನು‌ ಬಂಧನ‌ ಮಾಡಿದ್ದು, ಕೋರಮಂಗಲ ಸುತ್ತಮುತ್ತ ಕಳ್ಳತನ ಮಾಡಿದ್ದ 25 ಮೊಬೈಲ್ ಫೋನ್​​​ಗಳನ್ನು ಜಪ್ತಿ ಮಾಡಿದ್ದಾರೆ.

news18-kannada
Updated:October 8, 2020, 3:37 PM IST
ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ; ಗಾಂಜಾ, ಡ್ರಗ್ಸ್, ಬೈಕ್ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ
ಸಾಂರ್ಭಿಕ ಚಿತ್ರ
  • Share this:
ಬೆಂಗಳೂರು(ಅ.08): ನಗರದಲ್ಲಿ ಡ್ರಗ್ಸ್ ಕೇಸ್ ಹೆಚ್ಚಾಗುತ್ತಿರುವ ಹಿನ್ನಲೆ ಈಗ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ‌. ಅದರಂತೆ ಆಗ್ನೇಯ ವಿಭಾಗದ ಸುದ್ದುಗುಂಟೆಪಾಳ್ಯ ಪೊಲೀಸರು ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸಿಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಬಟ್ಟೆ ವ್ಯಾಪಾರ ಮಾಡ್ತಾ ಆಶ್ವಿನ್ ಹಾಗೂ ಪರ್ವೇಶ್​​ನನ್ನು ಬಂಧನ ಮಾಡಿದ್ದಾರೆ.  ಬಂಧಿತರಿಂದ 30 ಕೆ.ಜಿ ಗಾಂಜಾ ಹಾಗೂ 19 ಎಲ್ ಎಸ್ ಡಿ ಸ್ಟ್ರಿಪ್ ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳು ಡ್ರಗ್ಸ್​​​ನ್ನು ಮಂಗಳೂರಿನಿಂದ ಬೆಂಗಳೂರಿಗೆ ತಂದು ಮಾರಾಟ ಮಾಡ್ತಿದ್ದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಇಂಜಿನಿಯರ್​​ಗಳಿಗೆ ಡ್ರಗ್ಸ್​​ ಮಾರಾಟ ಮಾಡ್ತಿದ್ದಾಗಿಯೂ ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಇನ್ನು ಬಂಧಿತರು ಗುರಪ್ಪನಪಾಳ್ಯದ ಮನೆಯೊಂದರಲ್ಲಿ ಗಾಂಜಾ ಶೇಖರಿಸಿ ಮಾರಾಟ ಮಾಡುತ್ತಿದ್ದರು  ಅಂತ ಸುದ್ದಿಗೋಷ್ಟಿಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹೇಳಿದ್ದಾರೆ.

ಇದರ ಜೊತೆಗೆ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧನ ಮಾಡಿದ್ದಾರೆ. ಮೊಹಮದ್ ಹಾಗೂ ಅರ್ಬಾಜ್ ಎಂಬಾತನನ್ನು‌ ಬಂಧನ‌ ಮಾಡಿದ್ದು, ಕೋರಮಂಗಲ ಸುತ್ತಮುತ್ತ ಕಳ್ಳತನ ಮಾಡಿದ್ದ 25 ಮೊಬೈಲ್ ಫೋನ್​​​ಗಳನ್ನು ಜಪ್ತಿ ಮಾಡಿದ್ದಾರೆ.

ಆರ್.ಆರ್​.ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ಗೆಲ್ಲಲು ಈಗಾಗಲೇ ತಂತ್ರಗಾರಿಗೆ ಸಿದ್ದವಾಗಿದೆ; ಡಿಕೆ ಶಿವಕುಮಾರ್

ಬೈಕ್ ನಲ್ಲಿ ಬರೋರು, ನಡೆದುಕೊಂಡು ಹೋಗೋರೆ ಇವರ ಟಾರ್ಗೆಟ್ ಆಗಿದ್ದು ಮೊಬೈಲ್ ಕಳ್ಳತನ ಜೊತೆಗೆ ಬೈಕ್ ಕಳ್ಳತನವನ್ನೂ ಸಹ ಈ ಆರೋಪಿಗಳು ಮಾಡುತ್ತಿದ್ದರು. ಬಂಧಿತರ ಮೇಲೆ ಡಿಜೆ ಹಳ್ಳಿ, ಸಂಜಯ್ ನಗರ, ಹಲಸೂರು ಗೇಟ್ ಹಾಗೂ ಕೋಲಾರದಲ್ಲಿ ಪ್ರಕರಣ ದಾಖಲಾಗಿದ್ದು, ಮಡಿವಾಳ ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ ಆರೋಪಿಗಳ ಬಂಧನ ಆಗಿದೆ.

ಇದರ ಜೊತೆಗೆ ಎಚ್ ಎಸ್ ಆರ್ ಲೇ ಔಟ್ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ಮನೆಕಳುವು, ಸರಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಮಾಡ್ತಿದ್ದ ಆರೋಪಿ ಕಾರ್ತಿಕ್ ನನ್ನು ಬಂಧನ ಮಾಡಿದ್ದು, ಬಂಧಿತನಿಂದ 30 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಬಂಧಿತನ ಮೇಲೆ ನಗರದಲ್ಲಿ ದಾಖಲಾಗಿದ್ದ ಒಟ್ಟು 16 ಕೇಸ್ ಗಳನ್ನು ಪತ್ತೆಮಾಡಿದ್ದು, ಮತ್ತೊಬ್ಬ ಆರೋಪಿ ಸೋಮಸುಂದರ್ ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
Published by: Latha CG
First published: October 8, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading