ಕೊರೊನಾ (Covid 19) ಸಂಕಷ್ಟದ ಬಳಿಕ ಮೊದಲ ಬಾರಿಗೆ ಯಾವುದೇ ನಿರ್ಬಂಧನೆಗಳು ಇಲ್ಲದೇ ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು (Bengaluru) ಸಿದ್ಧವಾಗುತ್ತಿದೆ. ಪ್ರತಿ ವರ್ಷ ಹೊಸ ವರ್ಷಾಚರಣೆಯ ಸಂಭ್ರಮಾಚರಣೆಗಳು (New Year Celebrations) ಅದ್ದೂರಿಯಾಗಿ ನಡೆಯುತ್ತದೆ. ಆದರೆ ಕೊರೊನಾ ಕಾರಣದಿಂದ ಕಳೆದ ಕೆಲ ವರ್ಷಗಳಿಂದ ಈ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿತ್ತು. ವಿಶ್ವದಾದ್ಯಂತ ನಡೆಯುವ ಈ ಆಚರಣೆಗಳನ್ನು ನಮ್ಮ ದೇಶದಲ್ಲೂ ಅದ್ದೂರಿಯಾಗಿ ನಡೆಸಲಾಗುತ್ತದೆ. ಆದರೆ ಹೊಸ ವರ್ಷದ ಸಂಭ್ರಮಾಚರಣೆಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಡ್ರಗ್ ಪೆಡ್ಲರ್ಗಳು ಈಗಾಗಲೇ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಪೊಲೀಸರು ನೂತನ ಸಂವತ್ಸರದಲ್ಲಿ ಹೊಸದೊಂದು ದಾಖಲೆ ಬರೆಯಲು ಸಿದ್ಧರಾಗಿದ್ದರಂತೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯಿಂದ ಖಡಕ್ ಸೂಚನೆ
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರು ಎಲ್ಲಾ ಪೊಲೀಸ್ ಸಿಬ್ಬಂದಿಗೂ ಖಡಕ್ ಸೂಚನೆ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಪೊಲೀಸರು ಸುಮಾರು 5,644 ಡ್ರಗ್ ಪೆಡ್ಲರ್ಗಳ ಮೇಲೆ ಕಣ್ಣೀಟ್ಟಿದ್ದು, ಇದರಲ್ಲಿ 200ಕ್ಕೂ ಹೆಚ್ಚು ಮಂದಿ ಡ್ರಗ್ ಪೆಡ್ಲರ್ಗಳು ವಿದೇಶಿ ಪ್ರಜೆಗಳಿದ್ದಾರೆ.
ಈಗಾಗಲೇ ಇವರೆಲ್ಲರನ್ನೂ ಕಳೆದ ವರ್ಷವೇ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಆದರೆ ಬಂಧಿತ ಆರೋಪಿಗಳಲ್ಲಿ ಕೆಲವರು ಜಾಮೀನು ಪಡೆದುಕೊಂಡು ಹೊರಕ್ಕೆ ಬಂದಿದ್ದು, ಈಗ ಹೊರಗಡೆ ಸುತ್ತಾಡಿಕೊಂಡಿರುವ ಪೆಡ್ಲರ್ಗಳ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣೀಡುವಂತೆ ಕಮಿಷನರ್ ಸೂಚನೆ ನೀಡಿದ್ದಾರಂತೆ.
ಇದನ್ನೂ ಓದಿ: Bangalore Famous Temple: ಬೆಂಗಳೂರಿನ ಐತಿಹಾಸಿಕ ದೇಗುಲಗಳಿವು; ಮಿಸ್ ಮಾಡ್ದೆ ಒಮ್ಮೆ ಭೇಟಿ ನೀಡಿ
ಹೊಸ ವರ್ಷದ ಸಂಭ್ರಮಾಚರಣೆಗೆ ಎಷ್ಟು ಅರ್ಜಿ ಬಂದಿದೆ ಗೊತ್ತಾ?
ಈಗಾಗಲೇ ಹೊಸ ವರ್ಷದ ಸಂಭ್ರಮಾಚರಣೆಗೆ ಬೆಂಗಳೂರು ಮಂದಿ ಸಿದ್ಧತೆ ನಡೆಸಿದ್ದಾರೆ. ಹೊಸ ವರ್ಷದ ಆಚರಣೆಗೆ ನಗರದಲ್ಲಿ ಈಗಾಗಲೇ 1,500ಕ್ಕೂ ಅಧಿಕ ಮನವಿ ಪತ್ರಗಳು ಪೊಲೀಸ್ ಇಲಾಖೆಗೆ ಬಂದಿದೆ. ಪೊಲೀಸರ ಮಾಹಿತಿ ಅನ್ವಯ ನಗರದ ವಿವಿಧೆಡೆ ಸುಮಾರು 3,000 ಹೆಚ್ಚು ಕಡೆ ಸೆಲೆಬ್ರೇಶನ್ ನಡೆಯಲಿದೆಯಂತೆ. 2018ರಲ್ಲಿ ಸುಮಾರು 1,800 ಕಡೆ ಸಂಭ್ರಮಾಚರಣೆ ನಡೆಸಲಾಗಿತ್ತು. ಈ ಸಂಖ್ಯೆ ಈ ಬಾರಿ ಇನ್ನೂ ಹೆಚ್ಚುವ ಸಾಧ್ಯತೆ ಇರುವ ಕಾರಣ ಪೊಲೀಸರು ಸಖತ್ ಅಲರ್ಟ್ ಆಗಿದ್ದಾರೆ.
ಹೆಚ್ಚು ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವುದು ಪೊಲೀಸರಿಗೆ ಬಿಗ್ ಟಾಸ್ಕ್ಅನ್ನು ನೀಡಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಡ್ರಗ್ಸ್ ಸೇವನೆ ಆಗಲೇಬಾರದಂತೆ ಅಂತ ಪೊಲೀಸರು ಹದ್ದಿನ ಕಣ್ಣೀಡಲಿದ್ದಾರೆ. ಸಂಭ್ರಮಾಚರಣೆ ನಡೆಯುವ ಸ್ಥಳದಲ್ಲಿ ಪೊಲೀಸರು ನಿಯೋಜನೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಫ್ತಿಯಲ್ಲಿಯೂ ಪೊಲೀಸರು ಕಾರ್ಯನಿರ್ವಹಿಸಲಿದ್ದರಂತೆ.
ಹೇಗಿರುತ್ತೆ ಗೊತ್ತಾ ಪೊಲೀಸ್ ಕಣ್ಗಾವಲು?
ಹೊಸ ವರ್ಷಕ್ಕೆ ಸಜ್ಜಾಗುತ್ತಿರುವ ಸಿಲಿಕಾನ್ ಸಿಟಿ ಮೇಲೆ ಬೆಂಗಳೂರು ಪೊಲೀಸರು ಮೇಲೆ ಕಣ್ಗಾವಲು ಇಡಲು ಸಿದ್ಧತೆ ನಡೆಸಿದ್ದಾರೆ. ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಹೊಸ ವರ್ಷಕ್ಕೆ ಮಾರ್ಷಲ್ಸ್ಗಳು ಫೀಲ್ಡಿಗೆ ಇಳಿಯಲಿದ್ದು, ಬಿಬಿಎಂಪಿ ಮಾರ್ಷಲ್ ಗಳಿಗೆ ಈ ವರ್ಷ ಹೊಸ ಜವಾಬ್ದಾರಿ ನೀಡಲಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾರುವ ಕೆಲಸ ಮಾಡಿದ್ದ ಮಾರ್ಷಲ್ಗಳು ಈ ವರ್ಷ ಹೊಸ ವರ್ಷಾಚರಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಒಂದು ಕಡೆ ನಗರಕ್ಕೆ ಖಾಕಿ ಕಣ್ಗಾವಲು ಹಾಕಿದ್ದರೆ, ಮತ್ತೊಂದೆಡೆ ಈ ಬಾರಿ ಬಿಬಿಎಂಪಿ ಮಾರ್ಷಲ್ ಕಣ್ಗಾವಲು ಹಾಕಲಿದ್ದಾರೆ. ಆ ಮೂಲಕ 2018ರಲ್ಲಿ ನಡೆದ ಅಹಿತಕರ ಘಟನೆ ಮರುಕಳಿಸದಂತೆ ಬಿಬಿಎಂಪಿ ಕಡೆಯಿಂದಲೂ ಪ್ರಯತ್ನ ಮಾಡಲಾಗುತ್ತಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಮಾರ್ಷಲ್ ಗಳನ್ನು ನಿಯೋಜಿಸಲು ಬಿಬಿಎಂಪಿ ಮುಂದಾಗಿದೆ ಎಂದು ಬಿಬಿಎಂಪಿ ಸ್ಪೆಷಲ್ ಕಮಿಷನರ್ ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru: ಕೋಳಿ ಕೂಗೋದರಿಂದ ನಿದ್ದೆ ಬರ್ತಿಲ್ವಂತೆ; ಬೆಂಗಳೂರು ಪೊಲೀಸರಿಗೆ ಬಂತು ವಿಶೇಷ ದೂರು
ಮಾರ್ಷಲ್ಸ್ ಕಣ್ಗಾವಲು
*ಈ ಬಾರಿ ನ್ಯೂ ಇಯರ್ ಸೆಲೆಬ್ರೇಶನ್ ಸಮಯದಲ್ಲಿ ಪಾಲಿಕೆಯಿಂದ ಮಾರ್ಷಲ್ಸ್ ನಿಯೋಜನೆ
*ಮುಖ್ಯವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಹೊಸವರ್ಷದ ರಾತ್ರಿ ಮಾರ್ಷಲ್ಸ್ ಕೆಲಸ
*ಕುಡಿದ ಮತ್ತಿನಲ್ಲಿ ಪಬ್, ಬಾರ್ ಗಳಿಂದ ಹೊರ ಬರುವ ಜನರಿಗೆ ಗೈಡ್ ಮಾಡಲಿರುವ ಮಾರ್ಷಲ್ಸ್
*ಮಹಿಳೆಯರ ಸುರಕ್ಷಿತೆ ದೃಷ್ಟಿಯಿಂದ ಲೇಡಿ ಮಾರ್ಷಲ್ಸ್ ಕೂಡ ನೇಮಕ
*ಪಾನಮತ್ತಾಗಿ ಕಂಡಕಂಡಲ್ಲಿ ಮಧ್ಯದ ಬಾಟಲಿ, ತ್ಯಾಜ್ಯ ಎಸೆಯದಂತೆ ಎಚ್ಚರಿಸಲಿರುವ ಮಾರ್ಷಲ್ಸ್
*ಪಬ್, ಬಾರ್ ನಿಂದ ಹೊರ ಬರುವ ಮಹಿಳೆಯರಿಗೆ ಸಹಕಾರಿಯಾಗುವಂತೆ ಮಾರ್ಷಲ್ಸ್ ನಿಯೋಜನೆ
*ನ್ಯೂ ಇಯರ್ ಮೂಡ್ ನಲ್ಲಿರುವ ಜನರ ಜೊತೆಗೆ ಹೇಗೆ ವರ್ತಿಸಬೇಕೆಂದು ಮಾರ್ಷಲ್ಸ್ ಗೆ ತರಬೇತಿ
*ಫೀಲ್ಡ್ ನಲ್ಲಿ ಪೊಲೀಸರ ಜೊತೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡಲು ಸೂಚನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ